ತಿರುವನಂತಪುರ: ಅರ್ಚಕರಾಗಿ ತರಬೇತಿ ಪಡೆದಕೊಂಡ 22 ಮಹಿಳೆಯರು ಕೇರಳ ರಾಜ್ಯದಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸಲು ಅಧಿಕೃತವಾಗಿ ಸಿದ್ಧತೆಗೊಂಡಿದ್ದು, ಅವರಿಗೆ ಇತ್ತೀಚಿಗಷ್ಟೆ ದೀಕ್ಷೆ ದೊರೆತಿದೆ. ಇದುವರೆಗೂ ಪುರುಷರು ಮಾತ್ರವೇ ನಿರ್ವಹಿಸುತ್ತಿದ್ದ ಅರ್ಚಕ ವೃತ್ತಿಯನ್ನು ಮುಂಬರುವ ದಿನಗಳಲ್ಲಿ ಮಹಿಳೆಯರೂ ಸಹ ಸಕ್ರಿಯರಾಗಿ ನೆರವೇರಿಸಬಹುದಾಗಿದೆ.
ಕೇರಳ ರಾಜ್ಯದ ಮುವಟ್ಟುಪುಳ ಕ್ಷೇತ್ರದ ಪೂಜಾರಿಗಳಾದ ಕೆ.ಸುಭಾಷ್ ತಂತ್ರಿ ಅವರಡಿಯಲ್ಲಿ ತರಬೇತಿಯನ್ನು 22 ಮಹಿಳೆಯರು ಪಡೆದುಕೊಂಡಿದ್ದರು. ಭಕ್ತವೃಂದದಲ್ಲಿ ಪುರುಷರಿಗೆ ಹೋಲಿಸಿದರೆ, ಮಹಿಳೆಯರ ಪಾಲೇ ಹೆಚ್ಚು. ಹೀಗಿರುವಾಗ ಅರ್ಚಕ ವೃತ್ತಿಯನ್ನು ಮಹಿಳೆಯರು ನಿರ್ವಹಿಸುವುದರಲ್ಲಿ ತಪ್ಪೇನು? ಅರ್ಚಕರಾಗುವ ಅರ್ಹತೆ ಅವರಿಗೂ ಇದೆ ಎಂದು ಸುಭಾಷ್ ತಂತ್ರಿ ಹೇಳಿದ್ದಾರೆ.
ಸುಭಾಷ್ ತಂತ್ರಿ ಮತ್ತೆ ಇನ್ನೂ 13 ಮಂದಿ ಮಹಿಳೆಯರಿಗೆ ಅರ್ಚಕ ತರಬೇತಿಯನ್ನು ನೀಡುತ್ತಿದ್ದಾರೆ. ಈಗಾಗಲೇ ಹಲವೆಡೆಗಲಿಂದ ಮಹಿಳಾ ಅರ್ಚಕರೇ ಪೂಜಾ ವಿಧಾನ ನಡೆಸಿಕೊಡುವಂತೆ ಬೇಡಿಕೆ ಬರುತ್ತಿರುವುದಾಗಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.