– ಭಾವನ ಟಿ.
ವಿಚ್ಛೇದನ ನೀಡಬೇಕಿದೆ,
ನನ್ನವರ ಮನ ಹಿಂಡುತ್ತಿರುವ,
ಧಾರ್ಮಿಕ ಸೊಗಲಾಡಿತನಕ್ಕೆ..!
ವಿಚ್ಛೇದನ ನೀಡಬೇಕಿದೆ,
ನನ್ನವರ ಮೈಗಂಟಿದ,
ಸಾಮಾಜಿಕ ದುಷ್ಟಶಕ್ತಿಗಳಿಗೆ..!
ವಿಚ್ಛೇದನ ನೀಡಬೇಕಿದೆ,
ನನ್ನವರ ಮೆದುಳು ಹೊಕ್ಕಿರುವ,
ರಾಜಕೀಯ ಪೀಕಲಾಟಗಳಿಗೆ..!
ವಿಚ್ಛೇದನ ನೀಡಬೇಕಿದೆ,
ನನ್ನವರೆಲ್ಲರ ರಕ್ತ ಹೀರುತ್ತಿರುವ,
ಆರ್ಥಿಕತೆಯ ಮಹಾರಕ್ಕಸನಿಗೆ..!
ವಿಚ್ಛೇದನ ನೀಡಬೇಕಿದೆ…
ಎಲ್ಲಾ ಪಿಡುಗು – ಅನಿಷ್ಟಗಳಿಗೆ,
ತಲಾಕ್ ಹೇಳಬೇಕಿದೆ…
ತಲಾಕ್ ತಲಾಕ್ ತಲಾಕ್…!!!
ಶಾಂತಿ – ಅಹಿಂಸೆ,
ಪ್ರೀತಿ – ಪ್ರೇಮ – ಸಹಬಾಳ್ವೆ,
ನಂಬಿಕೆ – ಗೌರವ – ವಿಶ್ವಾಸಗಳಿಂದ…
ಹೊಸದಾದ ಬಾಂಧವ್ಯಗಳ,
ಎಲ್ಲರೊಡನೆ ಹೊಸೆದು ಬೆಸೆಯಬೇಕಿದೆ…!!!