ವೇದರಾಜ ಎನ್ ಕೆ
ಜೂನ್ 21, ಕೇಂದ್ರ ಸರಕಾರದ ಆರೋಗ್ಯ ಮಂತ್ರಾಲಯದ ಹೇಳಿಕೆಯ ಪ್ರಕಾರ “ಕೊವಿಡ್-19 ಲಸಿಕೀಕರಣದ ಸಾರ್ವತ್ರೀಕರಣದ ಹೊಸ ಘಟ್ಟ” ಆರಂಭವಾದ ದಿನ, 82,70,212 ಡೋಸ್‌ಗಳನ್ನು ನೀಡಿ ಹೊಸ ದಾಖಲೆ ನಿರ್ಮಾಣವಾಗಿದೆ.
“ಪ್ರಧಾನ ಮಂತ್ರಿ ಮೋದಿಯವರಿಗೆ ಜಗತ್ತಿನ ಅತಿ ದೊಡ್ಡ ಉಚಿತ ಲಸಿಕೆ ಅಭಿಯಾನ ಆರಂಭಿಸಿದ್ದಕ್ಕೆ ಧನ್ಯವಾದಗಳು”ಎಂಬ ಪೋಸ್ಟರುಗಳು ಮತ್ತು ಫಲಕಗಳ ಮೂಲಕ ಇದನ್ನು ಸಂಭ್ರಮಿಸಲಾಗಿದೆ. ಹೀಗೆ ಸಂಭ್ರಮಿಸಬೇಕು ಎಂದು ಯುಜಿಸಿ (ವಿಶ್ವವಿದ್ಯಾಲಯ ಅನುದಾನ ಅಯೋಗ)ದ ಅಧ್ಯಕ್ಷರು ಕೂಡ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೂ ಸುತ್ತೋಲೆ ಕಳಿಸಿದ್ದರು ಎಂದೂ ವರದಿಯಾಗಿದೆ……
“ಲಸಿಕೀಕರಣದ ಮೇಲೆ ಕ್ರಮಾನುಗತ ಮಾರ್ಗ ಸೂಚಿಗಳು”
“ಇಲ್ಲಿ 30 ನಿಮಿಷ ಕಾಯಬೇಕು”-
“ಥ್ಯಾಂಕ್ಯು ಮೋದೀಜಿ” (ಎಂಬ ಫಲಕ ಹಿಡಿದು)
(ಮಂಜುಲ್. ಫಸ್ಟ್ ಪೋಸ್ಟ್)
***
ಇದಕ್ಕೆ ಮೊದಲು ಎಪ್ರಿಲ್ 20 ರಂದು ಪ್ರಧಾನಿಗಳು ದೇಶವನ್ನುದ್ದೇಶಿಸಿ ಮಾಡಿದ ಪ್ರಸಾರ ಭಾಷಣದಲ್ಲಿ ಪ್ರಕಟಿಸಿದ ಹಿಂದಿನ ‘ಉದಾರೀಕೃತ ಲಸಿಕೆ ನೀತಿ’“ನಿರಂಕುಶ ಮತ್ತು ತರ್ಕಹೀನ” ಎಂದು ಜೂನ್ 1ರಂದು ದೇಶದ ಸರ್ವೋಚ್ಚ ನ್ಯಾಯಾಲಯ ಟಿಪ್ಪಣಿ ಮಾಡಿದ ಮೇಲೆ ಜೂನ್ 7ರಂದು ಪ್ರಧಾನಿಗಳು ದೇಶವನ್ನುದ್ದೇಶಿಸಿ ಮಾಡಿದ ಇನ್ನೊಂದು ಭಾಷಣದಲ್ಲಿ ಈ “ಸಾರ್ವತ್ರೀಕರಣದ ಹೊಸ ಘಟ್ಟ”ವನ್ನು ಪ್ರಕಟಿಸಿದರು ಎಂದು ನೆನಪಿಸಿಕೊಳ್ಳಬಹುದು. ಆದ್ದರಿಂದ ಹಲವರು ಇದು ಕೇಂದ್ರ ಸರಕಾರದ ಯು-ಟರ್ನ್ ಎಂದು ವಿಶ್ಲೇಷಿಸಿದ್ದಾರೆ ಎಂದೂ ನೆನಪಿಸಿಕೊಳ್ಳಬಹುದು…….
ಆದ್ದರಿಂಧ ಧನ್ಯವಾದಗಳು ಯಾರಿಗೆ ಸಲ್ಲಬೇಕು?……..
“ಇಲ್ಲಾ ಸರ್, ಸರ್ಟಿಫಿಕೇಟ್ ಮೇಲೆ ಸುಪ್ರಿಂ ಕೋರ್ಟ್
ನ್ಯಾಯಾಧೀಶರ ಫೋಟೋ ಸಾಧ್ಯವಿಲ್ಲ”
(ಸತೀಶ ಆಚಾರ್ಯ/ ಫೇಸ್‍ಬುಕ್)
***
ಎಪ್ರಿಲ್ 19/20ರ ‘ಉದಾರೀಕೃತ ಲಸಿಕೆ ನೀತಿ’ಜಾರಿಗೆ ಬಂದ ಮೇಲೆ ಮೇ 11ರಿಂದ 20ರ ನಡುವೆ ಪ್ರತಿದಿನ ಸರಾಸರಿ 15.7 ಲಕ್ಷ ಡೋಸ್‌ಗಳನ್ನು ನೀಡಲಾಗಿತ್ತು.
ಸುಪ್ರಿಂ ಕೋರ್ಟ್ ಟಿಪ್ಪಣಿಯ ನಂತರ ನಂತರ ಜೂನ್ 11 ರಿಂದ 19ರ ನಡುವೆ ಈ ಸರಾಸರಿ 34 ಲಕ್ಷ ಡೋಸ್‌ಗಳಿಗೇರಿತು. ಜೂನ್19ರಂದು 41,8ಲಕ್ಷ ಇದ್ದದ್ದು, ಜೂನ್ 20ರಂದು 4.3ಲಕ್ಷಕ್ಕೆ ಸರ‍್ರನೆ ಇಳಿಯಿತು.
“ಸಾರ್ವತ್ರೀಕರಣದ ಹೊಸ ಘಟ್ಟ” ಆರಂಭಗೊಂಡ ಜೂನ್ 21 ರಂದು ಇದು 83 ಲಕ್ಷಕ್ಕೆ ನೆಗೆಯಿತು.
ಜೂನ್ 22ರಂದು 54 ಲಕ್ಷಕ್ಕೆ ಇಳಿಯಿತು.
“ದಾಖಲೆ ದಿನ”ದಂದು ಮತ್ತು ಇತರ ದಿನಗಳಲ್ಲಿ
(ಸತೀಶ ಆಚಾರ್ಯ, ನ್ಯೂಸ್ ಸ್ಟ್ರಿಂಗ್)
***
ಭಾರತ ಸರಕಾರದ “ಉದಾರೀಕೃತ ಲಸಿಕೆ ನೀತಿ”ಯನ್ನು ಪ್ರಕಟಿಸಿದ ಎಪ್ರಿಲ್ 20, 2021ರ ವೇಳೆಗೆ ಒಟ್ಟು ದಾಖಲಾದ ಕೊವಿಡ್ ಸೋಂಕಿತರ ಸಂಖ್ಯೆ 1,53,21,089 ಮತ್ತು ಸಾವುಗಳ ಸಂಖ್ಯೆ 1,80,530 ಇತ್ತು. ಜೂನ್ 21 ರಂದು ‘ಹೊಸ ಸಾರ್ವತ್ರಿಕ ಲಸಿಕೀಕರಣ’ದ ಅಡಿಯಲ್ಲಿ ‘ದಾಖಲೆ’ ನಿರ್ಮಿಸುವ ವೇಳೆಗೆ ಅದು ಅನುಕ್ರಮವಾಗಿ 2,99,35,221 ಮತ್ತು 3,88,135ಕ್ಕೆ ಏರಿತ್ತು!…………..
ಲಸಿಕೆ… ಲಸಿಕೆ…
ಲಸಿಕೆ… ತಗೋ ಲಸಿಕೆ…
(ಕಾರ್ಟೂನಿಸ್ಟ್ ನಖ್ವಿ, ದೈನಿಕ್ ಭಾಸ್ಕರ್)
***
‘ದಾಖಲೆ’ ಎಂಬುದು ಸಾಪೇಕ್ಷ. ಅದು ಈಗ ಲಸಿಕೀಕರಣದ್ದಾಗಿರಬಹುದು, ಮುಂದೆ ಬೆಳವಣಿಗೆ ದರದ್ದೇ ಆಗಿರಬಹದು. ಫೋಕಸ್ ಎಲ್ಲಿ ಎಂಬುದು ಮುಖ್ಯವಾಗುತ್ತದೆ.
ಈಗ… ದಾಖಲೆ ಲಸಿಕೀಕರಣ ಮುಂದೆ.. ದಾಖಲೆ ವೃದ್ಧಿ
(ಸಂದೀಪ್ ಅಧ್ವರ್ಯು, ಟೈಮ್ಸ್ ಆಫ್ ಇಂಡಿಯಾ)
***
ಅದೇ ರೀತಿ ಎಷ್ಟು ಆಗಬೇಕಾಗಿದೆ ಮತ್ತು ಎಷ್ಟು ಆಗಿದೆ ಎಂಬುದರ ಸಾಪೇಕ್ಷತೆ ಕೂಡ.
‘ದಾಖಲೆ’ ಲಸಿಕೀಕರಣದ ನಂತರವೂ ಜೂನ್25 ರ ವೇಳೆಗೆ ಪೂರ್ಣವಾಗಿ ಲಸಿಕೆ ಪಡೆದವರ ಪ್ರಮಾಣ 4% ಮಾತ್ರ. ಕೊವಿಡ್ ಸೋಂಕುಗಳು ಮತ್ತು ಸಾವುಗಳ ಪ್ರಮಾಣದಲ್ಲಿ ಭಾರತದೊಂದಿಗೆ ಮೊದಲ ಮೂರು ಸ್ಥಾನಗಳನ್ನು ಹಂಚಿಕೊಂಡಿರುವ ಅಮೆರಿಕಾದಲ್ಲಿ ಇದು 45%ವಾಗಿದ್ದರೆ, ಬ್ರೆಝಿಲ್ ನಲ್ಲಿಯೂ 11.5%.!
“ಲಸಿಕೆಯನ್ನು ಇನ್ನು ಪಡೆಯಬೇಕಾದವರ ಪ್ರಮಾಣ”
(ಮಂಜುಲ್, ಮಿಡ್ ಡೇ)
60ವರ್ಷದ ಮೇಲಿನ ವಯೋಗುಂಪಿಗೆ ಲಸಿಕೆ ನೀಡಿಕೆ ಮಾರ್ಚ್ ತಿಂಗಳಲ್ಲೇ ಆರಂಭವಾಗಿದ್ದರೂ, ಜೂನ್ 25 ರವೇಳೆಗೆ ಇದೂ 16.5% ಮಾತ್ರ. ವಾಸ್ತವವಾಗಿ ಈ ವಯೋಗುಂಪಿನವರಿಗೆ ಜೂನ್ 5ರ ನಂತರ ಲಸಿಕೆ ನೀಡಿಕೆ ವೇಗ ಅರ್ಧಕ್ಕಿಳಿದಿದೆ ಎಂದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ಹೇಳುತ್ತವೆಯಂತೆ(ಪಿಟಿಐ/ನ್ಯೂಸ್ ಕ್ಲಿಕ್, ಜೂನ್ 26)
***
ಅಲ್ಲದೆ, ಉಚಿತ ಲಸಿಕೆ ಹಾಕಿಸುವುದು ಯಾವುದೇ ಚುನಾಯಿತ ಸರಕಾರದ ಕರ್ತವ್ಯ. ಅದರಲ್ಲಿ ವಿಶೇಷವೇನಿದೆ? ನಮ್ಮ ಹಣವನ್ನು ಎಟಿಎಂ ನಿಂದ ಪಡೆದರೆ ಅದಕ್ಕೆ ಎಟಿಎಂಗೆ ಥ್ಯಾಂಕ್ಸ್ ಹೇಳಬೇಕೇ ಎಂದೊಬ್ಬ ಪತ್ರಕರ್ತರು ಕೇಳಿದ್ದಾರೆ.
ಅಷ್ಟಕ್ಕೂ, ಭಾರತದ ಕೇಂದ್ರ ಸರಕಾರ ಉಚಿತವಾಗಿ ಲಸಿಕೆ ಕೊಡುತ್ತಿರುವುದು 75% ಮಾತ್ರ. ಉಳಿದ 25% ವನ್ನು ಖಾಸಗಿಯವರಿಂದ ದೊಡ್ಡ ಮೊತ್ತವನ್ನೇ ತೆತ್ತು ಪಡೆಯಬೇಕು. ಬಹುಶಃ ಇದೂ ಒಂದು ದಾಖಲೆಯೇ. ಭಾರತದಲ್ಲಿ ಈ ಮೊದಲು ಹೀಗಿರಲಿಲ್ಲ ಮತ್ತು ಈಗಲೂ ಜಗತ್ತಿನ ಬೇರೆಲ್ಲೂ ಹೀಗಿಲ್ಲವಂತೆ.
ಅದಕ್ಕೆ ಪ್ರಧಾನಿಯವರಿಗೆ ಥ್ಯಾಂಕ್ಸ್ ಹೇಳಬೇಕೆಂಬ ಯುಜಿಸಿ ಸುತ್ತೋಲೆಯ ಬಗ್ಗೆ ಮಾತಾಡುತ್ತ “ಯುಜಿಸಿ ಯಾರನ್ನು ಮರುಳು ಮಾಡುತ್ತಿದೆ? ನಾವು ಜನಗಳಿಗೆ ವಿಶ್ವದ್ಯಾಲಯದಲ್ಲಿ ಲಸಿಕೆ ಹಾಕಿಸಲು ಎಷ್ಟೊಂದು ಓಡಾಡಿದೆವು. ಕೊನೆಗೂ ವಿವಿ ಆಡಳಿತ ಖಾಸಗಿ ಆಸ್ಪತ್ರೆಗಳವರನ್ನು ಕರೆಸಿ ಲಸಿಕೆ ಕೊಡಿಸಬೇಕಾಯಿತು. ಅದಕ್ಕೆ ಪ್ರತಿಯೊಬ್ಬರೂ ಹಣ ತೆತ್ತ ನಂತರವೇ ಅದು ಸಿಕ್ಕಿದ್ದು” ಎಂದು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಹೇಳಿರುವುದಾಗಿ ವರದಿಯಾಗಿದೆ.
ಹಣ ನಮ್ಮದು, ಥ್ಯಾಂಕ್ಸ್ ನಿಮಗೆ!………..
“ಥ್ಯಾಂಕ್ ಯು ಹೇಳು!!”
(ಮಂಜುಲ್, ಫಸ್ಟ್ ಪೋಸ್ಟ್)
***
ಈ ‘ದಾಖಲೆ’ಯ ನಾಲ್ಕು ದಿನಗಳ ಮೊದಲು, ಜೂನ್ 17ರಂದು ಪಿಟಿಐ ಇನ್ನೊಂದು ದಾಖಲೆಯ ಬಗ್ಗೆ ವರದಿ ಮಾಡಿತು. ಸ್ವಿಟ್ಝರ್ಲೆಂಡ್ ನ ಬ್ಯಾಂಕುಗಳಲ್ಲಿ ಭಾರತೀಯ ವ್ಯಕ್ತಿಗಳು ಮತ್ತು ಸಂಸ್ಥೆಗಳು ಇಟ್ಟ ನಿಧಿಗಳ ಮೊತ್ತ 2.55 ಬಿಲಿಯ ಫ್ರಾಂಕ್ ಗಳಿಗೆ (ಅಂದರೆ ರೂ.20,700 ಕೋಟಿಗೆ) ಏರಿದೆ, ಇದು ಕಳೆದ 13 ವರ್ಷಗಳಲ್ಲೇ ಅತಿ ಹೆಚ್ಚು ಎಂದು ಈ ಸುದ್ದಿ ಹೇಳಿತು.
ಸ್ವಿಸ್ ಬ್ಯಾಂಕಿನ ಮೇಲೆ ‘ಅಚ್ಛೇ ದಿನ್’ ಬ್ಯಾನರ್!
“ಒಳ್ಳೇ ದಿನಗಳು ಇಲ್ಲಿವೆ”
(ಮಂಜುಲ್, ಫಸ್ಟ್ ಪೋಸ್ಟ್)
***
ಸ್ವಿಸ್ ಬ್ಯಾಂಕುಗಳಲ್ಲಿ ವಿದೇಶೀಯರು ಇಡುವುದು ತಮ್ಮ ದೇಶಗಳಲ್ಲಿ ಲೆಕ್ಕ ಕೊಡದ ಹಣವನ್ನು, ಸಂಕ್ಷಿಪ್ತವಾಗಿ, ಕಪ್ಪು ಹಣ ಎನ್ನಲಾಗುತ್ತದೆ. ಆದ್ದರಿಂದ 2014 ರ ಚುನಾವಣೆಗಳ ಮೊದಲು ಕೇಳಬಂದ 15 ಲಕ್ಷ ರೂ. ದ ಮಾತು ಹಲವರಿಗೆ, ಅದರಲ್ಲೂ ವ್ಯಂಗ್ಯಚಿತ್ರಕಾರರಿಗೆ, ನೆನಪಾಗಿದ್ದರೆ ಆಶ್ಚರ್ಯವೇನಿಲ್ಲ. ತಾವು ತರಲಿರುವ ‘ಅಚ್ಛೇ ದಿನ್’ಗಳಲ್ಲಿ ವಿದೇಶಿ ಬ್ಯಾಂಕುಗಳಲ್ಲಿ ಪೇರಿಸಿಟ್ಟಿರುವ ಕಪ್ಪು ಹಣವನ್ನು ತೆಗೆಸಿ, ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ ಹಾಕಲಾಗುವುದು ಎಂಬ ಭರವಸೆ ಅದು.
“2024ರಲ್ಲಿ ಬಾಕಿ ಸಹಿತ ಎಷ್ಟು ಸಿಗಬಹುದು ಅಂದಾಜು ಮಾಡು!”
(ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್)
***
ಈ ನಡುವೆ, ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ರೈಟ್ ಆಫ್ ಮತ್ತು ಸರಕಾರದ ಇತರ ‘ಸುಧಾರಣಾ’ ಕ್ರಮಗಳ ನಂತರವೂ , ಡಿಸೆಂಬರ್ 31, 2020ರ ವೇಳೆಗೆ ಕೆಟ್ಟ ಸಾಲಗಳ ಮೊತ್ತ ರೂ. 7,56,560 ಲಕ್ಷ ಕೋಟಿ ಎಂದು ವರದಿಯಾಗಿದೆ. ಕಳೆದ 4 ವರ್ಷಗಳಲ್ಲಿ ಸುಮಾರು ಇಷ್ಟೇ ಮೊತ್ತವನ್ನು, ಒಟ್ಟು ರೂ.6.96 ಲಕ್ಷ ಕೋಟಿ ರೂ.ಗಳ ಕೆಟ್ಟ ಸಾಲಗಳನ್ನು ರೈಟ್ -ಆಫ್ ಮಾಡಲಾಗಿದೆ ಎಂದೂ ಮಾಧ್ಯಮಗಳಲ್ಲಿ ವರದಿಯಾಗಿದೆ. ರೈಟ್-ಆಫ್ ಅಂದರೆ ಸಾಲ ಮನ್ನಾ ಅಲ್ಲ, ಅದು ಬ್ಯಾಂಕುಗಳ ಲೆಕ್ಕಪತ್ರಗಳ ಹೊರಗೆ ಇರುತ್ತವೆಯಷ್ಟೇ ಎಂದು ನಮಗೆ ಮತ್ತೆ-ಮತ್ತೆ ಹೇಳಲಾಗುತ್ತಿದೆ ಎಂಬುದು ಬೇರೆ ಮಾತು…..
(ಪಿ.ಮಹಮ್ಮದ್, ವಾರ್ತಾಭಾರತಿ)
***
83ಲಕ್ಷ ಡೋಸು ಲಸಿಕೆಗಳನ್ನು ಹಾಕಿ ‘ದಾಖಲೆ’ನಿರ್ಮಿಸಿದ ದಿನದಂದೇ ಕೊವಿಡ್‍ಗೆ ಬಲಿಯಾದವರ ಕುಟುಂಬಗಳಿಗೆ ವಿಪತ್ತು ನಿರ್ವಹಣಾ ಕಾಯ್ದೆಯ ಪ್ರಕಾರ ಕೊಡಬೇಕಾದ ರೂ.4ಲಕ್ಷ ಗಳ ಅನುಕಂಪ ಪರಿಹಾರ ಧನವನ್ನು ಕೊಡುವುದಿಲ್ಲ ಎಂದು ನಿರ್ಧರಿಸಿದ್ದೀರಾ ಎಂದು ಸುಪ್ರಿಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸ್ಪಷ್ಟೀಕರಣ ಕೇಳಿದೆ. ಏಕೆಂದರೆ, ಪರಿಶೀಲಿಸುತ್ತಿದ್ದೇವೆ ಎಂದು ಮೊದಲು ಹೇಳಿದ ಸರಕಾರ, ನಂತರ ಸಂಪನ್ಮೂಲಗಳ ಮಿತಿಯಿಂದಾಗಿ ಕೊಡಲಾಗುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸಿತು!
ಆಗ…“ 15 ಲಕ್ಷ ಹೋಗಲಿ ಬಿಡಿ…” ಈಗ.. “ ….4ಲಕ್ಷವಾದರೂ ಕೊಡಿ”
(ಸುಭಾನಿ, ಡೆಕ್ಕನ್ ಕ್ರಾನಿಕಲ್)