ನವದೆಹಲಿ : ದೇಶದಲ್ಲಿ ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದು, ಕಳದೆ 24 ಗಂಟೆಗಳಲ್ಲಿ 40,715 ಕರೋನ ಸೋಂಕು ಪ್ರಕರಣಗಳು ದಾಖಲಾಗಿದೆ. ಕಳೆದ ಒಂದೇ ದಿನದಲ್ಲಿ 199 ಮಂದಿ ಸೋಂಕಿಗೆ ಬಲಿಯಾಗಿದಾರೆ.
ಕಳೆದ ಎರಡು ದಿನಗಳಲ್ಲಿ ಕೊರೋನಾ ಪ್ರಕರಣಕ್ಕೆ ಹೋಲಿಸಿದರೆ ಇಂದು ದಾಖಲಾದ ಪ್ರಕರಣಗಳು ಕಡಿಮೆಯಾಗಿದೆ. ದೇಶದಲ್ಲಿ ಸೋಂಕಿನ ಸಂಖ್ಯೆ 11.68 ದಶಲಕ್ಷಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ ಈಗ 160,166ಕ್ಕೆ ಏರಿದೆ. 345,377 ಸಕ್ರಿಯ ಪ್ರಕರಣಗಳು ಮತ್ತು 11,181,253 ಜನರು ಈ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಂಕಿ ಅಂಶಗಳು ಮೂಲಕ ತಿಳಿಸಿವೆ.