ತುಂಗಭದ್ರಾ ಡ್ಯಾಂನ 19ನೇ ಗೇಟ್ ಚೈನ್ ಲಿಂಕ್ ಕಟ್: ಗೇಟ್ ಅಳವಡಿಕೆ ಕಾರ್ಯ ಚುರುಕು

Please follow and like us:
ಕೊಪ್ಪಳ: ಕೊಪ್ಪಳ ಜಿಲ್ಲೆಯ ಮುನಿರಾಬಾದ್ ತುಂಗಭದ್ರಾ ಡ್ಯಾಂನ 19ನೇ ಗೇಟ್ ಚೈನ್ ಲಿಂಕ್ ಕಟ್ ಆಗಿ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಗೇಟ್ ಅಳವಡಿಕೆ ಕಾರ್ಯ ಚುರುಕುಗೊಂಡಿದೆ.

ತುಂಗಭದ್ರಾ ಡ್ಯಾಂ ಬಳಿ ಗೇಟ್ ಅಳವಡಿಕೆ ನಡೆಸಲಾಗುತ್ತಿದೆ. ತಜ್ಞರು ಹಾಗೂ ಸಿಬ್ಬಂದಿಗಳು ಟ್ರಕ್ ಮೂಲಕವಾಗಿ ಟಿಬಿ ಡ್ಯಾಂ ಬಳಿ ಬೃಹತ್ ಗೇಟ್ ಸಾಗಿಸಿದ್ದಾರೆ. ಈ ವೇಳೆ ಟ್ರಕ್ ನಿಂದ ಗೇಟ್ ಇಳಿಸುವಾಗ ಅವಘಡ ಸಂಭವಿಸಿದೆ.

ಇದನ್ನು ಓದಿ : ವರಮಹಾಲಕ್ಷ್ಮಿ ಹಬ್ಬದ ಆಚರಣೆ ಹಿನ್ನಲೆ; ಗಗನಕ್ಕೇರಿದ ಹೂವು, ಹಣ್ಣು, ತರಕಾರಿ ದರ

ಟ್ರಕ್ ನಿಂದ ಗೇಟ್ ಇಳಿಸುತ್ತಿದ್ದ ವೇಳೆ ಏಕಾಏಕಿ ಬ್ಯಾಲೆನ್ಸ್ ತಪ್ಪಿದೆ. ಗೇಟ್ ನ್ನು ಡ್ಯಾಂ ನ ಮೇಲ್ಭಾಗಕ್ಕೆ ಬೆಲ್ಟ್ ಕಟ್ಟಿ ಎತ್ತುವಾಗ ಒಮ್ಮೆಲೆ ಬ್ಯಾಲೆನ್ಸ್ ತಪ್ಪಿದೆ. ಬಳಿಕ ಸಿಬ್ಬಂದಿಗಳು ನಿಧಾನವಾಗಿ ಗೇಟ್ ಇಳಿಸಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.

ಟಿಬಿ ಡ್ಯಾಂಗೆ ಗೇಟ್ ಅಳವಡಿಸುವುದೇ ಒಂದು ದೊಡ್ಡ ಚಾಲೇಂಜ್. ಇನ್ನು ಮೂರು ದಿನಗಳಲ್ಲಿ ಶುಭ ಸುದ್ದಿ ಕೊಡುತ್ತೇವೆ ಎಂದು ತಜ್ಞರು ತಿಳಿಸಿದ್ದಾರೆ.

ಇದನ್ನು ನೋಡಿ : ಬೆಂಗಳೂರಲ್ಲಿ ಭಾರೀ ಮಳೆ : ರಸ್ತೆ ಜಲಾವೃತ, ಸಂಚಾರಕ್ಕೆ ಸಂಕಷ್ಟJanashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *