ಟೆಕ್‌ ಉದ್ಯಮ | 2023ರಲ್ಲಿ ಈವರೆಗೆ 2.26 ಲಕ್ಷ ಉದ್ಯೋಗಿಗಳು ವಜಾ!

2022ರ ಇಸವಿಗೆ ಹೋಲಿಸಿದರೆ ಇದು ಸುಮಾರು 40% ದಷ್ಟು ಏರಿಕೆಯಾಗಿದೆ ಎಂದು ವರದಿಯಾಗಿದೆ ಟೆಕ್‌ ಉದ್ಯಮ

ಬೆಂಗಳೂರು: ಟೆಕ್‌ ಉದ್ಯಮವು ಈ ವರ್ಷ ಅತೀ ಹೆಚ್ಚಿನ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ ಎಂದು ಆಲ್ಟ್‌ಇಂಡೆಕ್ಸ್‌ನ ಡೇಟಾ ವರದಿ ಹೇಳಿದೆ. ಕಳೆದ ವರ್ಷಗಳಿಗೆ ಹೋಲಿಸಿದೆ ಈ ವಜಾಗೊಳಿಸುವಿಕೆಯು 40%ದಷ್ಟು ಏರಿಕೆಯಾಗಿದೆ ಎಂದು ಅದು ಉಲ್ಲೇಖಿಸಿದೆ. ಈ ವರೆಗೆ ಈ ವರ್ಷ ಒಟ್ಟು 2,26,000 ಉದ್ಯೋಗಿಗಳನ್ನು ಟೆಕ್ ಕಂಪನಿಗಳು ಕೈಬಿಟ್ಟಿವೆ ಎಂದು ವರದಿ ಹೇಳಿದೆ.

ಆಲ್ಟ್‌ಇಂಡೆಕ್ಸ್‌ನ ಡೇಟಾ ಪ್ರಕಾರ, 2022 ರಲ್ಲಿ 2,02,000 ಉದ್ಯೋಗಿಗಳನ್ನು ಟೆಕ್‌ ಕಂಪೆನಿಗಳು ವಜಾಗೊಳಿಸಿತ್ತು. ಆದರೆ 2023ರಲ್ಲಿ ಇದು ಸುಮಾರು 40% ದಷ್ಟು ಏರಿಕೆಯಾಗಿದ್ದು, ಈ ವರ್ಷ ಟೆಕ್‌ ವಲಯವು ಭೀಕರ ಕುಸಿತವನ್ನು ಅನುಭವಿಸುತ್ತಿದೆ ಎಂಬುವುದನ್ನು ವರದಿಯು ಸೂಚಿಸುತ್ತದೆ.

ಇದನ್ನೂ ಓದಿ: 77ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ 5ಗ್ಯಾರಂಟಿಗಳ ಬಗ್ಗೆ ಪ್ರಸ್ತಾಪಿಸಿದ :ಸಿಎಂ ಸಿದ್ಧರಾಮಯ್ಯ

ಉದ್ಯೋಗಿಗಳ ಈ ವಜಾಗೊಳಿಸುವಿಕೆಯಿಂದಾಗಿ ತೀವ್ರವಾದ ಪರಿಣಾಮವನ್ನು ಬೀರಿದ್ದು, ಹಲವಾರು ಕೆಲಸದ ಸ್ಥಳಗಳನ್ನು ಮುಚ್ಚಲಾಗಿದೆ. 2023ರ ವರ್ಷವನ್ನು ಟೆಕ್ ಉದ್ಯಮವು ಅತ್ಯಂತ ಹಿನ್ನಡೆ ಅನುಭವಿಸಿದ ವರ್ಷ ಎಂಬ ದಾಖಲೆಯಾಗಲಿದೆ ಎಂದು ವರದಿ ಹೇಳಿದೆ.

2022 ರ ಜನವರಿಯಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ, ಟೆಕ್ ಉದ್ಯಮದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವಿಕೆಯು ತೀವ್ರ ಉಲ್ಬಣ ಕಂಡಿತ್ತು. ಈ ವೇಳೆಯಲ್ಲಿ ಸುಮಾರು 1,64,744 ಉದ್ಯೋಗಿಗಳನ್ನು ಕೈಬಿಡಲಾಗಿತ್ತು. ಈ ಸಂಖ್ಯೆಯು ಅದರ ಹಿಂದಿನ ವರ್ಷ ವರದಿಯಾದ 15,000 ಕ್ಕಿಂತ ಸುಮಾರು ಹನ್ನೊಂದು ಪಟ್ಟು ಹೆಚ್ಚಾಗಿದೆ.

ಆತಂಕಕಾರಿ ವಿಚಾರವೇನೆಂದರೆ 75,912 ಉದ್ಯೋಗಿಗಳು ಕಳೆದ ವರ್ಷದ ಜನವರಿ ತಿಂಗಳಲ್ಲೆ ನಿರುದ್ಯೋಗಿಗಳಾಗಿದ್ದರು. ಇದು 2022 ರಲ್ಲಿ ವರದಿಯಾದ ಒಟ್ಟು ವಜಾಗೊಳಿಸುವಿಕೆಯ ಅರ್ಧದಷ್ಟು ಉದ್ಯೋಗಿಗಳನ್ನು ಹೊಂದಿದೆ.

ಇದರ ನಂತರ 2022ರ ಫೆಬ್ರವರಿಯಲ್ಲಿ ಉದ್ಯೋಗ ಕಡಿತಗಳ ಸಂಖ್ಯೆ ಕಡಿಮೆಯಾಯಿತಾದರೂ, ಸುಮಾರು 40,000ಕ್ಕೂ ಹೆಚ್ಚಿನ ಉದ್ಯೋಗಿಗಳನ್ನು ವಜಾಗೊಳಿಸಲಾಗಿತ್ತು. ನಂತರದ ಮೂರು ತಿಂಗಳುಗಳಲ್ಲಿ ವಜಾಗೊಳಿಸುವಿಕೆ ಕಡಿಮೆಯಾದರೂ ಈ ಅವಧಿಯಲ್ಲಿ ಟೆಕ್ ವಲಯವು ಇನ್ನೂ ಸುಮಾರು 73,000 ಉದ್ಯೋಗ ನಷ್ಟಗಳನ್ನು ದಾಖಲಿಸಿದೆ.

ಇದನ್ನೂ ಓದಿ: ಮುಂದಿನ ವರ್ಷವು ಕೆಂಪುಕೋಟೆಯಲ್ಲಿ ಭಾಷಣ ಮಾಡುತ್ತೇನೆ : ಪ್ರಧಾನಿ ಮೋದಿ

ಅಂದಿನಿಂದ, ಹೆಚ್ಚುವರಿಯಾಗಿ 24,000 ಉದ್ಯೋಗಿಳಿಗೆ ವಜಾಗೊಳಿಸುವ ಬಗ್ಗೆ ನೋಟಿಸ್ ನೀಡಲಾಗಿದೆ. ಇತ್ತೀಚಿನ ವರದಿಯ ಪ್ರಕಾರ ಟಕ್‌ ಕ್ಷೇತ್ರದಲ್ಲಿ ಒಟ್ಟು ವಜಾಗೊಳಿಸುವಿಕೆಯ ಸಂಖ್ಯೆ 2,26,117 ಕ್ಕೆ ಏರಿಕೆಯಾಗಿದೆ. ಉದ್ಯೋಗ ಕಡಿತದ ಈ ರೀತಿಯ ತೀವ್ರ ಹೆಚ್ಚಳಕ್ಕೆ ಅನಿಶ್ಚಿತ ಜಾಗತಿಕ ಆರ್ಥಿಕತೆ, ಹಣದುಬ್ಬರ ಮತ್ತು ಆದಾಯದ ಬೆಳವಣಿಗೆಯಲ್ಲಿನ ಕುಸಿತ ಸೇರಿದಂತೆ ಹಲವಾರು ಅಂಶಗಳಿಗೆ ಕಾರಣವಾಗಿದೆ.

ಗೂಗಲ್, ಮೆಟಾ, ಮೈಕ್ರೋಸಾಫ್ಟ್ ಮತ್ತು ಅಮೆಜಾನ್‌ನಂತಹ ಪ್ರಮುಖ ಉದ್ಯಮ ದೈತ್ಯರು ಕೂಡಾ ಈ ವಜಾಗೊಳಿಸುವ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿದ್ದು, ಇದು ಟೆಕ್ ಉದ್ಯಮದ ಸಂಕಷ್ಟದಲ್ಲಿದೆ ಎಂಬುವುದನ್ನು ಸೂಚಿಸುತ್ತದೆ ಎಂದು ಬ್ಯುಸಿನೆಸ್ ಟುಡೆ ವರದಿ ಹೇಳಿದೆ.

ಆರ್ಥಿಕ ಏರಿಳಿತದ ಪರಿಣಾಮ ಚಿಲ್ಲರೆ ವ್ಯಾಪಾರ, ಕ್ರಿಪ್ಟೋಕರೆನ್ಸಿ ಮತ್ತು ಸಾರಿಗೆಯಂತಹ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಣ್ಣ ಟೆಕ್ ಸಂಸ್ಥೆಗಳಿಗೂ ವಿಸ್ತರಿಸಿದೆ. ಇದರಿಂದಾಗಿ ಈ ಕಂಪನಿಗಳು ತಮ್ಮ ವೆಚ್ಚವನ್ನು ಕಡಿತ ಮಾಡುವ ಕ್ರಮಗಳನ್ನು ಕೈಗೊಳ್ಳುವ ಅನಿರ್ವಾರ್ಯತೆಗೆ ತಲುಪಿದೆ. ಹಾಗಾಗಿ ಟೆಕ್ ಉದ್ಯಮವು ಇದುವರೆಗೆ ಕಂಡಿರದ ಭಾರಿ ಮಟ್ಟದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ.

ಕಳೆದ ಮೂರು ವರ್ಷಗಳಿಂದ ಟೆಕ್‌ ಉದ್ಯಮವು ತಮ್ಮ ಉದ್ಯೋಗಿಗಳನ್ನು ವಜಾಗೊಳಿಸಿದ ಅಂಕಿಅಂಶಗಳನ್ನು ಗಮನಿಸಿದರೆ ಉದ್ಯಮದ ಕಠೋರವಾದ ಚಿತ್ರಣ ಕಾಣಿಸುತ್ತದೆ. 2021ರಿಂದ ಟೆಕ್ ಕಂಪನಿಗಳು 4,05,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ.

ವಿಡಿಯೊ ನೋಡಿ: ನ್ಯಾಯಾಂಗದ ಸ್ವಾತಂತ್ರ್ಯದ ಮೇಲಿನ ದಾಳಿ : ಜಸ್ಟೀಸ್‌ ಎಚ್.ಎನ್‌. ನಾಗಮೋಹನದಾಸ್‌ ವಿಶ್ಲೇಷಣೆ Janashakthi Media

Donate Janashakthi Media

Leave a Reply

Your email address will not be published. Required fields are marked *