ಒಂದು ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದು 20 ಲಕ್ಷ ರೂ. ಗಳಿಸಿದ ಪೊಲೀಸ್‌ ಕಾನ್‌ಸ್ಟೇಬಲ್‌

Please follow and like us:

ಹಾಸನ : ಟೊಮೆಟೊ ಬೆಲೆ ಗಗನಕ್ಕೇರಿದ್ದು, ಇದೀಗ ಚಿನ್ನದ ಬೆಲೆ ಎನಿಸಿಕೊಂಡಿರೋ ಟೊಮೆಟೊವನ್ನು ಭರ್ಜರಿಯಾಗಿ ಬೆಳೆದು ಪೊಲೀಸ್‌ ಕಾಸ್‌ಸ್ಟೇಬಲ್‌ ಒಬ್ಬರು ಲಕ್ಷಾಂತರ ರೂ.ಆದಾಯ ಗಳಿಸಿದ್ದಾರೆ.

ಬೇಲೂರು ತಾಲೂಕಿನ ಹಳೆಬೀಡು ಹೋಬಳಿ ಬಸ್ತಿಹಳ್ಳಿ ಗ್ರಾಮದ ಬೈರೇಶ್‌ ಹಾಸನ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಕಾಸ್‌ಸ್ಟೇಬಲ್‌ ಆಗಿದ್ದಾರೆ. ಇವರು ಒಂದು ಎಕರೆ 6 ಗುಂಟೆ ಜಾಗದಲ್ಲಿ ಟೊಮೆಟೊ ಬೆಳೆದಿದ್ದು, ಈಗಾಗಲೇ 20 ಲಕ್ಷ ರೂ. ಆದಾಯ ಗಳಿಸಿದ್ದಾರೆ.

ಇದನ್ನೂ ಓದಿ:ಟೊಮೆಟೊ ಆಯ್ತು.. ಈಗ ಶುಂಠಿ, ಹಸಿ ಮೆಣಸಿನಕಾಯಿ ಬೆಲೆಯಲ್ಲೂ ಏರಿಕೆ

ಬೈರೇಶ್‌ ಇತ್ತೀಚೆಗೆ ಸಾವಿರ ಬಾಕ್ಸ್‌ ಟೊಮೊಟೊ ಮಾರಾಟ ಮಾಡಿದ್ದಾರೆ. ಇನ್ನೂ ಸಾವಿರ ಬಾಕ್ಸ್‌ ಹಣ್ಣು ನಿರೀಕ್ಷೆಯಲ್ಲಿದ್ದಾರೆ. ಸರ್ಕಾರಿ ಕೆಲಸದ ನಡುವೆಯೂ ಒಳ್ಳೆಯ ಕೃಷಿ ಮಾಡಿ ಬೈರೇಶ್‌ ಲಕ್ಷಾಂತರ ರೂ.ಲಾಭ ಪಡೆದಿದ್ದಾರೆ.

ಟೊಮೊಟೊ ಬೆಲೆ ಏರಿಕೆ ಹಿನ್ನೆಲೆ ಅಲ್ಲಲ್ಲಿ ಟೊಮೆಟೊ ಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ. ಅದೇ ರೀತಿ ಪೊಲೀಸ್‌ ಪೇದೆ ಬೈರೇಶ್‌ ಹೊಲಕ್ಕೂ ಕಳ್ಳರ ಕಾಟ ತಪ್ಪಿಲ್ಲ. ಕಳ್ಳರು ಈಗಾಗಲೇ ಬೈರೇಶ್‌ ಹೊಲದಿಂದ ನೂರಾರು ಬಾಕ್ಸ್‌ ಟೊಮೆಟೊ ಕಳ್ಳತನ ಮಾಡಿದ್ದಾರೆ.ನಂತರ ಎಚ್ಚೆತ್ತುಕೊಂಡ ಅವರು ರಾತ್ರಿಯಿಡೀ ಹೊಲದಲ್ಲಿ ಕಾವಲು ಕಾದು ಟೊಮೆಟೊಗಳನ್ನು ಉಳಿಸಿಕೊಂಡಿದ್ದಾರೆ. ಉಡುಪಿ,ಮಂಗಳೂರಿನಿಂದ ವರ್ತಕರು ಆಗಮಿಸಿ ಬೈರೇಶ್‌ ಹೊಲದಿಂದ ಟೊಮೆಟೊ ಖರೀದಿ ಮಾಡುತ್ತಾರೆ. ಮಳೆ ಕೊರತೆ,ರೋಗ ಬಾಧೆ, ಕಳ್ಳರ ಕಾಟದ ನಡುವೆಯೂ ಟೆಮೊಟೊ ಬೆಳೆದು ಭರ್ಜರಿ ಆದಾಯ ಗಳಿಸಿರುವ ಬೈರೇಶ್‌ ಇತರರಿಗೂ ಮಾದರಿಯಾಗಿದ್ದಾರೆ.

Please follow and like us:
Donate Janashakthi Media

Leave a Reply

Your email address will not be published. Required fields are marked *