ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಮಾಹಿತಿ ಹಕ್ಕು ಕಾಯ್ದೆ(ಆರ್.ಟಿ.ಐ.)ಗೆ ತರುತ್ತಿರುವ ತಿದ್ದುಪಡಿಗಳು “ತೀವ್ರ ಅಪಾಯಕಾರಿ”ಯಾಗಿದ್ದು, ತಿದ್ದುಪಡಿ ಕಾಯ್ದೆಯು ಆರ್‌ಟಿಐ ಕಾಯ್ದೆಯನ್ನೆ ”ಕೊಲ್ಲಲು” ವಿನ್ಯಾಸಗೊಳಿಸಲಾಗಿದೆ ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಅವರು ಬುಧವಾರ ಆತಂಕ ವ್ಯಕ್ತಪಡಿಸಿದ್ದಾರೆ. 2005ರ ಅಕ್ಟೋಬರ್ 12 ರಂದು ಜಾರಿಯಾಗಿರುವ ಆರ್ ಟಿಐ ಕಾಯ್ದೆಗೆ 18 ವರ್ಷವಾಗಿರುವ ಹಿನ್ನೆಲೆ, 2004-02ರಲ್ಲಿ ಕಾಯ್ದೆಯ ಕರಡು ಪ್ರಕ್ರಿಯೆಯ ಭಾಗವಾಗಿದ್ದ ಜೈರಾಮ್ ರಮೇಶ್ ಅವರ ಈ ಹೇಳಿಕೆ ಭಾರಿ ಮಹತ್ವ ಪಡೆದಿದೆ.
ಆರ್.ಟಿ.ಐ. ತಿದ್ದುಪಡಿ ಕಾಯ್ದೆ ತಿದ್ದುಪಡಿ ಮಸೂದೆ ಬಗ್ಗೆ ಟ್ವಿಟರ್(ಎಕ್ಸ್)ನಲ್ಲಿ ಹೇಳಿಕೆ ನೀಡಿರುವ ಜೈರಾಮ್ ರಮೇಶ್ ಅವರು,”ಆರ್‌ಟಿಐ ಕಾಯ್ದೆ ಕನಿಷ್ಠ 2014 ರವರೆಗೆ ಪರಿವರ್ತಿತವಾಗಿತ್ತು. ಅದರ ನಂತರ ಮೋದಿ ಸರ್ಕಾರವು ಕಾನೂನನ್ನು ದುರ್ಬಲಗೊಳಿಸಲು, ಅದರ ನಿಬಂಧನೆಗಳನ್ನು ದುರ್ಬಲಗೊಳಿಸಲು, ಪ್ರಧಾನ ಮಂತ್ರಿಯ ಪರವಾಗಿ ಡೋಲು ಬಡಿಯುವವರನ್ನು ಅದರ ಆಯುಕ್ತರನ್ನಾಗಿ ನೇಮಿಸಲಾಗಿದ್ದು, ಆರ್‌ಟಿಐ ವಿನಂತಿಗಳನ್ನು ತಿರಸ್ಕರಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ” ಎಂದು ಹೇಳಿದ್ದಾರೆ.
RTI ಯ ಪ್ರಭಾವ
ದೇಶವೂ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕಡೆಗೆ ನಡೆದ ಹೆಜ್ಜೆ ಪ್ರಮುಖ ಮೈಲಿಗಲ್ಲಾಗಿದೆ ಮಾಹಿತಿ ಹಕ್ಕು (ಆರ್‌ಟಿಐ) ಕಾಯಿದೆ. 2005 ರಲ್ಲಿ ಜಾರಿಗೆ ಬಂದ ಈ ಕಾಯಿದೆಯು ದೇಶದ ನಾಗರಿಕರು, ಹೋರಾಟಗಾರರು ಮತ್ತು ಪತ್ರಕರ್ತರ ಕೆಲಸವನ್ನು ಸರಳವಾಗಿಸಿದೆ. ಈ ಕಾಯ್ದೆಯು ಅವರಿಗೆ ಶಕ್ತಿಯುತ ಸಾಧನವಾಗಿದ್ದು, ಸರ್ಕಾರದಿಂದ ಮಾಹಿತಿಯನ್ನು ಪಡೆಯುವ ಅಧಿಕಾರ ನೀಡಿದೆ. ಇದರಿಂದಾಗಿ ದೇಶವು ಪಾರ್ದರ್ಶಕತೆ ಮತ್ತು ಪರಿಶೀಲನೆ ಯುಗವನ್ನು ಪ್ರವೇಶಿಸಿದ್ದು, ಆಡಳಿತದ ನಿರ್ಣಾಯಕ ಮಾಹಿತಿಯನ್ನು ಪಡೆದು ಅದಕ್ಕೆ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವ ಅವಕಾಶವನ್ನು ಈ ಕಾಯ್ದೆಯು ನೀಡಿತು.
ಆರ್‌ಟಿಐ ಪ್ರಶ್ನೆಗಳಿಗೆ ಸರ್ಕಾರಿ ಅಧಿಕಾರಿಗಳು ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ಪ್ರತಿಕ್ರಿಯಿಸಬೇಕು ಎನ್ನುವುದನ್ನು ಕಡ್ಡಾಯಗೊಳಿಸಿರುವ ಈ ಕಾಯಿದೆಯು, ಅದನ್ನು ಪಾಲಿಸದ ಅಧಿಕಾರಿಗಳಿಗೆ ದಂಡ ವಿಧಿಸುತ್ತದೆ. ಆರ್‌ಟಿಐ ಆಂದೋಲನದಲ್ಲಿ ದೇಶದ ಹಲವಾರು ಹೋರಾಟಗಾರರು ಮತ್ತು ಪತ್ರಕರ್ತರು ಮುಂಚೂಣಿಯಲ್ಲಿದ್ದು, ಸರ್ಕಾರದ ಭ್ರಷ್ಟಾಚಾರವನ್ನು ಬಹಿರಂಗಪಡಿಸಲು ಕಾಯಿದೆಯು ಅವರಿಗೆ ಪ್ರಬಲ ಅಸ್ತ್ರವನ್ನು ಒದಗಿಸಿದೆ.
ಭೂಮಿಯ ಹಕ್ಕುಗಳು, ಪರಿಸರ ಸಂರಕ್ಷಣೆ, ಸಾರ್ವಜನಿಕ ನಿಧಿಯ ದುರುಪಯೋಗ ಮತ್ತು ಸಾಮಾಜಿಕ ನ್ಯಾಯದಂತಹ ಸಮಸ್ಯೆಗಳ ಬಗ್ಗೆ ಆಳವಾದ ಅಧ್ಯಯನ ಕೈಗೊಳ್ಳಲು ಇದು ಹೋರಾಟಗಾರರಿಗೆ ಅನುವು ಮಾಡಿಕೊಟ್ಟಿದ್ದು, ಇದು ಸಾಮಾಜಿಕ ಬದಲಾವಣೆಯ ಹೋರಾಟವನ್ನು ವೇಗಗೊಳಿಸುತ್ತದೆ. ಆರ್.ಟಿ.ಐ. ಅರ್ಜಿಗಳ ಮೂಲಕವೆ ಪತ್ರಕರ್ತರು ಹಲವಾರು ಹಗರಣಗಳನ್ನು ಬಯಲಿಗೆಳೆದಿರುವ ಉದಾಹರಣೆಯಿದೆ. ಹಲವು ತನಿಖಾ ವರದಿಗಳಿಗೆ ಆರ್‌ಟಿಐ ಪ್ರಮುಖ ಅಸ್ತ್ರವಾಗಿದೆ.
ಇದನ್ನೂ ಓದಿ: Mahisha Dasara| ಪೊಲೀಸ್ ಭದ್ರತೆಯಲ್ಲಿ ಮಹಿಷ ದಸರಾ; ನಿಷೇದಾಜ್ಞೆ ಜಾರಿ
2G ತರಂಗಾಂತರ ಪರವಾನಗಿಗಳ ಹಂಚಿಕೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಮಾಹಿತಿಯನ್ನು ಆರ್‌ಟಿಐ ಹೊರಗೆಡವಿತ್ತು, ಇದು ದೇಶದಲ್ಲಿ ಭಾರಿ ಚರ್ಚೆಯನ್ನು ಹುಟ್ಟು ಹಾಕಿತ್ತು. ಅಲ್ಲದೆ, ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಯಲ್ಲಿನ ಭ್ರಷ್ಟಾಚಾರವನ್ನು ಕೂಡಾ ಆರ್.ಟಿ.ಐ. ಮಾಹಿತಿಗಳು ಬಹಿರಂಗಪಡಿಸಿತ್ತು. ಇಷ್ಟೆ ಅಲ್ಲದೆ, ಮಹಾರಾಷ್ಟ್ರದಲ್ಲಿ ಆರು ವರ್ಷಗಳಲ್ಲಿ 15,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ 2019 ರ ಆರ್‌ಟಿಐ ಮಾಹಿತಿಯೊಂದು ರೈತರ ಆತ್ಮಹತ್ಯೆಗಳ ಅಂಕಿ ಅಂಶಗಳನ್ನು ಬಹಿರಂಗಪಡಿಸಿ, ಕೃಷಿ ಬಿಕ್ಕಟ್ಟಿನ ಮೇಲೆ ಬೆಳಕು ಚೆಲ್ಲಿತ್ತು.
ಆರ್.ಟಿ.ಐ. ಕಾಯ್ದೆಯ ಮೇಲೆ ಕೇಂದ್ರ ಸರ್ಕಾರದ ದಾಳಿ
ದೇಶದಲ್ಲಿ ಭಾರಿ ಬದಲಾವಣೆಗೆ ಕಾರಣವಾಗಿರುವ ‘ಮಾಹಿತಿ ಹಕ್ಕು ಕಾಯಿದೆ – 2005’ ಈ ವರ್ಷ ಜುಲೈ 19 ರಂದು ಯಾವುದೆ ಸಂಸದೀಯ ಚರ್ಚೆಯಿಲ್ಲದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ತಿದ್ದುಪಡಿಗೆ ಒಳಗಾಗಿದೆ. ಒಂದು ವಾರದೊಳಗೆ ತಿದ್ದುಪಡಿ ಮಸೂದೆಯು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ತ್ವರಿತವಾಗಿ ಅಂಗೀಕರಿಸಲ್ಪಟ್ಟಿರುವ ವೇಗವನ್ನು ಗಮನಿಸಿದ ದೇಶದ ಪ್ರಜ್ಞಾವಂತರು ತೀವ್ರ ಕಳವಳ ವ್ಯಕ್ತಪಡಿಸಿದ್ದರು.
ಕೇಂದ್ರದ ಬಿಜೆಪಿ ಸರ್ಕಾರ ಮಾಡಿರುವ ಈ ಬದಲಾವಣೆಳು, ಮಾಹಿತಿ ಆಯುಕ್ತರ ಅಧಿಕಾರಾವಧಿ ಮತ್ತು ವೇತನವನ್ನು ನಿರ್ಧರಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತವೆ. ಈ ಹಿಂದೆ ನಿಗದಿತ ಐದು ವರ್ಷಗಳ ಅವಧಿಯೊಂದಿಗೆ ಚುನಾವಣಾ ಆಯುಕ್ತರಿಗೆ ಸಮಾನವಾದ ಸ್ಥಾನಮಾನವು ಮಾಹಿತಿ ಆಯುಕ್ತರಿಗೆ ಇದ್ದವು.
ಹಿರಿತನ ಮತ್ತು ಶ್ರೇಣೀಕರಣದ ಮೇಲೆ ಹೆಚ್ಚು ಅವಲಂಬಿತವಾಗಿರುವ ಸರ್ಕಾರಿ ವ್ಯವಸ್ಥೆಯು, ಮಾಹಿತಿ ಅಧಿಕಾರಿಗಳ ಪಾತ್ರವನ್ನು ಕೆಳಮಟ್ಟಕ್ಕಿಳಿಸಿ RTI ಯ ಮೂಲತತ್ವವನ್ನು ದುರ್ಬಲಗೊಳಿಸಲಿದೆ ಎಂದು ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಾವಧಿ ಮತ್ತು ವೇತನವು ಈಗ ಸರ್ಕಾರದ ನಿರ್ಧಾರಗಳಿಗೆ ಒಳಪಟ್ಟಿರುವುದರಿಂದ, ಮಾಹಿತಿ ಆಯುಕ್ತರು ಸಾರ್ವಜನಿಕ ಸಂಸ್ಥೆಗಳ ಮಾಹಿತಿಯನ್ನು ಬಹಿರಂಗಪಡಿಸಲು ಒತ್ತಾಯಿಸುವುದು ಕಷ್ಟಕರವಾಗಿ ಪರಿಣಮಿಸಬಹುದು. ಇದಲ್ಲದೆ, ಸರ್ಕಾರಿ ದಾಖಲೆಗಳನ್ನು ಪಡೆಯುವುದು ತಮಗಿಂತ ಮೇಲಿನ ಶ್ರೇಣಿಯ ಅಧಿಕಾರಿಯ ಅನುಮೋದನೆಯ ಮೇಲೆ ಅವಲಂಬಿತವಾಗಲಿದೆ.
ಇದನ್ನೂ ಓದಿ: ಐಟಿಐ ಘಟಿಕೋತ್ಸವದ ವೇದಿಕೆಯಲ್ಲಿ ಮೋದಿ ಚಿತ್ರ ಮಾತ್ರವೆ ಇರಬೇಕು: ಕೇಂದ್ರ ಸರ್ಕಾರ ಆದೇಶ
“ಆರ್.ಟಿ.ಐ. ಕಾಯಿದೆಯು ಸ್ವತಃ ಪ್ರಧಾನಿಯವರಿಗೆ ತೀವ್ರ ಮುಜುಗರ ಉಂಟುಮಾಡಿದೆ. ಹಾಗಾಗಿಯೆ ಈ ಕಾಯ್ದೆಗೆ ತಿದ್ದುಪಡಿ ಮಾಡಲಾಗುತ್ತಿದೆ. ನಾನು ಈ ಕೆಲವು ತಿದ್ದುಪಡಿಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದೆ. ಆರ್‌ಟಿಐಯ ಸ್ಟೇಟಸ್ ಅನ್ನು ‘ಓ ಶಾಂತಿ’ ಅಥವಾ ‘RIP’ ಎಂದು ಹಾಕುವ ಮೊದಲು ಅರ್ಜಿಯನ್ನು ಆದಷ್ಟು ಶೀಘ್ರವೇ ಆಲಿಸಲಾಗುತ್ತದೆ ಎಂದು ನಾನು ಭಾವಿಸಿದ್ದೇನೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಂಸತ್ತಿನಲ್ಲಿ ಹೇಳಿದ್ದಾರೆ.
ಮನಮೋಹನ್ ಸಿಂಗ್ ಸರ್ಕಾರವು ರಚಿಸಿದ ಮೂಲ ಮಸೂದೆಯಲ್ಲಿ ಮಾಹಿತಿ ಆಯುಕ್ತರ ಸ್ಥಾನಮಾನವೂ ಭಾರತ ಸರ್ಕಾರದ ಕಾರ್ಯದರ್ಶಿಗಳ ಸ್ಥಾನಕ್ಕೆ ಸಮಾನವಾಗಿತ್ತು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. ಮುಖ್ಯವಾಗಿ ಕೇಂದ್ರ ಸರ್ಕಾರ ತಂದಿರುವ ತಿದ್ದುಪಡಿಗಳು ಆರ್‌ಟಿಐ ಕಾಯ್ದೆಯ ಸೆಕ್ಷನ್ 31 ಮತ್ತು 32 ಅನ್ನು ತಿದ್ದುಪಡಿ ಮಾಡುತ್ತವೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಉದ್ಧೇಶಪೂರ್ವಕವಾಗಿ ಈ ತಿದ್ದಪಡಿಯನ್ನು ಮಾಡುತ್ತಿದೆ ಎಂದು ಅವರು ಹೇಳಿದ್ದು, ಐದು ಪ್ರಮುಖ ಪ್ರಕರಣಗಳ ಕಾರಣಕ್ಕೆ ಮೋದಿ ಸರ್ಕಾರವು ಕಾಯಿದೆಯನ್ನು ತಿದ್ದುಪಡಿ ಮಾಡುತ್ತಿದೆ ಎಂದು ಹೇಳಿದ್ದಾರೆ. ಈ ಐದು ಪ್ರಕರಣದಲ್ಲಿ ಮುಖ್ಯವಾದ ಪ್ರಕರಣವೆಂದರೆ, ಪ್ರಧಾನಮಂತ್ರಿಯವರ ಶೈಕ್ಷಣಿಕ ಅರ್ಹತೆಗಳನ್ನು ಬಹಿರಂಗಪಡಿಸಲು ಕೇಂದ್ರ ಮಾಹಿತಿ ಆಯೋಗ ಆದೇಶಿಸಿದ್ದಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಈ ಪ್ರಕರಣವು ಈಗ ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಕೇಂದ್ರ ಸರ್ಕಾರವು 4 ಕೋಟಿ ಬೋಗಸ್ ಪಡಿತರ ಚೀಟಿಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ಘೋಷಿಸಿದೆ, ಆದರೆ ಆರ್‌ಟಿಐ ಉತ್ತರದಲ್ಲಿ ನಿಜವಾದ ಸಂಖ್ಯೆ 2.3 ಕೋಟಿ ಎಂದು ತಿಳಿದುಬಂದಿದೆ, ಇದು ಮತ್ತೊಂದು ಉದಾಹರಣೆಯಾಗಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ವಿಡಿಯೊ ನೋಡಿ: ಕೇಂದ್ರೀಯ ವಿ.ವಿ. ‘ಸತ್ಯನಾರಾಯಣ’ನ ಗುಡಿಯಲ್ಲ – ಹೋರಾಟಗಾರರ ಆಕ್ರೋಶ Janashakthi Media