ಎರಡು ಲಕ್ಷ ಬಿಪಿಎಲ್‌ ಕಾರ್ಡ್‌ ರದ್ದು – ಸಚಿವ ಉಮೇಶ್‌ ಕತ್ತಿ

ಬೆಂಗಳೂರು:  ವಾರ್ಷಿಕ 1.20 ಲಕ್ಷಕ್ಕೂ ಅಧಿಕ ಮೇಲ್ಪಟ್ಟು ಆದಾಯ ಹೊಂದಿದ ಕುಟುಂಬಗಳ ಬಿಪಿಎಲ್‌ ಕಾರ್ಡ್‌ ರದ್ಧು ಪಡಿಸುವ ಕೆಲಸ ನಡೆದಿದೆ ಎಂದು ಆಹಾರ ಸಚಿವ ಉಮೇಶ್‌ ಕತ್ತಿ ಸ್ಪಷ್ಟಪಡಿಸಿದರು.

ಪರಿಷತ್‌ನಲ್ಲಿ ಮಂಗಳವಾರ ಕಾಂಗ್ರೆಸ್‌ನ ಪಿ.ಆರ್‌.ರಮೇಶ್‌ ರವರು “ಕೇವಲ ಬಿಪಿಎಲ್‌ ಚೀಟಿಗಳನ್ನಷ್ಟೇ ರದ್ದು ಮಾಡಲಾಗಿದೆ. 1.20 ಲಕ್ಷಕ್ಕಿಂತ ಹೆಚ್ಚು ಆದಾಯ ಪರಿಗಣಿಸಿದ್ದು ಸರಿಯಲ್ಲ. ಒಂದು ಕುಟುಂಬವು 10 ಸಾವಿರ ರೂ.ಗಳಲ್ಲಿ ತಿಂಗಳ ಜೀವನ ನಡೆಸಲು ಸಾಧ್ಯವೇ. ಈ ಬಗ್ಗೆ ಪರಾಮರ್ಶಿಸಿ, ಆದಾಯ ಮಿತಿಯನ್ನು ಜಾಸ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ರಮೇಶ್‌ ರವರ  ಪ್ರಶ್ನೆಗೆ ಸಚಿವ ಕತ್ತಿ ಉತ್ತರಿಸುತ್ತಾ, ಬಿಪಿಎಲ್‌, ಅಂತ್ಯೋದಯಕ್ಕೆ ಉಚಿತವಾಗಿ ಅಕ್ಕಿ, ಗೋಧಿ ನೀಡುವುದನ್ನು ಮುಂದುವರಿಸಲಾಗುವುದು. ಆರ್ಥಿಕವಾಗಿ ಸಬಲರಾಗಿದ್ದರೂ ಸುಳ್ಳು ಮಾಹಿತಿ ನೀಡಿ ಬಿಪಿಎಲ್‌ ಕಾರ್ಡ್‌ ಪಡೆಯಲಾಗಿದೆ. ಸರಕಾರಿ ಮತ್ತು ಅರೆ ಸರಕಾರಿ ನೌಕರರು ಸ್ವಯಂಪ್ರೇರಿತವಾಗಿ ಬಿಪಿಎಲ್‌ ಕಾರ್ಡ್‌ಗಳನ್ನು ಮರಳಿಸಬೇಕು ಎಂದು ಮನವಿ ಮಾಡಿಕೊಂಡರು. ಉದ್ಯೋಗ ಖಾತ್ರಿ ಯೋಜನೆಯಡಿ ದಿನಕ್ಕೆ 275 ರೂ. ಕೂಲಿ ನೀಡುತ್ತಿದ್ದು, ಇದರ ಆಧಾರದ ಮೇಲೆ ಮಾನದಂಡ ರೂಪಿಸಲು ಚಿಂತನೆ ನಡೆಸಲಾಗಿದೆ. ಮಾನದಂಡಗಳಿಗೆ ವಿರುದ್ಧವಾಗಿ ಬಿಪಿಎಲ್‌ ಕಾರ್ಡ್‌ ಪಡೆದಿರುವವರ ಪತ್ತೆಗೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

ಸಿದ್ದರಾಮಯ್ಯ ನೇತೃತ್ವದ ಸರಕಾರವೇ ಸಿದ್ಧಪಡಿಸಿದ ಬಿಪಿಎಲ್‌ ಪಡಿತರ ಚೀಟಿಯ ಮಾನದಂಡಗಳ ಪ್ರಕಾರವೇ ವಾರ್ಷಿಕ 1.20 ಲಕ್ಷಕ್ಕೂ ಅಧಿಕ ಮೇಲ್ಪಟ್ಟು ಆದಾಯ ಹೊಂದಿದ ಕುಟುಂಬಗಳ ಬಿಪಿಎಲ್‌ ಕಾರ್ಡ್‌ ರದ್ಧು ಪಡಿಸುವ ಕೆಲಸ ನಡೆದಿದೆ. ಖಜಾನೆ ಇಲಾಖೆಯಿಂದ ಸರಕಾರಿ ನೌಕರರು, ಕಾರ್ಖಾನೆ, ನಿವೃತ್ತ ನೌಕರರು ಹೊಂದಿರುವ ಬಿಪಿಎಲ್‌ ಚೀಟಿಗಳನ್ನು ಎಚ್‌ಆರ್‌ಎಂಎಸ್‌ ದತ್ತಾಂಶದೊಂದಿಗೆ ಪರಿಶೀಲನೆಗೆ ಮಾಡಲಾಗುತ್ತಿದೆ. ಇದರ ಆಧಾರದಲ್ಲಿ ಈಗ ಮೂರು ವರ್ಷಗಳಿಂದ ಪಡೆದುಕೊಂಡಿದ್ದ 2,28,188 ಬಿಪಿಎಲ್‌ ಕಾರ್ಡ್‌ ರದ್ದುಪಡಿಸಿದ್ದು, 3,07,36,170 ರೂ. ದಂಡವನ್ನು ಮೂರು ವರ್ಷದಲ್ಲಿ ವಸೂಲಿ ಮಾಡಲಾಗಿದೆ ಎಂದರು.

ಇದನ್ನೂ ಓದಿ : ಬಿಪಿಎಲ್ ಕಾರ್ಡ್ ವಿವಾದ: ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಕತ್ತಿ

ಅನ್ನಭಾಗ್ಯ ಯೋಜನೆಯಲ್ಲಿ ಅಕ್ರಮ ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ವಿತರಿಸಬೇಕಿದ್ದ ಅಕ್ಕಿ ಮತ್ತು ಇತರೆ ಆಹಾರಧಾನ್ಯಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿ, ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಒತ್ತಾಯಿಸಿದರು. 2018-19 ರಿಂದ 2020-21ರವರೆಗೆ 33,092.39 ಕ್ವಿಂಟಾಲ್‌ ಅಕ್ಕಿ, 111.34 ಕ್ವಿಂಟಾಲ್‌ ಗೋಧಿ, 1.2 ಕ್ವಿಂಟಾಲ್‌ ಸಕ್ಕರೆ, 562.13 ಕ್ವಿಂಟಾಲ್‌ ರಾಗಿ, 4.5 ಕ್ವಿಂಟಾಲ್‌ ತೊಗರಿಬೇಳೆ, 0.25 ಕ್ವಿಂಟಾಲ್‌ ಕಡಲೆಬೇಳೆಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಇದರಲ್ಲಿ ಅರ್ಧ ಸತ್ಯವಷ್ಟೇ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ಆಹಾರ ಸಚಿವ ಉಮೇಶ್‌ ಕತ್ತಿ ಪ್ರತಿಕ್ರಿಯಿಸಿ, ಅಕ್ರಮ ದಾಸ್ತಾನುದಾರರು, ನ್ಯಾಯಬೆಲೆ ಅಂಗಡಿ ಮಾಲೀಕರು ಮತ್ತು ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ದಂಡ ವಿಧಿಧಿಸುವ ಜತೆಗೆ ನ್ಯಾಯಬೆಲೆ ಅಂಗಡಿಗಳ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿಅಕ್ಕಿ ವಿತರಣೆ ಪ್ರಮಾಣವನ್ನು ಕಡಿಮೆ ಮಾಡಿ, ಎಲ್ಲರಿಗೂ ಸಮಾನವಾಗಿ ವಿತರಿಸಲಾಗುತ್ತಿದೆ. ಕೇಂದ್ರ ಸರಕಾರ ಕೂಡ ಉಚಿತವಾಗಿ 10 ಕೆ.ಜಿ ಅಕ್ಕಿ ನೀಡಿದೆ ಎಂದರು.

Donate Janashakthi Media

One thought on “ಎರಡು ಲಕ್ಷ ಬಿಪಿಎಲ್‌ ಕಾರ್ಡ್‌ ರದ್ದು – ಸಚಿವ ಉಮೇಶ್‌ ಕತ್ತಿ

Leave a Reply

Your email address will not be published. Required fields are marked *