ಬೆಂಗಳೂರು : ಏಷ್ಯಾದ ಅತಿದೊಡ್ಡ ವೈಮಾನಿಕ ಮತ್ತು ರಕ್ಷಣಾ ಪ್ರದರ್ಶನ ಏರೋ ಇಂಡಿಯಾದ 15 ನೇ ಆವೃತ್ತಿಯನ್ನು 2025ರ ಫೆಬ್ರವರಿ 10 ರಂದು ಕರ್ನಾಟಕದ ಬೆಂಗಳೂರಿನಲ್ಲಿರುವ ಯಲಹಂಕ ವಾಯು ನಿಲ್ದಾಣದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಉದ್ಘಾಟಿಸಿದರು.
ಯಲಹಂಕ ವಾಯುಪಡೆ ನೆಲೆಯಲ್ಲಿ ಇಂದಿನಿಂದ 5 ದಿನಗಳ ಕಾಲ ಏರೋ ಇಂಡಿಯಾ ಶೋ ಆರಂಭವಗಿದ್ದು, ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಮಾನಗಳ ಆಕರ್ಷಕ ಕಸರತ್ತು ಎಲ್ಲರನ್ನು ರಂಜಿಸಿತು.
ಆಕಾಶಗಂಗೆ ತಂಡದಿಂದ ಪ್ಯಾರಾಚೂಟ್ ಗಳಿಂದ ಸೈನಿಕರು ವಾಯುನೆಲೆಯ ರನ್ ವೇ ಬಳಿ ತ್ರಿವರ್ಣ ಧ್ವಜ ಹೊತ್ತು ಇಳಿದರು. ತೇಜಸ್ ಯುದ್ಧವಿಮಾನ ಫಾರ್ಮೇಶನ್, ಸುಖೋಯ್ ಎಂಕೆ35 ಆಗಸದಲ್ಲಿ ತ್ರಿಶೂಲ್ ವಿನ್ಯಾಸ ಮೂಡಿಸಿತು, ದ್ರೋಣಿಯರ್, ಜಾಗ್ವಾರ್ ಯುದ್ಧ ವಿಮಾನ, ಹಗು ಯುದ್ಧ ಹೆಲಿಕಾಪ್ಟರ್, ಜಾಗ್ವಾರ್ ಫಾರ್ಮೇಶನ್, ಎಂಬ್ರಿಯರ್ ಸಂವಹನ ವಿಮಾನ ಸೇರಿದಂತೆ ಹಲವು ವಿಮಾನ, ಹೆಲಿಕಾಪ್ಟರ್ ಗಳು ನೀಲಿ ಆಗಸದಲ್ಲಿ ಪ್ರದರ್ಶನ ತೋರಿದವು.
https://youtu.be/cV8iUw2WEZM?si=T-oAzzXiYsAWqMxR