ಗಾಂಧಿನಗರ: 2002ರ ಗುಜರಾತ್ ಗಲಭೆ ಪ್ರಕರಣಗಳ ಸಾಕ್ಷಿಗಳು, ವಕೀಲರು ಮತ್ತು ನಿವೃತ್ತ ನ್ಯಾಯಾಧೀಶರಿಗೆ ನೀಡಲಾಗಿದ್ದ ಭದ್ರತೆಯನ್ನು ಗುಜರಾತ್ ಸರ್ಕಾರ ರದ್ದುಗೊಳಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥ ಬಿ.ಸಿ.ಸೋಲಂಕಿ ಅವರ ಶಿಫಾರಸಿನ ಮೇರೆಗೆ ಡಿಸೆಂಬರ್ 13 ರಂದು ಈ ನಿರ್ಧಾರಕ್ಕೆ ಬಂದಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ TOI ವರದಿ ಮಾಡಿದೆ.
2002 ರ ಗುಜರಾತ್ ಗಲಭೆಯಲ್ಲಿ 790 ಮುಸ್ಲಿಮರು ಮತ್ತು 254 ಹಿಂದೂಗಳು ಕೊಲ್ಲಲ್ಪಟ್ಟರು, 223 ಮಂದಿ ಕಾಣೆಯಾಗಿದ್ದಾರೆ ಮತ್ತು 2,500 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ ಎಂದು ಈ ವರ್ಷದ ಆರಂಭದಲ್ಲಿ ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಹೇಳಿತ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. 15 ವರ್ಷಗಳ ಹಿಂದೆ ಸಂಭವಿಸಿದ್ದ ನರೋದಾ ಪಾಟಿಯಾ ಮತ್ತು ಗುಲ್ಬರ್ಗ್ ಸೇರಿದಂತೆ ಒಂಬತ್ತು ಗಲಭೆ ಸಂಬಂಧಿತ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೇಮಿಸಿದ ಎಸ್‌ಐಟಿಯು ವಿಶೇಷ ಸಾಕ್ಷಿ ಸಂರಕ್ಷಣಾ ಸೆಲ್ ಅನ್ನು ರಚಿಸಿತ್ತು. ಗಲಭೆ ಪ್ರಕರಣ
ಇದನ್ನೂ ಓದಿ: ಹರಿಯಾಣ | ಸರ್ಕಾರಿ ವೈದ್ಯರಿಂದ ಮುಷ್ಕರ; ಒಪಿಡಿ ಸೇವೆ ಸ್ಥಗಿತ
97 ಜನರ ಹತ್ಯಾಕಾಂಡವನ್ನು ಒಳಗೊಂಡಿರುವ ನರೋಡಾ ಪಾಟಿಯಾ ಪ್ರಕರಣದಲ್ಲಿ 32 ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದ ಪ್ರಧಾನ ನಗರ ಸೆಷನ್ಸ್ ನ್ಯಾಯಾಧೀಶರಾದ ಜ್ಯೋತ್ಸ್ನಾ ಯಾಗ್ನಿಕ್ ಅವರ ಭದ್ರತೆಯನ್ನು ನವೆಂಬರ್‌ನಲ್ಲಿ ರದ್ದುಗೊಳಿಸಲಾಯಿತು. ಅವರಿಗೆ ಯಾವುದೆ ಮಾಹಿತಿ ನೀಡದೆ ಈ ಕೃತ್ಯ ಎಸಗಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ. ಗಲಭೆ ಪ್ರಕರಣ
“ನಮಗೆ ಏನಾದರೂ ಸಂಭವಿಸಿದರೆ, ಯಾರು ಜವಾಬ್ದಾರರು? ನ್ಯಾಯಾಲಯವೆ?, SIT, ಅಥವಾ ಪೊಲೀಸೆ?” ಎಂದು ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣದ ಪ್ರಧಾನ ಸಾಕ್ಷಿ ಇಮ್ತಿಯಾಜ್‌ಖಾನ್ ಪಠಾಣ್ ಅವರು ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.
ಈ ವರ್ಷದ ಏಪ್ರಿಲ್‌ನಲ್ಲಿ ವಿಶೇಷ ವಿಚಾರಣಾ ನ್ಯಾಯಾಲಯವು ಗುಜರಾತ್‌ನ ಮಾಜಿ ಸಚಿವೆ ಮಾಯಾ ಕೊಡ್ನಾನಿ, ಬಜರಂಗದಳದ ನಾಯಕ ಬಾಬು ಬಜರಂಗಿ ಮತ್ತು ವಿಎಚ್‌ಪಿ ಮಾಜಿ ನಾಯಕ ಜೈದೀಪ್ ಪಟೇಲ್ ಸೇರಿದಂತೆ ಎಲ್ಲಾ 67 ಆರೋಪಿಗಳನ್ನು 2002ರ ನರೋಡಾ ಗಾಂ (ಗ್ರಾಮ) ಹತ್ಯಾಕಾಂಡ ಪ್ರಕರಣದಲ್ಲಿ ಖುಲಾಸೆಗೊಳಿಸಿತ್ತು.
ವಿಡಿಯೊ ನೋಡಿ: ಕುವೆಂಪು ಚಿಂತನೆಯಲ್ಲಿ ಮಹಿಳೆ – ಪಿ. ಭಾರತೀದೇವಿ ಅಭಿಮತ Janashakthi Media