ಹುತಾತ್ಮ ಸಂಗಾತಿ ಶ್ರೀನಿವಾಸ್ ಬಜಾಲ್ ನೆನಪಿನಲ್ಲಿ 23ನೇ ವರುಷದ ರಕ್ತದಾನ ಶಿಬಿರ

ಶಿಬಿರವನ್ನು ನಿವೃತ್ತ ಪ್ರಭಾರ ಜಿಲ್ಲಾಧಿಕಾರಿ ಶ್ರೀಯುತ ಪ್ರಭಾಕರ್ ಶರ್ಮಾ ಉದ್ಘಾಟಿಸಿದರು
ಮಂಗಳೂರು: ಡಿವೈಎಫ್ಐ ಬಜಾಲ್ ಪಕ್ಕಲಡ್ಕ ಘಟಕವು ಕೋಮುವಾದಿಗಳ ಕರಾಳ ಖಡ್ಗಕ್ಕೆ ಬಲಿಯಾದ ಶ್ರೀನಿವಾಸ್ ಬಜಾಲ್ 23ನೇ ವರುಷದ ಹುತಾತ್ಮ ದಿನದ ಅಂಗವಾಗಿ ರಕ್ತದಾನ ಶಿಬಿರವನ್ನು ನಿನ್ನೆ (29-6-25) ಪಕ್ಕಲಡ್ಕ ಭಗತ್ ಸಿಂಗ್ ಭವನದಲ್ಲಿ ಇಂಡಿಯನ್ ರೆಡ್ ಕ್ರಾಸ್ ರಕ್ತನಿಧಿ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದರು. ರಕ್ತದಾನ ಶಿಬಿರವನ್ನು ನಿವೃತ್ತ ಪ್ರಭಾರ ಜಿಲ್ಲಾಧಿಕಾರಿ, ರೆಡ್ ಕ್ರಾಸ್ ಸಂಸ್ಥೆಯ ಹಿರಿಯ ಸಲಹೆಗಾರರಾದ ಶ್ರೀಯುತ ಪ್ರಭಾಕರ್ ಶರ್ಮಾ ಉದ್ಘಾಟಿಸಿದರು.

ರಕ್ತದ ಮಹತ್ವವನ್ನು ಇಂದಿನ ಯುವತಲೆಮಾರುಗಳಿಗೆ ತಿಳಿಸಿಕೊಡಬೇಕಾಗಿದೆ. ತಮ್ಮ ದೇಹದಲ್ಲಿ ಹರಿಯುವ ರಕ್ತವನ್ನು ದಾನಮಾಡುವ ಮೂಲಕ ಇನ್ನೊಂದು ಜೀವ ಉಳಿಸುವ ಉದ್ದೇಶಕಷ್ಟೇ ಬಳಸಬೇಕು ಹೊರತು ಜೀವ ಕಸಿಯುವ ಹಕ್ಕು ಯಾರಿಗೂ ಇಲ್ಲ. ಈ ವೇಳೆ ಮದರ್ ತೆರೆಜಾ ಹೇಳಿದ ಮಾತು ನೆನಪಿಗೆ ಬರುತ್ತಿದೆ ಪ್ರಾರ್ಥಿಸುವ ತುಟಿಗಳಿಗಿಂತ ಸಹಾಯ ಮಾಡುವ ಕೈಗಳೇ ಶ್ರೇಷ್ಠ ಇಂತಹ ಅದ್ಬುತ ಹೇಳಿಕೆಯನ್ನು ನಾವುಗಳೆಲ್ಲಾ ಸರಿಯಾಗಿ ಅರ್ಥೈಸಿದರೆ ಈ ಸಮಾಜದ ಒಳಿತಿಗೆ ಸಹಕಾರಿಯಾಗಲಿದೆ ಎಂದರು. ಹುತಾತ್ಮ

ಇದನ್ನೂ ಓದಿ: ಜಾತಿ ನಿಂದನೆ ಆರೋಪ ಎದುರಿಸುತ್ತಿದ್ದ ನೆಲ್ಯಾಡಿ ನಿವಾಸಿಗಳ ದೋಷಮುಕ್ತ

ವೇದಿಕೆಯಲ್ಲಿ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ , ರೆಡ್ ಕ್ರಾಸ್ ಸಂಸ್ಥೆಯ ಸಲಹೆಗಾರ ರವಿ, ರೆಡ್ ಕ್ರಾಸ್ ರಕ್ತ ನಿಧಿ ಸಂಸ್ಥೆಯ ಮುಖ್ಯಸ್ಥರಾದ ಪ್ರವೀಣ್, ಡಿವೈಎಫ್ಐ ಜಿಲ್ಲಾ ಮುಖಂಡರಾದ ಶ್ರೀನಾಥ್ ಕಾಟಿಪಳ್ಳ , ವೈದ್ಯರಾದ ಡಾ ಶೀತಲ್ ಉಪಸ್ಥಿತರಿದ್ದರು. ಡಿವೈಎಫ್ಐ ಮಂಗಳೂರು ನಗರ ಅಧ್ಯಕ್ಷರಾದ ಜಗದೀಶ್ ಬಜಾಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಶಿಬಿರದ ನೇತೃತ್ವವನ್ನು ಡಿವೈಎಫ್ಐ ಬಜಾಲ್ ಪಕ್ಕಲಡ್ಕ ಘಟಕದ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಧಿರಾಜ್ ಬಜಾಲ್, ಮುಖಂಡರುಗಳಾದ ಅಶೋಕ್ ಎನೆಲ್ಮಾರ್, ಆನಂದ ಎನೆಲ್ಮಾರ್, ವರಪ್ರಸಾದ್, ಅಖಿಲೇಶ್ ಬಜಾಲ್, ಮಧುವಂತ್, ದೀಪಕ್ ಬಜಾಲ್, ಅನ್ಸರ್ ಪೈಸಲ್ ನಗರ ಮುಂತಾದವರು ವಹಿಸಿದ್ದರು.

ಮದರ್ ತೆರೆಜಾ ವಿಚಾರ ವೇದಿಕೆಯ ಸದಸ್ಯರಾದ ಟೋನಿ ಪಿಂಟೋ ಈ ವೇಳೆ 73ನೇ ಸಲದ ರಕ್ತದಾನ ಮಾಡಿ ಶಿಬಿರಕ್ಕೆ ಚಾಲನೆ ನೀಡಿದರು. ಸುಮಾರು 55ಕ್ಕೂ ಮಿಕ್ಕಿ ಸದಸ್ಯರು ರಕ್ತದಾನವನ್ನು ಮಾಡಿದರು.

ಇದನ್ನೂ ನೋಡಿ: ಸಮಾಜವಾದ, ಸೆಕ್ಯುಲರಿಸಂ ಅಂದರೆ ಆರೆಸ್ಸೆಸ್ ಗೆ ಅಸಹನೆ ಯಾಕೆ? Janashakthi Media

Donate Janashakthi Media

Leave a Reply

Your email address will not be published. Required fields are marked *