ಆಪರೇಷನ್‌ ಅಜಯ್‌ | ಇಸ್ರೇಲ್‌ನಿಂದ ತಾಯ್ನಾಡಿಗೆ ಮರಳಿದ 212 ಭಾರತೀಯರು

ನವದೆಹಲಿ: ಹಮಾಸ್ ಯುದ್ಧದ ಹಿನ್ನೆಲೆಯಲ್ಲಿ ಇಸ್ರೇಲ್‌ನಿಂದ 212 ಭಾರತೀಯರಿದ್ದ ಮೊದಲ ವಿಮಾನ ಶುಕ್ರವಾರ (ಅ-12) ದೆಹಲಿ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಬಂದಿಳಿಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಆಪರೇಷನ್‌ ಅಜಯ್‌

ಇಸ್ರೇಲ್‌ನಿಂದ ಹೊರಟ ವಿಮಾನವು ಇಂದು ಬೆಳಿಗ್ಗೆ ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದ್ದು, ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಪ್ರಯಾಣಿಕರನ್ನು ಬರಮಾಡಿಕೊಂಡಿದ್ದಾರೆ.

ವಾರಾಂತ್ಯದಲ್ಲಿ ಹಮಾಸ್ ಬಂಡುಕೋರರು ಇಸ್ರೇಲಿ ಪಟ್ಟಣಗಳ ಮೇಲೆ ನಡೆಸಿದ ಸರಣಿ ದಾಳಿಯಿಂದ ಅಲ್ಲಿ ಉದ್ವಿಗ್ನತೆ ಉಂಟಾಗಿದ್ದರಿಂದ ಸ್ವದೇಶಕ್ಕೆ ಹಿಂತಿರುಗಲು ಬಯಸುವ ಭಾರತೀಯರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಆಪರೇಷನ್ ಅಜಯ್  ಪ್ರಾರಂಭಿಸಲಾಗಿತ್ತು.

ಇದನ್ನೂ ಓದಿ:ಗಾಜಾ: ಇಸ್ರೇಲ್ ವೈಮಾನಿಕ ದಾಳಿಯ ನಡುವೆ ಮುಂದುವರೆದ ಪ್ಯಾಲೆಸ್ತೀನ್ ಪ್ರತಿರೋಧ 

ನವದೆಹಲಿಗೆ ಬಂದಿಳಿದ ನಂತರ  ಮಾತನಾಡಿದ ಇಸ್ರೇಲ್ ವಿದ್ಯಾರ್ಥಿ ಶುಭಂ ಕುಮಾರ್, “ನಾವು ಕೇಂದ್ರ ಸರ್ಕಾರ ಕೃತಜ್ಞರಾಗಿರುತ್ತೇವೆ. ಹೆಚ್ಚಿನ ವಿದ್ಯಾರ್ಥಿಗಳು ಸ್ವಲ್ಪ ಭಯಭೀತರಾಗಿದ್ದರು. ಭಾರತದ ರಾಯಭಾರ ಕಚೇರಿಯ ಮೂಲಕ ಭಾರತೀಯ ನಾಗರಿಕರಿಗೆ ಸಂಬಂಧಿಸಿದ ಕೆಲವು ಅಧಿಸೂಚನೆಗಳು ಮತ್ತು ಲಿಂಕ್‌ಗಳನ್ನು ನೋಡಿದ ನಂತರ ನಮ್ಮ ಆತ್ಮಸ್ಥೈರ್ಯ ಹೆಚ್ಚಿತು. ಭಾರತದ ರಾಯಭಾರ ಕಚೇರಿಯ ಸಂಪರ್ಕದಿಂದ ಎಲ್ಲಾ ವ್ಯವಸ್ಥೆಗಳನ್ನು ಪಡೆದುಕೊಂಡೆವು ಎಂದು ತಿಳಿಸಿದರು.

ಇದಕ್ಕೂ ಮುನ್ನ ಗುರುವಾರ (ಅ-12) ಮಾತನಾಡಿದ ಎಂಇಎ ವಕ್ತಾರ ಅರಿಂದಮ್ ಬಾಗ್ಚಿ, ಭಾರತೀಯ ನಾಗರಿಕರನ್ನು ಕರೆದೊಯ್ಯಲು ಮೊದಲ ಚಾರ್ಟರ್ ವಿಮಾನ ಇಂದು ರಾತ್ರಿ ಟೆಲ್ ಅವಿವ್ ತಲುಪಲಿದೆ ಮತ್ತು ನಾಳೆ ಬೆಳಿಗ್ಗೆ ಭಾರತಕ್ಕೆ ಮರಳುವ ಸಾಧ್ಯತೆಯಿದೆ ಎಂದು ಹೇಳಿದ್ದರು.  ಸುಮಾರು 18,000 ಭಾರತೀಯರು ಪ್ರಸ್ತುತ ಇಸ್ರೇಲ್‌ನಲ್ಲಿ ನೆಲೆಸಿದ್ದಾರೆ ಮತ್ತು ಸುಮಾರು ಒಂದು ಡಜನ್ ನಷ್ಟು ಜನರು ವೆಸ್ಟ್ ಬ್ಯಾಂಕ್‌ನಲ್ಲಿದ್ದಾರೆ ಮತ್ತು ಮೂರರಿಂದ ನಾಲ್ಕು ಜನರು ಗಾಜಾದಲ್ಲಿದ್ದಾರೆ ಎಂದು ಅವರು ತಿಳಿಸಿದ್ದರು. ಆಪರೇಷನ್‌ ಅಜಯ್‌

ವಿಡಿಯೋ ನೋಡಿ:ಚುನಾಯಿತ ಸರ್ವಾಧಿಕಾರ ಪ್ರಭುತ್ವದಿಂದ ” ನ್ಯೂಸ್ ಕ್ಲಿಕ್ ಮೇಲೆ ದಾಳಿ”, ಅಪಾಯದಲ್ಲಿರುವ ಭಾರತದ ಪ್ರಜಾಪ್ರಭುತ್ವ

 

Donate Janashakthi Media

Leave a Reply

Your email address will not be published. Required fields are marked *