ರಾಜ್ಯ ಸರಕಾರದಿಂದ ಶಕ್ತಿ ಯೋಜನೆಗೆ 1600 ಕೋಟಿ ರೂ. ಬರಬೇಕು: ಸಚಿವ ರಾಮಲಿಂಗಾರೆಡ್ಡಿ

ಕೊಪ್ಪಳ: ರಾಜ್ಯ ಸರಕಾರದಿಂದ ಶಕ್ತಿ ಯೋಜನೆಗೆ 1600 ಕೋಟಿ ರೂ. ಬರಬೇಕು. ಸಿಎಂ ಶೀಘ್ರ ನೀಡುವುದಾಗಿ ತಿಳಿಸಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿ, ಹೇಳಿದರು. ಯೂನಿಯನ್ ಲೀಡರ್ ಜೊತೆ ಮಾತನಾಡಿದ್ದೇನೆ. ನಿಗಮಗಳಿಗೆ ಕೊಡೋದು ಕೊಡಲೇಬೇಕು. ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದರು‌. ರಾಜ್ಯ

ಸಾರಿಗೆ ಸಂಸ್ಥೆ ನಿಗಮಗಳಿಗೆ ಸರಕಾರದಿಂದ 7625 ಕೋಟಿ ಹಣ ಬಾಕಿ ಬಗ್ಗೆ ಬಿಜೆಪಿ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಅವರಿಗೆ ಏನು ತಿಳುವಳಿಕೆ ಇಲ್ಲ. 2023 ರಲ್ಲಿ ನಮಗೆ ಅಧಿಕಾರ ಕೊಟ್ಟಾಗ 5900 ಕೋಟಿ ಸಾಲ ಇಟ್ಟು ಹೋಗಿದ್ದರು.

ಇದನ್ನೂ ಓದಿ: ಗಾಂಧಿ ಸರ್ವೋದಯ, ಅಂಬೇಡ್ಕರ್ ಅಂತ್ಯೋದಯ ನಮ್ಮ ಸರ್ಕಾರದ ಧ್ಯೇಯ: ಸಿಎಂ ಸಿದ್ದರಾಮಯ್ಯ

ಅಂದು ಬಿಎಂಟಿಸಿ ಹೊರತುಪಡಿಸಿ ಒಂದು ಬಸ್ ಖರೀದಿ ಮಾಡಿರಲಿಲ್ಲ. ಆದರೆ, ನಮ್ಮ ಸರಕಾರ ಬಂದ ಮೇಲೆ 6300 ಬಸ್ ಖರೀದಿಸುವ ಪ್ರಕ್ರಿಯೆ ಆರಂಭವಾಗಿದೆ. 9 ಸಾವಿರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಮಾಡಬೇಕಾದ ಕೆಲಸ ನಾವು ಮಾಡುತ್ತೇವೆ. ಬಿಜೆಪಿಯಿಂದ ಹೇಳಿಸಿಕೊಳ್ಳುವ ಅವಶ್ಯಕತೆಯಿಲ್ಲ‌ ಎಂದು ತಿರುಗೇಟು ನೀಡಿದರು‌.

ಇನ್ನೂ ಕಾರ್ಮಿಕರಿಗೆ ನೀಡಬೇಕಾಗಿದ್ದ ಹಣ ಬಾಕಿ ಇದೆ. ಅದನ್ನು ಬಿಟ್ಟು ಹೋಗಿದ್ದು ಬಿಜೆಪಿಯವರು. ದುರಂತ ಅಂದರೆ ಈಗೇನು ಹಣ ಕೊಟ್ಟಿಲ್ಲ ಅಂತ ಆರೋಪ ಮಾಡುತ್ತಾರಲ್ಲ, ಅವರೇ ಆರೋಪಿಗಳು. ಬಿಜೆಪಿಯವರಿಗೆ ಅವರು ಎದುರಿಗೆ ಬಂದು ಮಾತನಾಡಲು ಹೇಳಿ. ಬರಿ ಟ್ವೀಟ್ ಮಾಡೋದನ್ನು ಬಿಟ್ಟು ಎದುರು ಬಂದು ಚರ್ಚೆ ಮಾಡಲಿ. ಶಕ್ತಿ ಯೋಜನೆಯಿಂದ ನಮ್ಮ ಇಲಾಖೆ ಆದಾಯ ಹೆಚ್ಚಾಗಿದೆ. ಬಿಜೆಪಿಯವರ ರೀತಿ ನಾವು ಬೇಕಾಬಿಟ್ಟಿ ಮಾತನ್ನಾಡೋದಿಲ್ಲ ಎಂದರು.

ಇದನ್ನೂ ನೋಡಿ: ಭಗತ್ ಸಿಂಗ್ ನೆನಪು | ಆಕಾಶಭೇರಿ ನಾಟಕ

Donate Janashakthi Media

Leave a Reply

Your email address will not be published. Required fields are marked *