ನಾಸಿಕ್: ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾದ ಕಾರಣದಿಂದಾಗಿ ಮಹಾರಾಷ್ಟ್ರ ರಾಜ್ಯದ ನಾಸಿಕ್‌ನ ಮುನ್ಸಿಪಲ್ ಆಸ್ಪತ್ರೆಯೊಂದರಲ್ಲಿ ವೆಂಟಿಲೇಟರ್ ನೆರವಿನಿಂದ ಚಿಕಿತ್ಸೆ ಪಡೆಯುತ್ತಿದ್ದ 22 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಸೂರಜ್ ಮಂಧಾರೆ ತಿಳಿಸಿದ್ದಾರೆ.
ಆಮ್ಲಜನಕ ಸಂಗ್ರಹಣಾ ಘಟಕದಲ್ಲಿ ಉಂಟಾದ ಸೋರಿಕೆಯಿಂದ ಘಟನೆ ಉಂಟಾಗಿದೆ. ಜಾಕಿರ್ ಹುಸೇನ್ ಮುನ್ಸಿಪಲ್ ಆಸ್ಪತ್ರೆಯಲ್ಲಿ ನಡೆದ ಘಟನೆಯಲ್ಲಿ ಕೋವಿಡ್ ಸೋಂಕಿತರು ಸಾಔಿಗೀಡಾಗಿದ್ದಾರೆ. ಮೃತರಾದ ರೋಗಿಗಳಿಗೆ ವೆಂಟಿಲೇಟರ್ ನೆರವಿನೊಂದಿಗೆ ಚಿಕಿತ್ಸೆ ನೀಡುವ ಜೊತೆಗೆ, ಆಮ್ಲಜನಕವನ್ನು ಪೂರೈಸಲಾಗುತ್ತಿತ್ತು. ಆಮ್ಲಜನಕ ಟ್ಯಾಂಕ್‌ನಲ್ಲಿ ಸೋರಿಕೆಯಾದ ಕಾರಣ, ರೋಗಿಗಳಿಗೆ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಾಸವಾದ ಕಾರಣ ಈ ದುರ್ಘಟನೆ ಸಂಭವಿಸಿದೆ‘ ಎಂದು ಜಿಲ್ಲಾಧಿಕಾರಿ ಸುದ್ದಿಗಾರರಿಗೆ ತಿಳಿಸಿದರು.
ಇದನ್ನು ಓದಿ: 44 ಲಕ್ಷ ಲಸಿಕೆ ಡೋಸ್ ವ್ಯರ್ಥ : ಹಾಳು ಮಾಡಿದ್ದರಲ್ಲಿ ತಮಿಳುನಾಡು ನಂ 1
ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಅವರು ‘ಆಮ್ಲಜನಕದ ಟ್ಯಾಂಕ್‌ಗಳಲ್ಲಿ ಉಂಟಾದ ಸೋರಿಕೆಯಿಂದಾಗಿ ಈ ಘಟನೆ ಸಂಭವಿಸಿದ ಎಂದು ಶಂಕಿಸಲಾಗಿದೆ. ಈ ಕುರಿತು ತನಿಖೆ ನಡೆಸಲಾಗುವುದು‘ ಎಂದು ಹೇಳಿದ್ದಾರೆ.
ಸಚಿವ ಡಾ.ರಾಜೇಂದ್ರ ಶಿಂಗಾನೆ ಅವರು “ಇದು ದುರದೃಷ್ಟಕರ ಘಟನೆ. ವಿವರವಾದ ವರದಿಯನ್ನು ಪಡೆಯಲು ನಾವು ಪ್ರಯತ್ನಿಸುತ್ತಿದ್ದೇವೆ. ನಾವು ತನಿಖೆಗೆ ಆದೇಶಿಸಿದ್ದೇವೆʼʼ ಎಂದು ಹೇಳಿದ್ದಾರೆ.
ನಾಸಿಕ್ ಮುನ್ಸಿಪಲ್ ಕಮಿಷನರ್ ಕೈಲಾಶ್ ಶಿಂಧೆ ಅವರು ಸೋರಿಕೆಯಾದ ನಂತರ ಸ್ಥಾವರದಿಂದ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ ಹಲವಾರು ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದಾರೆ. 700 ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಜೀವ ಉಳಿಸಲು ವೈದ್ಯರಿಂದ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಇದನ್ನು ಓದಿ: “ವೈದ್ಯಲೋಕವೇ ಅಸಹಾಯಕ ಸ್ಥಿತಿಯಲ್ಲಿದೆ” ಕಣ್ಣೀರಿಟ್ಟ ವೈದ್ಯೆ
ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ ಝಾಕಿರ್ ಹುಸೇನ್ ಮುನ್ಸಿಪಲ್ ಆಸ್ಪತ್ರೆಗೆ ಮುನ್ಸಿಪಲ್ ಕಾರ್ಪೊರೇಷನ್ ಸಿಬ್ಬಂದಿಗಳು ಹೆಚ್ಚು ಬೇಡಿಕೆ ಇರದ ಕಡಿಮೆ ಗುಣಮಟ್ಟದ ಆಮ್ಲಜನಕದ ಟ್ಯಾಂಕ್‌ಗಳನ್ನು ತಂದಿದ್ದರು.
ಆಮ್ಲಜನಕ ಸೋರಿಕೆಯಾಗುತ್ತಿರುವ ವಿಡಿಯೊವೊಂದು ಇಂದು ಬೆಳಿಗ್ಗೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿಡಾಡುತ್ತಿದ್ದವು. ಮೃತರ ಸಂಬಂಧಿಕರು ‘ಆಮ್ಲಜನಕ ಪೂರೈಕೆಯಲ್ಲಿ ಉಂಟಾದ ವ್ಯತ್ಯಯವೇ ಸಾವಿಗೆ ಕಾರಣ‘ ಎಂದು ಆರೋಪಿಸಿದ್ದಾರೆ.
ಬೇಜವಾಬ್ದಾರಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂದು ಎನ್‌ಸಿಪಿ ನಾಯಕ ಮಜೀದ್ ಮೆಮನ್ ಹೇಳಿದ್ದಾರೆ. ಆಮ್ಲಜನಕದ ಸೋರಿಕೆಯಿಂದ ಆಸ್ಪತ್ರೆಯಲ್ಲಿ ಹಲವಾರು ಲೀಟರ್ ಆಮ್ಲಜನಕ ಮತ್ತು ಭೀತಿಯುಂಟಾಗಿದೆ. ನಿರ್ಲಕ್ಷ್ಯಕ್ಕೆ ಕಾರಣರಾದವರನ್ನು ಗುರುತಿಸಿ ಶಿಕ್ಷಿಸಬೇಕು” ಎಂದು ಅವರು ಟ್ವೀಟ್ ಮಾಡಿದ್ದಾರೆ.