ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿಯ ಹನುಮಂತಪುರದಲ್ಲಿ ರಾಜ್ಯದಲ್ಲಿ ಹುಲಿ, ಕೋತಿಗಳ ಹತ್ಯೆ ನಡೆದ ಘಟನೆಯ ಬೆನ್ನಲ್ಲೇ 19 ನವಿಲುಗಳು ನಿಗೂಢ ಸಾವನ್ನಪ್ಪಿರುವ ಘಟನೆ ನಡೆದಿದೆ.
ನಗರದಲ್ಲಿ 19 ನವಿಲುಗಳು ನಿಗೂಢವಾಗಿ ಸಾವನ್ನೊಪ್ಪಿದ್ದೂ, ನವಿಲುಗಳ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಎಫ್ಎಸ್ಎಲ್ ತನಿಖೆಯಿಂದ ಸಾವಿಗೆ ಕಾರಣ ತಿಳಿದು ಬರಲಿದೆ.
ಇದನ್ನೂ ಓದಿ: ಸರ್ಕಾರಿ ಕಛೇರಿಗಳಲ್ಲಿ ಹಿರಿಯ ನಾಗರಿಕರೊಂದಿಗೆ ಗೌರವದಿಂದ ವರ್ತಿಸಿ: ರಾಜ್ಯ ಸರ್ಕಾರ
14 ಹೆಣ್ಣು ನವಿಲುಗಳು ಸೇರಿ 19 ನವಿಲುಗಳ ಮೃತದೇಹ ಪತ್ತೆ ಆಗಿದೆ. ಬೆಳಗ್ಗೆ ರೈತರು ಜಮೀನಿಗೆ ಹೋಗಿದ್ದಾಗ ನವಿಲಿನ ಮೃತದೇಹ ಪತ್ತೆಯಾಗಿದೆ. ಕ್ರಿಮಿನಾಶಕ ಸಿಂಪಡಿಸಿರುವ ಬೆಳೆಗಳನ್ನು ಸೇವಿಸಿ ನವಿಲು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ನೋಡಿ: ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಬಗ್ಗೆ ಮಾತನಾಡುವುದು ತಪ್ಪೆ? ಯಾಕೆ ಅಪಪ್ರಚಾರ ಮಾಡ್ತೀರಿ? Janashakthi Media
