ಬೆಂಗಳೂರು : ಬೆಂಗಳೂರುನ ರಾಮಮೂರ್ತಿನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಯುವತಿಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರದ ಘಟನೆಯನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸಿದೆ.
ಬಾಂಗ್ಲಾ ಮೂಲದ 23 ವರ್ಷದ ಯುವತಿಯನ್ನು ಕೆಲಸ ಕೊಡಿಸುವ ನೆಪದಲ್ಲಿ ಭಾರತಕ್ಕೆ ಕರೆ ತಂದು ಬೆಂಗಳೂರಿನ ರಾಮಮೂರ್ತಿನಗರ ಪೋಲಿಸ್ ಠಾಣೆ ವ್ಯಾಪ್ತಿಯ ಕನಕನಗರದ ಬಾಡಿಗೆ ಮನೆಯೊಂದರಲ್ಲಿ ಯುವತಿಯನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳಲು ಪ್ರಯತ್ನಿಸಿದ್ದು, ಅಕೆ ಒಪ್ಪದ ಕಾರಣ ಯುವತಿಯನ್ನು ನಾಲ್ಕು ಜನ ಕಾಮುಕರು ವಿಕೃತವಾಗಿ ಬಲತ್ಕಾರ ನಡೆಸಿ,ದೈಹಿಕವಾಗಿ ಹಿಂಸೆಗೊಳಪಡಿಸಿರುವ ಘಟನೆ ಮಹಿಳೆಯರನ್ನು ಬೆಚ್ಚಿ ಬೀಳಿಸುತ್ತದೆ.
ಈ ಘಟನೆಯ ವಿಡಿಯೊ ಈಶಾನ್ಯ ರಾಜ್ಯಗಳು ಮತ್ತು ಬಾಂಗ್ಲಾ ದೇಶದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೊ ಆಧಾರಿಸಿ ಅರೋಪಿಗಳನ್ನು ಬಂದಿಸಿರುವ ರಾಮಮೂರ್ತಿ ನಗರ ಪೋಲಿಸ್ ರ ಕಾರ್ಯವನ್ನು ಸ್ವಾಗತಿಸುತ್ತೇವೆ.
ಅತ್ಯಾಚಾರವಾದ ಯುವತಿ ಎಲ್ಲಿದ್ದಾರೆಂದು ಗಂಭೀರವಾಗಿ ಪತ್ತೆ ಹಚ್ಚಿ ಅಕೆಗೆ ಬೇಕಾದ ಚಿಕಿತ್ಸೆಗಳನ್ನು ನೀಡಬೇಕು ಮತ್ತು ಅಕೆಯ ಹೇಳಿಕೆಯನ್ನು ದಾಖಲು ಮಾಡಿಕೊಂಡು ಅರೋಪಿಗಳಿಗೆ ಹಾಗೂ ಅವರಿಗೆ ಸಹಕರಿಸಿದ ಮಹಿಳೆಯನ್ನು ಒಳಗೊಂಡು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇದರ ಹಿಂದೆ ಇನ್ನೂ ಯಾರೆಲ್ಲ ಕೈವಾಡವಿದೆಯದು ತನಿಖೆಯ ಮೂಲಕ ಬಂಧಿಸಬೇಕು.
ಲಾಕ್ ಡೌನ್ ನಂತಹ ಸಮಯದಲ್ಲಿ ಉದ್ಯೋಗವಿಲ್ಲದೆ ಜನರು ಪರಿತಪಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯನ್ನು ಬಳಸಿಕೊಂಡು ಇನ್ನೆಷ್ಟು ಹೆಣ್ಣು ಮಕ್ಕಳು ಇಂತಹ ಘಟನೆಗೆ ಬಲಿಯಾಗಿರಬಹುದೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಸಮಿತಿ ಆತಂಕ ಪಡುತ್ತದೆ.
ಈ ಘಟನೆಯನ್ನು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿ ತನಿಖೆ ಮೂಲಕ ಬಹಿರಂಗಗೊಳಿಸಬೇಕು ಹಾಗೂ ಲಾಕ್ ಡೌನ್ ಅವಧಿಯಲ್ಲಿ ಮಹಿಳೆಯರಿಗೆ ಹಿಂಸೆ ಇಲ್ಲದ ಬದುಕನ್ನು ಕೇಂದ್ರ ರಾಜ್ಯ ಸರ್ಕಾರಗಳು ಖಾತ್ರಿಗೊಳಿಸಬೇಕೆಂದು ಸಂಘಟನೆಯು ಅಧ್ಯಕ್ಷರು ದೇವಿ ಮತ್ತು ಪ್ರಧಾನ ಕಾರ್ಯದರ್ಶಿ ಗೌರಮ್ಮ ಒತ್ತಾಯಿಸುತ್ತಿದ್ದಾರೆ.