ಬೆಳಗಾವಿ: ನಗರದ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಪಿಹೆಚ್‌ಡಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಘಟನೆಯ ಬಗ್ಗೆ ವಿಶೇಷ ಸಿಂಡಿಕೇಟ್ ಸಭೆ ಕರೆಯಲಾಗಿದ್ದು, ಎರಡು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕುಲಪತಿ ತ್ಯಾಗರಾಜ್ ತಿಳಿಸಿದ್ದಾರೆ.
ಪಿಹೆಚ್‌ಡಿ ಪಡೆಯಲು ಪ್ರಯತ್ನಿಸುತ್ತಿದ್ದ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಅಕಾಡೆಮಿಕ್ ನಿಯಮಗಳ ಪ್ರಕಾರ ಅರ್ಹರಾಗಿರುವುದು ದೃಢವಾಗಿದೆ. ಆದ್ದರಿಂದ, ಅವರು ನಿಯಮಾನುಸಾರ ಅರ್ಜಿ ಸಲ್ಲಿಸಿದರೆ ಪಿಹೆಚ್‌ಡಿ ಪದವಿ ನೀಡಲಾಗುತ್ತದೆ.
ಇದೇ ವೇಳೆ, ಕಿರುಕುಳ ನೀಡಿದ ಆರೋಪಗಳ ಹಿನ್ನೆಲೆ ಪ್ರಾಧ್ಯಾಪಕ ಕೆ.ಎಲ್.ಎನ್. ಮೂರ್ತಿಗೆ ಕಡ್ಡಾಯ ನಿವೃತ್ತಿ ವಿಧಿಸಲಾಗಿದೆ. ವಿದ್ಯಾರ್ಥಿಗಳ ಜೊತೆ ಹೇಗೆ ವರ್ತಿಸಬೇಕು ಎಂಬ ಸ್ಪಷ್ಟ ನಿಯಮಗಳಿದ್ದು, ಅವನ್ನು ಉಲ್ಲಂಘಿಸಿದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತ್ಯಾಗರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಶಾಲೆಗಳಿಗೆ ಲ್ಯಾಪ್‌ಟಾಪ್ ಪೂರೈಕೆಯಲ್ಲಿ ಅಕ್ರಮ: ಲೋಕಾಯುಕ್ತ ದಾಳಿ ವೇಳೆ ಬಯಲು
ಏನಿದು ಘಟನೆ.?
ಬೆಳಗಾವಿ ಪಿಎಚ್ ಡಿ ನೀಡದಿದ್ದಕ್ಕೆ ವಿದ್ಯಾರ್ಥಿನಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ (Crime) ಯತ್ನಿಸಿರುವ ಘಟನೆ ಬೆಳಗಾವಿ ರಾಣಿ ಚನ್ನಮ್ಮ (Rani Chennamma) ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ಪಿಎಚ್ ಡಿ ಸ್ಕಾಲರ್ ವಿದ್ಯಾರ್ಥಿನಿಯನ್ನು ಸುಜಾತಾ ಬೆಂಡೆ (32) ಎಂದು ಗುರುತಿಸಲಾಗಿದೆ. ಇತ್ತೀಚೆಗೆ ರಾಣಿ ಚನ್ನಮ್ಮ ವಿವಿಯ 14 ನೇ ಘಟಿಕೋತ್ಸವದಲ್ಲಿ ಸುಜಾತಾ ಅವರಿಗೆ ಪಿಎಚ್ ಡಿ ನೀಡಿರಲಿಲ್ಲ ಎನ್ನಲಾಗಿದೆ.
ರಾಯಬಾಗ ಪ್ರದೇಶದ ಸಮಗ್ರ ಚಾರಿತ್ರಿಕ ವಿಷಯದಲ್ಲಿ ಸುಜಾತಾ ಪಿಎಚ್ ಡಿ ಮಾಡುತ್ತಿದ್ದರು. ಆದರೆ ರಾಣಿ ಚನ್ನಮ್ಮ ವಿವಿಯ 14 ನೇ ಘಟಿಕೋತ್ಸವದಲ್ಲಿ ಪಿಎಚ್ ಡಿ ಪದವಿ ಕೊಟ್ಟಿರಲಿಲ್ಲ..
ಇದರಿಂದ ತೀವ್ರ ಮನನೊಂದ ಸುಜಾತಾ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಪ್ರೋ.ಸಿ ಎಂ ತ್ಯಾಗರಾಜ್, ರಿಜಿಸ್ಟರ್ ಸಂತೋಷ ಕಾಮೇಗೌಡ ಎಂಬುವವರು ಬೇಕೆಂದೇ ನನ್ನನ್ನು ಟಾರ್ಗೆಟ್ ಮಾಡಿ ಪಿಎಚ್ ಡಿ ಪದವಿ ಕೊಡಲು ನಿರಾಕರಣೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಪ್ರೋ ಕೆ ಎಲ್ ಎನ್ ಮೂರ್ತಿ ಅವರು ನನಗೆ ಗೈಡ್ ಮಾಡುತ್ತಿದರು. ಗೈಡ್ ಮೂರ್ತಿಯವರ ಕಿರುಕುಳ ಕುರಿತಾಗಿ ನಾನು ಈ ಹಿಂದೆ ಕುಲಪತಿ ಹಾಗೂ ರಿಜಿಸ್ಟರ್ ಗೆ ದೂರು ನೀಡಿದ್ದೆ. ಅದರಂತೆ ಗೈಡ್ ಕಿರುಕುಳ ಸಮಸ್ಯೆ ಬಗೆಹರಿಸಲಾಗಿತ್ತು.
ಆದರೆ ಇದೀಗ ಎಲ್ಲಾ ಸಮಸ್ಯೆ ಬಗೆಹರಿದರೂ ಕೂಡ ನಮಗೆ ಪಿಎಚ್ ಡಿ ಪದವಿ ನೀಡಲಿಲ್ಲ. ಬೇಕೆಂದೇ ನನ್ನನ್ನು ಟಾರ್ಗೆಟ್ ಮಾಡಿ ಪಿಎಚ್ ಡಿ ಪದವಿ ಕೊಡಲು ನಿರಾಕರಣೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ ಎಂದು ಹೇಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನು ಸುಜಾತಾ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ನೋಡಿ: ದೇಶ ಕಟ್ಟುವ ಕಾರ್ಮಿಕನ ಆರೋಗ್ಯ ರಕ್ಷಿಸುವುದು ಸರ್ಕಾರದ ಕರ್ತವ್ಯ – ಕೆ.ಎಸ್ ಲಕ್ಷ್ಮಿ Janashakthi Media
