ಬೆಂಗಳೂರು: ಮೇ 2 ಶುಕ್ರುವಾರ ಎಸ್‌ಎಸ್‌ಎಲ್‌ಸಿ ಪರಿಕ್ಷೆಯ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆ ಮಾಡಿದ್ದೂ, 625 ಕ್ಕೆ 625 ಅಂಕಗಳನ್ನು 22 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶದ ಲೈವ್ ಅಪ್ಡೇಟ್ನ್ನು ಸುದ್ದಿಗೋಷ್ಠಿಯಲ್ಲಿ ಸಚಿವ ಮಧು ಬಂಗಾರಪ್ಪ ಹಂಚಿಕೊಂಡಿದ್ದು, ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ರಾಜ್ಯದಿಂದ 2818 ಕೇಂದ್ರಗಳಲ್ಲಿ 8.40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸ್‌ಎಸ್‌ಎಲ್ಸಿ ಪರೀಕ್ಷೆ ಬರೆದಿದ್ದರು.
ಇದನ್ನೂ ಓದಿ: ನಾಳೆ SSLC ಫಲಿತಾಂಶ ಪ್ರಕಟ: ಬೆಳಿಗ್ಗೆ 11:30ಕ್ಕೆ ಅಧಿಕೃತ ಘೋಷಣೆ ಎಸ್‌ಎಸ್‌ಎಲ್‌ಸಿ
12:30 ರಿಂದ http://karresults.nic.in ವೆಬ್ಸೈಟ್ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಈ ಬಾರಿ ಶೇ. 66.14 ರಷ್ಟು ಫಲಿತಾಂಶ ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆ ಫಸ್ಟ್ ಇದ್ದು, ಕಲಬುರಗಿ ಲಾಸ್ಟ್ ಇದೆ. ಒಟ್ಟು 22 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ. ಕಲಬುರಗಿ ಜಿಲ್ಲೆಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 ಬರೆದ ಒಟ್ಟಾರೆ ವಿದ್ಯಾರ್ಥಿಗಳ ಸಂಖ್ಯೆ 8,42,173 ವಿದ್ಯಾರ್ಥಿಗಳ ಪೈಕಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ 201790 ವಿದ್ಯಾರ್ಥಿಗಳು, ಅನುದಾನಿತ ಶಾಲೆಯಲ್ಲಿ ವ್ಯಾಸಂಗ ಮಾಡಿದ 118066 ವಿದ್ಯಾರ್ಥಿಗಳು, ಅನುದಾನರಹಿತ ಶಾಲೆಯಲ್ಲಿ ವ್ಯಾಸಂಗ ಮಾಡಿದ 203219 ವಿದ್ಯಾರ್ಥಿಗಳು ಪಾಸಾಗಿದ್ದು, ಒಟ್ಟಾರೆ 66.14 ಫಲಿತಾಂಶ ಬಂದಿದೆ.
625 ಕ್ಕೆ 625 ಅಂಕಗಳನ್ನು 22 ವಿದ್ಯಾರ್ಥಿಗಳು ಪಡೆದಿದ್ದಾರೆ. 624 ಅಂಕಗಳನ್ನು 65 ವಿದ್ಯಾರ್ಥಿಗಳು, 623 ಅಂಕಗಳನ್ನು 108 ವಿದ್ಯಾರ್ಥಿಗಳು, 622 ಅಂಕಗಳನ್ನು 189 ವಿದ್ಯಾರ್ಥಿಗಳು ಪಡೆದಿದ್ದಾರೆ. ಒಟ್ಟಾರೆ ಪ್ರಥಮ ಸ್ಥಾನದಲ್ಲಿ ಪಡೆದ ವಿದ್ಯಾರ್ಥಿಗಳು ಸೇರಿದಂತೆ, ಎಸ್‌ಎಸ್‌ಎಲ್‌ಸಿ ಪಾಸಾದ ವಿದ್ಯಾರ್ಥಿಗಳಲ್ಲಿ ವಿಶ್ವಾಸದ ನಗೆ ಬಂದಿದೆ.
ಜಿಲ್ಲಾವಾರು ಫಲಿತಾಂಶ ಹೀಗಿದೆ
ಜಿಲ್ಲೆ | ಶೇಕಡವಾರು ಫಲಿತಾಂಶ |
ದಕ್ಷಿಣ ಕನ್ನಡ | 91.12 |
ಉಡುಪಿ | 89.96 |
ಉತ್ತರ ಕನ್ನಡ | 83.19 |
ಶಿವಮೊಗ್ಗ | 82.29 |
ಕೊಡಗು | 82.21 |
ಹಾಸನ | 82.12 |
ಶಿರಸಿ | 80.47 |
ಚಿಕ್ಕಮಗಳೂರು | 77.9 |
ಬೆಂಗಳೂರು ಗ್ರಾಮಾಂತರ | 74.02 |
ಬೆಂಗಳೂರು ದಕ್ಷಿಣ | 72.3 |
ಬೆಂಗಳೂರು ಉತ್ತರ | 72.27 |
ಮಂಡ್ಯ | 69.27 |
ಹಾವೇರಿ | 69.03 |
ಕೋಲಾರ | 68.47 |
ಮೈಸೂರು | 68.39 |
ಬಾಗಲಕೋಟೆ | 68.29 |
ಗದಗ | 67.72 |
ಧಾರವಾಡ | 67.62 |
ವಿಜಯನಗರ | 67.62 |
ತುಮಕೂರು | 67.03 |
ದಾವಣಗೆರೆ | 66.09 |
ಚಿಕ್ಕಬಳ್ಳಾಪುರ | 63.64 |
ಚಿತ್ರದುರ್ಗ | 63.21 |
ರಾಮನಗರ | 63.12 |
ಬೆಳಗಾವಿ | 62.16 |
ಚಿಕ್ಕೋಡಿ | 62.12 |
ಚಾಮರಾಜನಗರ | 61.45 |
ಮಧುಗಿರಿ | 60.65 |
ಬಳ್ಳಾರಿ | 60.26 |
ಕೊಪ್ಪಳ | 57.32 |
ಬೀದರ್ | 53.25 |
ರಾಯಚೂರು | 52.05 |
ಯಾದಗಿರಿ | 51.6 |
ವಿಜಯಪುರ | 49.58 |
ಕಲಬುರಗಿ | 42.43 |
ಮೇ 26ಕ್ಕೆ ಮರು ಪರೀಕ್ಷೆ : SSLC ಪರೀಕ್ಷೆ 2 ದಿನಾಂಕ ಘೋಷಣೆಯಾಗಿದ್ದು, ಮೇ 26 ರಿಂದ ಜೂನ್ 2 ವೆರೆಗೆ ಪರೀಕ್ಷೆ 2 ನಡೆಯಲಿದೆ. ಮರು ಪರೀಕ್ಷೆಗೆ ಯಾವುದೇ ಶುಲ್ಕ ಇರುವುದಿಲ್ಲ ಜೂನ್ 23 ರಿಂದ ಜೂನ್ 30ರ ವರೆಗೆ ಪರೀಕ್ಷೆ 3 ನಡೆಯಲಿದೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಘೋಷಣೆ ಮಾಡಿದರು.
ಇದನ್ನೂ ನೋಡಿ: ಬಸವ ಜಯಂತಿ ವಿಶೇಷ | ಬಸವಣ್ಣನ ವಚನಗಳು | ಎಚ್.ಸಿ. ಉಮೇಶ್ Janashakthi Media