ಬೆಂಗಳೂರು: 2021ರ ಫೆಬ್ರವರಿಯಲ್ಲಿ ಕೆಎಎಸ್ ಮುಖ್ಯ ಪರೀಕ್ಷೆ ಬರೆದಿದ್ದ ಸುಮಾರು 2,200 ಅಭ್ಯರ್ಥಿಗಳ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ.
ಜನವರಿ 2020 ರಲ್ಲಿ 106 ಹುದ್ದೆಗಳಿಗೆ ಕೆಪಿಎಸ್ ಸಿ ಪರೀಕ್ಷಾ ಅಧಿಸೂಚನೆ ಹೊರಡಿಸಿತ್ತು, ಇದಕ್ಕಾಗಿ ಆಗಸ್ಟ್ 2020 ರಲ್ಲಿ ಪೂರ್ವಭಾವಿ ಪರೀಕ್ಷೆ ನಡೆಸಿತ್ತು.
1.67 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು ಅವರಲ್ಲಿ ಸುಮಾರು 2,200 ಜನರು ಮುಖ್ಯ ಪರೀಕ್ಷೆಗಳನ್ನು ಬರೆಯಲು ಅರ್ಹರಾಗಿದ್ದರು. ಫೆಬ್ರವರಿ 2021 ರಲ್ಲಿ ಪರೀಕ್ಷೆ ನಡೆದ ಮೇಲೆ 15 ತಿಂಗಳುಗಳು ಕಳೆದರೂ ಇನ್ನೂ ಫಲಿತಾಂಶ ಪ್ರಕಟವಾಗಿಲ್ಲ. ನಮಗೆ ವಯಸ್ಸು ಕಳೆಯುತ್ತಾ ಬಂತು ಸರಕಾರ ನಮ್ಮ ಬಾಳಲ್ಲಿ ಆಟ ಆಡುತ್ತಿದೆ ಎಂದು ಅಭ್ಯರ್ಥಿಯೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸಾಮಾನ್ಯ ವರ್ಗಕ್ಕೆ 35 ವರ್ಷ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ ವಯೋಮಿತಿ ಇರುವುದರಿಂದ ಅವಕಾಶ ಸಿಗುವುದು ತೀರಾ ಕಡಿಮೆ. ಹಿಂದಿನ ಬ್ಯಾಚ್‌ಗಳಲ್ಲಿ ಸಮಸ್ಯೆಗಳಿವೆ ಎಂಬ ಕಾರಣಕ್ಕೆ ಫಲಿತಾಂಶ ತಡೆ ಹಿಡಿಯಲಾಗಿದೆ. ಆ ಸಮಸ್ಯಯನ್ನು ಸರಿ ಮಾಡದೆ ನಮ್ಮ ಭವಿಷ್ಯವನ್ನು ಯಾಕೆ ಹಾಳು ಮಾಡುತ್ತೀರಿ ಎಂದು ಅಭ್ಯರ್ಥಿಗಳು ಪ್ರಶ್ನಿಸಿದ್ದಾರೆ.