ಹರಿಯಾಣ: ವ್ಯಾಯಾಮದ ಸಮಯದಲ್ಲಿ ಕಂಬ ಮುರಿದು ಆತನ ಎದೆಯ ಮೇಲೆ ಬಿದ್ದಿದೆ. ಆಟದ ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದಾಗ 16 ವರ್ಷದ ಹಾರ್ದಿಕ್ ಎಂಬ ಆಟಗಾರ ಮೃತಪಟ್ಟಿದ್ದಾನೆ. ಬಾಲಕ ಬ್ಯಾಸ್ಕೆಟ್‌ಬಾಲ್ ಕಂಬಕ್ಕೆ ನೇತಾಡುತ್ತಾ ವ್ಯಾಯಾಮ ಮಾಡುತ್ತಿದ್ದ. ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದ ಇತರ ಆಟಗಾರರು ಇದನ್ನು ನೋಡಿ ತಕ್ಷಣ ಅವನನ್ನು ಎತ್ತಿಕೊಳ್ಳಲು ಧಾವಿಸಿದ್ದರು, ಆದರೆ ಅಷ್ಟರಲ್ಲಾಗಲೇ ಕಂಬದ ಭಾರದಿಂದಾಗಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದ.
ಹಾರ್ದಿಕ್ ಮೊದಲ ಬಾರಿಗೆ ನೇತಾಡಿದಾಗ, ಕಂಬಕ್ಕೆ ಏನೂ ಆಗಿರಲಿಲ್ಲ. ಆದರೆ ಎರಡನೇ ಬಾರಿ ನೇತಾಡಲು ಪ್ರಯತ್ನಿಸಿದಾಗ ಆತನ ಮೇಲೆ ಇದ್ದಕ್ಕಿದ್ದಂತೆ ಕಂಬ ಆತನ ಮೇಲೆ ಉರುಳಿದೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಹಾರ್ದಿಕ್ ನೆಲದ ಮೇಲೆ ಅಭ್ಯಾಸದ ಸಮಯದಲ್ಲಿ ತುಂಬಾ ಸಕ್ರಿಯನಾಗಿ ಕಾಣಿಸಿಕೊಂಡಿದ್ದನ್ನು ತೋರಿಸುತ್ತದೆ. ಬಾಲಕ ಬಾಸ್ಕೆಟ್ ಬಾಲ್ ಕಂಬಕ್ಕೆ ನೇತಾಡುತ್ತಿದ್ದನು.
ಇದನ್ನೂ ಓದಿ : ಕಾರು ಅಪಘಾತ: ಕರ್ನಾಟಕ ಹಿರಿಯ IAS ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿದಂತೆ ಮೂವರು ಸಾವು
ಹಾರ್ದಿಕ್ ಒಬ್ಬ ಅತ್ಯುತ್ತಮ ಬ್ಯಾಸ್ಕೆಟ್‌ಬಾಲ್ ಪಟು ಎಂದು ಗ್ರಾಮಸ್ಥರು ಹೇಳಿದ್ದಾರೆ. ಹಾರ್ದಿಕ್ ನನ್ನು ಭಾರತೀಯ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಭಾರತೀಯ ತಂಡದ ಶಿಬಿರದಿಂದ ಹಿಂತಿರುಗಿದ ಬಳಿಕ ಕ್ರೀಡಾಕೂಟಕ್ಕೆ ತಯಾರಿ ನಡೆಸುತ್ತಿದ್ದ. ಮೃತ ಬಾಸ್ಕೆಟ್ ಬಾಲ್ ಪಟುವಿಗೆ ಕಿರಿಯ ಸಹೋದರ ಕೂಡಾ ಇದ್ದಾನೆ, ಅವನೂ ಕೂಡ ಉತ್ತಮ ಬ್ಯಾಸ್ಕೆಟ್‌ಬಾಲ್ ಆಟಗಾರ.
ಆಟಗಾರರು ಪ್ರತಿದಿನ ಬ್ಯಾಸ್ಕೆಟ್‌ಬಾಲ್ ಕಂಬಕ್ಕೆ ಜೋತು ಬಿದ್ದು ಅಭ್ಯಾಸ ಮಾಡುತ್ತಾರೆ. ಮಂಗಳವಾರ ಬೆಳಗ್ಗೆ, ಇತರ ಹಲವಾರು ಆಟಗಾರರು ಕಂಬಕ್ಕೆ ನೇತಾಡುತ್ತಿದ್ದರು. ಆದರೆ, ಹಾರ್ದಿಕ್ ಮೇಲೆ ಕಂಬ ಬಿದ್ದಿದೆ. ಮಾಹಿತಿ ಬಂದ ತಕ್ಷಣ ನಾವು ಸ್ಥಳಕ್ಕೆ ತಲುಪಿ ಶವವನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದೇವೆ ಎಂದು ಲಖನ್ ಮಜ್ರಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸಮರ್‌ಜೀತ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ನೋಡಿ : ಬೀದಿಬದಿ ವ್ಯಾಪಾರಿ, ಹಮಾಲಿ ಕಾರ್ಮಿಕರಿಗೆ ಸಿಗಲಿ ಸೌಲಭ್ಯ Janashakthi Media
