ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ವೇಳೆ ಅವಾಂತರ: 19 ಮಂದಿಗೆ ಗಾಯ

ಮಧುರೈ: ತಮಿಳುನಾಡಿನ ಮಧುರೈ ಜಿಲ್ಲೆಯ ಅವನಿಯಾಪುರಂನಲ್ಲಿ ಇಂದು(ಜನವರಿ 15) ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಕನಿಷ್ಠ 19 ಮಂದಿ ಗಾಯಗೊಂಡಿದ್ದಾರೆ. ಜಲ್ಲಿಕಟ್ಟು ಸ್ಪರ್ಧೆ ವೇಳೆ ಹೋರಿ ತಿವಿದು ಗಾಯಗೊಂಡಿರುವವರು ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕಂದಾಯ ಇಲಾಖೆ ತಿಳಿಸಿದೆ.

ತಮಿಳುನಾಡಿನಲ್ಲಿ ಮಾಟ್ಟು ಪೊಂಗಲ್‌ ಆಚರಣೆ ವೇಳೆ ನಡೆಯುವ ಅತ್ಯಂತ ಜನಪ್ರಿಯ ಗೂಳಿ ಪಳಗಿಸುವ ಕಾರ್ಯಕ್ರಮ ಇದಾಗಿದೆ. ರಾಜ್ಯದ ವಿವಿಧ ಪ್ರದೇಶಗಳಲ್ಲಿ ಜಲ್ಲಿಕಟ್ಟು ಸ್ಪರ್ಧೆಯು ಮುಂಜಾನೆಯಿಂದ ಆರಂಭಗೊಂಡಿತು. ಮಧುರೈನ ಮೂರು ಗ್ರಾಮಗಳಲ್ಲಿ ಕಾರ್ಯಕ್ರಮ ನಡೆಯುತ್ತಿದೆ.

ಇದನ್ನು ಓದಿ: ಮಧುರೈ: ನಾಲ್ಕು ಬೃಹತ್‌ ಕೈಗಾರಿಕಾ ಕಾರಿಡಾರ್‌ ಸ್ಥಾಪಿಸಲು ಮುಖ್ಯಮಂತ್ರಿಗಳಿಗೆ ಸಿಪಿಐ(ಎಂ) ನಿಯೋಗ ಮನವಿ

ಅತ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿರುವ ಜಲ್ಲಿಕಟ್ಟು ಸ್ಪರ್ಧೆಯು ಅಪಾಯಕಾರಿ ಕ್ರೀಡೆ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಭಾಗವಹಿಸುವವರು ಅದರ ಕೊಂಬನ್ನು ಹಿಡಿದು ಪಳಗಿಸಲು ಪ್ರಯತ್ನಿಸುತ್ತಾರೆ. ಜನರು ಕೋಪೋದ್ರಿಕ್ತ ಎತ್ತುಗಳನ್ನು ಪಳಗಿಸಲು ಪ್ರಯತ್ನಿಸುವಾಗ ತಮ್ಮನ್ನು ತಾವು ಗಾಯಗೊಳಿಸಿಕೊಳ್ಳುತ್ತಾರೆ. ವಿಜೇತರಿಗೆ ದ್ವಿಚಕ್ರ ವಾಹನಗಳು, ಬಟ್ಟೆಗಳು, ಆಭರಣಗಳು ಮತ್ತು ಹಣವನ್ನು ನೀಡಲಾಗುತ್ತದೆ.

ತಮಿಳುನಾಡಿನಲ್ಲಿ ಮಾಟ್ಟು ಪೊಂಗಲ್ ಅತಿದೊಡ್ಡ ಹಬ್ಬವಾಗಿದ್ದು, ಇದು ಹಬ್ಬದ ದಿನದಿಂದ ನಾಲ್ಕೈದು ದಿನಗಳವರೆಗೂ ಆಚರಿಸಲಾಗುತ್ತದೆ. ವಿವಿಧ ಸ್ಥಳಗಳಲ್ಲಿ ನಡೆಯುವ ಜಲ್ಲಿಕಟ್ಟು ಕಾರ್ಯಕ್ರಮಗಳಲ್ಲಿ ಹಲವಾರು ಯುವಕರು ಭಾಗವಹಿಸುತ್ತಾರೆ.

ಸ್ಪರ್ಧೆಯಲ್ಲಿ ಗಾಯಗೊಂಡಿರುವ ಘಟನೆ ಹೊರತಾಗಿಯೂ ಇಂದು ಸಂಜೆ 4 ಗಂಟೆಯವರೆಗೂ ಜಲ್ಲಿಕಟ್ಟು ಸ್ಪರ್ಧೆ ಮುಂದುವರೆಯಲಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *