ಪಟಾಕಿ ಸಿಡಿದು ನಾರಾಯಣ ನೇತ್ರಾಲಯದಲ್ಲಿ 20 ಪ್ರಕರಣ ದಾಖಲು

ಬೆಂಗಳೂರು: ದೀಪಾವಳಿ ಆರಂಭದಲ್ಲೇ ನಗರದಲ್ಲಿ ಪಟಾಕಿ ಸಿಡಿತದಿಂದ ಅವಘಡ ಸಂಭವಿಸಿದೆ. ಪಟಾಕಿ ಸಿಡಿದು ಮಕ್ಕಳು ಸೇರಿದಂತೆ ಒಟ್ಟು 20 ಜನರು ನಗರದ ನಾರಾಯಣ ನೇತ್ರಾಲಯದಲ್ಲಿ ದಾಖಲಾಗಿದ್ದಾರೆ.

ಬಿಜಿಲಿ ಪಟಾಕಿ ಸಿಡಿದು 11 ವರ್ಷದ ಬಾಲಕ ಗಾಯಗೊಂಡಿದ್ದಾನೆ. ಪಟಾಕಿ ಸಿಡಿಸುವುದನ್ನು ನೋಡುತ್ತಿದ್ದಾಗ ಮತ್ತೊಬ್ಬನಿಗೆ ಗಾಯವಾಗಿದೆ. ಆಟಂ ಬಾಂಬ್ ಪಟಾಕಿ ಸಿಡಿದು 48 ವರ್ಷದ ವ್ಯಕ್ತಿಯ ಕಣ್ಣಿಗೆ ಗಾಯವಾಗಿದೆ.

ಇದನ್ನೂ ಓದಿ: ಹಾಸನ | ನವೆಂಬರ್ 13ರಿಂದ CITU 16ನೇ ರಾಜ್ಯ ಸಮ್ಮೇಳನ

ಅದೇ ರೀತಿಯಾಗಿ ಇನ್ನು 6 ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ನಾರಾಯಣ ನೇತ್ರಾಲಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಪಟಾಕಿ ಸಿಡಿಸಲು ಹೋಗಿ ಮಕ್ಕಳು ಗಾಯಗೊಂಡಿದ್ದಾರೆ. ಪಟಾಕಿಯಿಂದ ಅನಾಹುತ ಸಂಭವಿಸಿದ ಪರಿಣಾಮ ಮಿಂಟೋ ಆಸ್ಪತ್ರೆಯಲ್ಲಿ 13 ಮಂದಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಇದನ್ನೂ ನೋಡಿ: ಧರ್ಮಸ್ಥಳ ನಿಗೂಢಗಳು |ಭೂ ಮಾಫಿಯಾ ವಿರುದ್ಧ ಹೋರಾಟ ಬಲಗೊಳ್ಳಲಿದೆ Janashakthi Media

Donate Janashakthi Media

Leave a Reply

Your email address will not be published. Required fields are marked *