25ಕ್ಕೂ ಅಧಿಕ ಆಭರಣ ಅಂಗಡಿಗಳ ಮೇಲೆ ಐಟಿ ದಾಳಿ

ಬೆಂಗಳೂರು: ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆದಾಯ ತೆರಿಗೆ ಇಲಾಖೆಯ ನಗರದಲ್ಲಿರುವ 25ಕ್ಕೂ ಹೆಚ್ಚು ಪ್ರಮುಖ ಆಭರಣ ಅಂಗಡಿಯ ಮಾಲೀಕರ ಅಂಗಡಿ ಮತ್ತು ನಿವಾಸಗಳ ಮೇಲೆ ದಿಢೀರ್ ದಾಳಿ ನಡೆದಿದೆ.

ಚಿಕ್ಕಪೇಟೆ, ಜಯನಗರ, ಯಶವಂತಪುರ, ಬಸವನಗುಡಿ ಸೇರಿದಂತೆ 25ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ದಾಳಿ ನಡೆಸಿದ ತೆರಿಗೆ ಅಧಿಕಾರಿಗಳು ತೆರಿಗೆ ವಂಚನೆ ಆರೋಪದ ಮೇಲೆ ಕೆಲವು ಅವಶ್ಯಕ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನು ಓದಿ: ಮಣಿಪಾಲ್ ಸಂಸ್ಥೆಗಳ ಮೇಲೆ ಏಕಕಾಲಕ್ಕೆ 22 ಕಡೆ ಐಟಿ ದಾಳಿ

ಬನಶಂಕರಿಯಲ್ಲಿರುವ ಪಾಶ್ರ್ವ ಫಾರ್ಮಾ ಸ್ಯುಟಿಕಲ್ ಮಾಲೀಕ ರಾಜೇಶ್‌ ಕುಮಾರ್ ಜೈನ್ ಅವರ ಅಂಗಡಿ ಹಾಗೂ ಜಯನಗರದ ಮನೆಗಳಲ್ಲಿ ಶೋಧ ನಡೆಸಿದ 15ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಏಕಾಏಕಿ ದಾಳಿ ನಡೆಸಿದೆ. ದಾಳಿ ವೇಳೆ ತೆರಿಗೆ ವಂಚನೆ ಮಾಡಿರುವ ಕೆಲವು ದಾಖಲೆಗಳು ಪತ್ತೆಯಾಗಿದ್ದು ಅವುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಹತ್ತು ವರ್ಷಗಳಿಂದ ಪಾಶ್ರ್ವ ಫಾರ್ಮಾಸ್ಯುಟಿಕಲ್ ನಡೆಸಿರುವ ವಹಿವಾಟು, ಪಾವತಿಸಿರುವ ತೆರಿಗೆ ಎಲ್ಲವನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದ್ದಾರೆ. ರಾಜೇಶ್ಕುಮಾರ್ ಜೈನ್ ಕೋಟ್ಯಂತರ ರೂ. ತೆರಿಗೆ ವಂಚಿಸಿರುವುದು ಕಂಡುಬಂದ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನು ಓದಿ: ಬೃಹತ್ ಐಟಿ ದಾಳಿ : 390 ಕೋಟಿ ರೂ. ಬೇನಾಮಿ ಆಸ್ತಿ ಪತ್ತೆ

ಇದೇ ರೀತಿ ಶಂಕರಾಪುರಂನ ಉತ್ತಮ್ ಜೈನ್ ಪ್ಲಾಟ್ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು  ಮೂರು ಕಾರುಗಳಲ್ಲಿ ಬಂದ 15ಕ್ಕೂ ಹೆಚ್ಚು ಅಧಿಕಾರಿಗಳು ಬೆಳಗ್ಗೆ 7 ಗಂಟೆಗೆ ಬಂದು ದಾಖಲೆಗಳನ್ನು ಪರಿಶೀಲಿಸಿದರು. ಉತ್ತಮ್ ಜೈನ್ ಗೆ ಸೇರಿದ ಹರಿಹಂತ್ ಕಾಸ್ಟಲ್ ಅಪಾರ್ಟ್‌ಮೆಂಟ್‌, ಮೂರನೇ ಫೆಲೀರ್ನ್‌ ಬಹುಮಡಹಿ ಕಟ್ಟಡದ ಮೇಲೆಯೂ ದಾಳಿ ಡೆಸಿದ್ದು, ಈ ವೇಳೆ ಇಡೀ ಅಪಾರ್ಟ್ಮೆಂಟ್ನ ಇಂಚಿಂಚು ಮಾಹಿತಿ ಕಲೆ ಹಾಕಿದ್ದಾರೆ.

ತೆರಿಗೆ ವಂಚನೆ ಆರೋಪದ ಮೇಲೆ ಜಯನಗರ, ಯಶವಂತಪುರ, ಬಸವನಗುಡಿ, ಚಿಕ್ಕಪೇಟೆ ಸೇರಿದಂತೆ ನಗರದ 25 ಕಡೆಗಳಲ್ಲಿ 300ಕ್ಕೂ ಹೆಚ್ಚು ಅಧಿಕಾರಿಗಳಿಂದ ಶೋಧ ಕಾರ್ಯ ನಡೆದಿದೆ. ಭದ್ರತೆಗಾಗಿ ತೆರಿಗೆ ಇಲಾಖೆ ಅಧಿಕಾರಿಗಳು ಸಿಎಆರ್‌ ಸಿಬ್ಬಂದಿಗಳನ್ನು ನಿಯೋಜಿಸಿಕೊಂಡರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *