ಬೆಂಗಳೂರು: ನಗರದ ದೊಡ್ಡಬೊಮ್ಮಸಂದ್ರ ಮತ್ತು ರಾಚೇನಹಳ್ಳಿ ಕೆರೆಗಳನ್ನು ಆಯ್ಕೆ ಮಾಡಿಕೊಂಡು ಸೌರ ಶಕ್ತಿ ಆಧಾರಿತ ವಿದ್ಯುತ್ ಉತ್ಪಾದಿಸಲು ಈ ಯೋಜನೆಗೆ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಅನುಮೋದನೆಯನ್ನೂ ನೀಡಿದೆ.
100 ಎಕರೆಗೂ ಹೆಚ್ಚು ವಿಸ್ತೀರ್ಣವಿರುವ ರಾಜ್ಯದ ಸುಮಾರು 40 ಕೆರೆಗಳಲ್ಲಿಸುಮಾರು 2500 ಮೆಗಾ ವ್ಯಾಟ್ ಉತ್ಪಾದನೆ ಸಾಧ್ಯವಿದೆ ಎಂದೂ ಅಂದಾಜಿಸಿತ್ತು. ಇದರ ಭಾಗವಾಗಿ ಯಲಹಂಕ ವಲಯದ ದೊಡ್ಡಬೊಮ್ಮಸಂದ್ರ ಮತ್ತು ರಾಚೇನಹಳ್ಳಿ ಕೆರೆಗಳನ್ನು ಸೌರ ಶಕ್ತಿ ಆಧಾರಿತ ವಿದ್ಯುತ್ ಉತ್ಪಾದನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಬಿಬಿಎಂಪಿ ಹವಾಮಾನ ಕ್ರಿಯಾಕೋಶ (ಕ್ಲೈಮೃಟ್ ಆ್ಯಕ್ಷನ್ ಸೆಲ್)ದ ಮೂಲಕ ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.
ಇದನ್ನೂ ಓದಿ: ಸಾಂಸ್ಕೃತಿಕ ಲೋಕದ ಮುಖ್ಯ ಉಸಿರು ಸಮುದಾಯ: ಬರಗೂರು
ರಾಜ್ಯದಲ್ಲಿನ ಸುಮಾರು 40 ಸಾವಿರ ಕೆರೆಗಳನ್ನು ಸರಕಾರದ ವರಮಾನದ ಮೂಲವಾಗಿಸುವ ನಿಟ್ಟಿನಲ್ಲಿಚಿಂತಿಸಿದ್ದ ಸಣ್ಣ ನೀರಾವರಿ ಇಲಾಖೆ, 2024ರ ಜುಲೈನಲ್ಲಿ’ತೇಲುವ ಸೌರ ವಿದ್ಯುತ್ ಫಲಕ (ಪ್ಯಾನೆಲ್)’ಗಳನ್ನು ಅಳವಡಿಸಿ, ವಿದ್ಯುತ್ ಉತ್ಪಾದನೆಯ ಸಾಧ್ಯಾಸಾಧ್ಯತೆ ಕುರಿತು ಚರ್ಚಿಸಿತ್ತು.
ಹಸಿರು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸುವುದು ಕೂಡ ಇದರ ಮುಖ್ಯ ಉದ್ದೇಶವಾಗಿದೆ. ಸುಮಾರು 124 ಎಕರೆಯ ದೊಡ್ಡಬೊಮ್ಮಸಂದ್ರ ಮತ್ತು 105 ಎಕರೆಯ ರಾಚೇನಹಳ್ಳಿ ಕೆರೆಗಳ ಶೇ.10ರಷ್ಟು ಭಾಗದಲ್ಲಿತೇಲಾಡುವ ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಸಿದರೆ, ಸುಮಾರು 20 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಧ್ಯವಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಆರಂಭಿಕವಾಗಿ 1 ಮೆಗಾವ್ಯಾಟ್ ಉತ್ಪಾದಿಸಲು ಮಾತ್ರ ‘ತೇಲುವ ಸೌರ ವಿದ್ಯುತ್ ಫಲಕ (ಪ್ಯಾನೆಲ್)’ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ.
ಕೆರೆಯಲ್ಲಿಸೋಲಾರ್ ಪ್ಯಾನೆಲ್ ಅಳವಡಿಕೆಯಿಂದ ನೀರು ಆವಿಯಾಗುವುದನ್ನು ತಪ್ಪಿಸಬಹುದು. ಅಲ್ಲದೆ, ಉತ್ಪತ್ತಿಯಾಗುವ ವಿದ್ಯುತ್ತನ್ನು ಕೆರೆಯ ನಿರ್ವಹಣೆ, ಸುತ್ತಮುತ್ತಲಿನ ವಿದ್ಯುತ್ ದೀಪಗಳು ಹಾಗೂ ಮತ್ತಿತರ ಉದ್ದೇಶಕ್ಕೂ ಬಳಕೆ ಮಾಡಬಹುದಾಗಿದೆ. ಹೆಚ್ಚಿನ ಪ್ರಮಾಣದ ವಿದ್ಯುತ್ ಉತ್ಪಾದನೆಯಾದಲ್ಲಿ ಗ್ರಿಡ್‌ಗಳ ಮೂಲಕ ವಿದ್ಯುತ್ ಸರಬರಾಜು ಕಂಪನಿಗಳಿಗೂ ಮಾರಾಟ ಮಾಡಬಹುದಾಗಿದೆ.
ಈ ಯೋಜನೆಯನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃಧ್ದಿ ನಿಯಮಿತ (ಕೆಆರ್‌ಇಡಿಎಲ್) ಸಹಯೋಗದಲ್ಲಿಅನುಷ್ಠಾನಗೊಳಿಸಲು ನಿರ್ಧರಿಸಲಾಗಿದ್ದು, ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದೆ. ಎಸ್‌ಟಿಪಿ ಗಳ ಆವರಣದಲ್ಲಿಸೋಲಾರ್ ವಿದ್ಯುತ್ ತಯಾರಿಕೆಗೆ ಇತ್ತೀಚೆಗೆ ಜಲಮಂಡಳಿ ರೂಪುರೇಷೆ ತಯಾರಿಸಿತ್ತು ಎಂಬುದನ್ನು ಇಲ್ಲಿಸ್ಮರಿಸಬಹುದು.
ದೊಡ್ಡಬೊಮ್ಮಸಂದ್ರ ಮತ್ತು ರಾಚೇನಹಳ್ಳಿ ಕೆರೆಗಳಲ್ಲಿ’ತೇಲುವ ಸೌರ ವಿದ್ಯುತ್ ಫಲಕ(ಪ್ಯಾನೆಲ್)’ಗಳನ್ನು ಅಳವಡಿಸಿ, 1 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಉದ್ದೇಶಿಸಲಾಗಿದೆ. ಕೆಆರ್‌ಇಡಿಎಲ್ ಸಹಯೋಗದಲ್ಲಿಅನುಷ್ಠಾನಗೊಳಿಸಲು ತಿರ್ಮಾನಿಸಲಾಗಿದೆ. ಆದರೆ, ಈ ಯೋಜನೆಯು ಪ್ರಾರಂಭಿಕ ಹಂತದಲ್ಲಿದ್ದು, ಇನ್ನೂ ಪಾಲಿಕೆ ಅಥವಾ ಸರಕಾರದಿಂದ ಯಾವುದೇ ಅನುದಾನ ನಿಗದಿಪಡಿಸಿಲ್ಲ,” ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಇದನ್ನು ನೋಡಿ: ಸಮುದಾಯ 50| ಉದ್ಘಾಟನಾ ಕಾರ್ಯಕ್ರಮ ; ಸದ್ಭಾವನಾ ಗೀತೆ | ರಂಗ ಗೌರವ
