ಹೋರಾಟಗಾರ್ತಿ ತೀಸ್ಟಾ ಸೆಟಲ್ವಾಡ್ ಬಂಧನ

ಮುಂಬೈ: ಸಾಮಾಜಿಕ ಕಾರ್ಯಕರ್ತೆ ತೀಸ್ಟಾ ಸೆಟಲ್ವಾಡ್ ಅವರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಶನಿವಾರ ಬಂಧಿಸಿದೆ.

ಸ್ವಯಂ ಸೇವಾ ಸಂಸ್ಥೆಯೊಂದರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನಲ್ಲಿರುವ ತೀಸ್ಟಾ ಸೆಟಲ್ವಾಡ್ ಅವರ ನಿವಾಸಕ್ಕೆ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಶನಿವಾರ ಆಗಮಿಸಿ ಅವರನ್ನು ಬಂಧಿಸಿ ಸಾಂತಾಕ್ರೂಜ್ ಪೊಲೀಸ್ ಠಾಣೆಗೆ ಕರೆದೊಯ್ದಿದೆ ಎಂದು ವರದಿಯಾಗಿದೆ.

ಘಟನೆಯ ಹಿನ್ನಲೆ : 2002ರ ಗುಜರಾತ್ ಗಲಭೆ ಸಂಬಂಧ ತೀಸ್ತಾ ಸೆಟಲ್ವಾಡ್ ಅವರ ಎನ್‌ಜಿಒದಿಂದ ಬಿಜೆಪಿ ಕಾರ್ಯಕರ್ತರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನು ನೀಡಲಾಗಿತ್ತು.
2002ರ ಗುಜರಾತ್ ಗಲಭೆಯಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ, ಅಂದಿನ ಸರಕಾರ ಮತ್ತು ಪೊಲೀಸ್ ವ್ಯವಸ್ಥೆ ಎಲ್ಲವೂ ಮುಸ್ಲಿಮರ ವಿರುದ್ಧ ಕೋಮುಗಲಭೆಗೆ ಪ್ರಚೋದನೆ ನೀಡಿದರು ಎಂಬುದು ಕೇಳಿಬಂದ ಪ್ರಮುಖ ಆರೋಪ.

ಗುಜರಾತ್ ಗಲಭೆಯಲ್ಲಿ ಮೋದಿಯವರ ಪಾತ್ರವಿಲ್ಲ ಎಂಬ SIT ಕ್ಲೀನ್ ಚಿಟ್ ವಿರೋಧಿಸಿ ಗಲಭೆಯಲ್ಲಿ ಹತ್ಯೆಯಾಗಿದ್ದ ಸಂಸದ ಎಷನ್ ಜಾಫ್ರಿಯವರ ಮಡದಿ 84ರ ವಯಸ್ಸಿನ ಜಾಕಿಯಾ ಜಾಫ್ರಿ ಅವರು ಕೋಮುಗಲಭೆಗಳ ಕುರಿತು ಹೊಸದಾಗಿ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್‌ ಅನ್ನು ಕೋರಿದ್ದರು. ಅದಕ್ಕೆ ಸಹಾಯ ಮಾಡಿದ್ದ ತೀಸ್ತಾ ಸೆಟ್ಲವಾದ್ ಸಹ ಅರ್ಜಿ ಸಲ್ಲಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ಆ ಅರ್ಜಿಯನ್ನು ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್ ಅರ್ಜಿದಾರರ ಭಾವನೆಗಳನ್ನು ದುರಪಯೋಗಪಡಿಸಿಕೊಂಡಿದ್ದೀರಿ ಎಂದು ದೂರಿತ್ತು.

ತೀಸ್ತಾರವರು 2002ರ ಗುಜರಾತ್ ಗಲಭೆ ಕುರಿತು ಪೊಲೀಸರಿಗೆ ಆಧಾರರಹಿತ ಮಾಹಿತಿ ನೀಡಿದ್ದರು ಎಂದು ಗೃಹ ಸಚಿವ ಅಮಿತ್‌ ಶಾ ಇಂದು ಬೆಳಿಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.ಅದಾಗಿ ಕೆಲವೇ ಘಂಟೆಗಳಲ್ಲಿ ತೀಸ್ತಾರವರನ್ನು ಬಂಧಿಸಲಾಗಿದೆ.

ಫೋರ್ಜರಿ ಆರೋಪದ ಮೇಲೆ ತೀಸ್ತಾ ಸೆಟಲ್ವಾಡ್ ಸೇರಿದಂತೆ ಹಲವರ ವಿರುದ್ಧ  ಐಪಿಸಿ ಸೆಕ್ಷನ್ 468 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರು ತೀಸ್ತಾರನ್ನು ವಿಚಾರಣೆಗಾಗಿ ಅಹಮದಾಬಾದ್‌ಗೆ ಕರೆದೊಯ್ಯಲು ಬಯಸಿದ್ದಾರೆ ಎಂದು ಇಂಗ್ಲಿಷ್ ಮಾಧ್ಯಮಗಳು  ವರದಿ ಮಾಡಿವೆ.

ಸಿಪಿಐಎಂ ಖಂಡನೆ : ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟ್ಕ್ವಾಡ ಅವರನ್ನು ಗುಜರಾತ್ ಪೋಲಿಸರು ಕ್ಷುಲ್ಲಕ ಕಾರಣ ನೀಡಿ ಬಂಧಿಸಿರುವುದನ್ನು ಸಿಪಿಐ(ಎಂ) ಉಗ್ರವಾಗಿ ಖಂಡಿಸಿದೆ. ಮತ್ತು ಈ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದೆ.

 

Donate Janashakthi Media

Leave a Reply

Your email address will not be published. Required fields are marked *