ಬೆಳಗಾವಿ: ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ರಾಜ್ಯ ಸರ್ಕಾರ 1250 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಅದಕ್ಕೆ 250 ರೂಪಾಯಿ ಸೇರಿಸಿ 1500 ರೂಪಾಯಿ ಕೊಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವನಾಂದ ಪಾಟೀಲ್ ಪ್ರಕಟಿಸಿದರು.ಬೆಲೆ
ಬುಧವಾರ ವಿಧಾನಸಭೆಯಲ್ಲಿ ಕೊಬ್ಬರಿ ಬೆಲೆ ಬಗ್ಗೆ ಚರ್ಚೆ ವೇಳೆ ಮಾತನಾಡಿದ ಅವರು, ಐದಾರು ಬಾರಿ ನಾವು ಕೇಂದ್ರಕ್ಕೆ ಪತ್ರ ಬರೆದಿದ್ದೆವು, ಮೊನ್ನೆ ಇನ್ನೊಮ್ಮೆ ಕೂಡ ಪತ್ರ ಬರೆದು ಮನವಿ ಮಾಡಿದ್ದೆವು. ಆದರೆ ಅದಕ್ಕೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 1/4 ರಷ್ಟು ಕೊಬ್ಬರಿ ಕೂಡ ಅವರು ಖರೀದಿ ಮಾಡಿಲ್ಲ, ಬೆಳಗ್ಗೆ ತಾನೇ ನಾನು ಸಿಎಂ ಜತೆ ಮಾತಾಡಿದ್ದೇನೆ. ರಾಜ್ಯ ಸರ್ಕಾರದಿಂದ ಏನಾದರೂ ಕೊಡಬೇಕು ಎಂದು ಮನವಿ ಮಾಡಿದ್ದೇನೆ. ಕೇಂದ್ರ ಸರ್ಕಾರಕ್ಕೆ ನಿಯೋಗದೊಂದಿಗೆ ಹೋಗಲು ಸಿದ್ಧ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದರು.
ರಾಜ್ಯದಲ್ಲಿ 2 ಲಕ್ಷ ಮೆಟ್ರಿಕ್ ಟನ್ ಕೊಬ್ಬರಿ ಇದೆ. ಹೀಗಾಗಿ ವರ್ಷದ ಎಲ್ಲ ಕೊಬ್ಬರಿ ಖರೀದಿ ಮಾಡಿ ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: ರೈತರಿಗೆ ಮೊದಲ ಹಂತದ ಬರ ಪರಿಹಾರ| ಮುಂದಿನ ವಾರದೊಳಗೆ ವಿತರಣೆಗೆ ಕ್ರಮ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ಸೂಚನೆ
ಶಾಸಕ ಶಿವಲಿಂಗೇಗೌಡ ಮಾತನಾಡಿ, ಶೇ. 70 ಕೊಬ್ಬರಿ ತಿನ್ನಲು ಹೋಗಲ್ಲ, ಆಯಿಲ್‌ಗೆ ಹೋಗುತ್ತೆ. ಹೀಗಾಗಿ ಕೊಬ್ಬರಿ ಬೆಳಗಾರರಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ಧನ ಕೊಡಬೇಕು. ರಾಜ್ಯ ಸರ್ಕಾರ 1250 ರೂ. ಘೋಷಣೆ ಮಾಡಿದೆ. ಬೆಲೆ ಬಿದ್ದಾಗ ಕೇಂದ್ರ ಸರ್ಕಾರ ರೈತರ ಸಹಾಯಕ್ಕೆ ಬರಬೇಕು. ರೈತನ ಸಂಕಷ್ಟ ಯಾವ ರೀತಿ ಇದೆ ಅಂತ ತಿಳಿದಿದ್ದೇನೆ. ಅದರಿಂದ ಮಾತನಾಡುತ್ತಿದ್ದೇನೆ. ರಾಜ್ಯ ಸರ್ಕಾರ ಕೂಡ ಪ್ರೋತ್ಸಾಹ ಧನ ಹಿಂದೆ ಕೊಡುತ್ತಿತ್ತು. ಈಗ 3 ಸಾವಿರ ಸಹಾಯ ಧನ ಕೊಡಬೇಕು ಅಂತ ಒತ್ತಾಯ ಮಾಡುತ್ತೇನೆ. ಸಿಎಂ ಅವರು ಇದಕ್ಕೆ ಉತ್ತರ ಕೊಡಲೇಬೇಕು ಎಂದು ಮನವಿ ಮಾಡಿದರು.
ಶಾಸಕ ಷಡಕ್ಷರಿ ಮಾತನಾಡಿ ಕೊಬ್ಬರಿ ಬೆಲೆ ಕೇಂದ್ರ ಸರ್ಕಾರ ವ್ಯಾಪ್ತಿಗೆ ಬರುತ್ತದೆ, 15 ಸಾವಿರ ಇದ್ದ ಕೊಬ್ಬರಿ 7 ಸಾವಿರಕ್ಕೆ ಬಂದಿದೆ. ರಾಜ್ಯದಲ್ಲಿ ಬರಗಾಲ ಬಂದಿದೆ, ರೈತರು ಯಾವ ರೀತಿ ಬದುಕಬೇಕು. ಇದರಿಂದ ಕೇಂದ್ರ ಸರ್ಕಾರ ಕೊಬ್ಬರಿ ಕೊಂಡುಕೊಳ್ಳುವ ಕೆಲಸ ಮಾಡಬೇಕು. ರಾಜ್ಯ ಸರ್ಕಾರದವರು ಕೇಂದ್ರಕ್ಕೆ ಮನವಿ ಮಾಡುವಂತೆ ಮನವಿ ಮಾಡಬೇಕು ಎಂದರು.
ವಿಡಿಯೋ ನೋಡಿ: ಮಹಾಧರಣಿ| ಸರ್ವಾಧಿಕಾರಿ ಮನೋಭಾವದ ಸರಕಾರಗಳಿಗೆ ದೇಶದ ಜನ ಪಾಠ ಕಲಿಸಿದ್ದಾರೆ – ಪ್ರೊ. ರವಿವರ್ಮಕುಮಾರ್