ಬಿಜೆಪಿ-ಜೆಡಿಎಸ್ ನಿಂದ 15 ಶಾಸಕರು ಕಾಂಗ್ರೆಸ್ ಗೆ ಬರ್ತಾರೆ! ಸಚಿವ ಚೆಲುವರಾಯಸ್ವಾಮಿ;

ಮೈಸೂರು : ಶೀಘ್ರವೇ ಬಿಜೆಪಿ-ಜೆಡಿಎಸ್ ನಿಂದ 15 ಶಾಸಕರು ಕಾಂಗ್ರೆಸ್ ಗೆ ಬರ್ತಾರೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಚೆಲುವರಾಯಸ್ವಾಮಿ ‘ಬೇಕಾದರೆ ಬರೆದಿಟ್ಟುಕೊಳ್ಳಿ, ಶೀಘ್ರವೇ ಬಿಜೆಪಿ-ಜೆಡಿಎಸ್ ನಿಂದ 15 ಶಾಸಕರು ಕಾಂಗ್ರೆಸ್ ಗೆ ಬರ್ತಾರೆ,  ನಾನು ಹೇಳುವುದು ನಿಜವಾಗುತ್ತದೆ   ಎಂದು ಸಚಿವ ಚೆಲುವರಾಯಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಆಪರೇಷನ್ ಕಮಲಕ್ಕೆ ಒಳಗಾಗುವ ಶಾಸಕರು ಕಾಂಗ್ರೆಸ್ನಲ್ಲಿ ಯಾರೂ ಇಲ್ಲ . ಆದರೆ ವಿರೋಧ ಪಕ್ಷಗಳಿಂದ 10ರಿಂದ 15 ಮಂದಿ ಶಾಸಕರು ನಮ್ಮ ಪಕ್ಷಕ್ಕೆ ಬರಲು ಸಿದ್ಧರಿದ್ದಾರೆ ಎಂದು ಕೃಷಿ ಸಚಿವ ಎನ್.ಚೆಲುವರಾಯ ಸ್ವಾಮಿ ಹೇಳಿದರು. ನಾವು ಕಿವಿಯಲ್ಲಿ ಹೂ ಮುಡಿದಿಲ್ಲ. ನಮಗೂ ರಾಜಕೀಯ ಮಾಡಲು ಬರುತ್ತದೆ. ಐದು ವರ್ಷ ನಮ್ಮ ಸರ್ಕಾರ ಸುಭದ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನು ಓದಿ : ಇಂಡಿಯಾ ಒಕ್ಕೂಟದ ಸೀಟು ಹಂಚಿಕೆ ವಿಳಂಬವಾದರೆ ಬಿಜೆಪಿಗೆ ನೆರವು | ಕಾಂಗ್ರೆಸ್‌ಗೆ ಪ್ರಕಾಶ್ ಅಂಬೇಡ್ಕರ್ ಚಾಟಿ 

ಮುಂಬರುವ ಲೋಕಸಭೆ ಚುನಾವಣೆಗೆ ನಾನು   ಸ್ಪರ್ಧೆ ಮಾಡಲ್ಲ,  ನಮ್ಮ ಕುಟುಂಬದಿಂದಲೂ ಯಾರೂ ಸ್ರ್ಪಧಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.  ಮಾಜಿ ಮುಖ್ಯಮಂತ್ರಿ ಎಚ್‌ ಡಿ  ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸ್ಪರ್ಧೆ ಮಾಡುವುದು ಅವರಿಗೆ ಬಿಟ್ಟಿದ್ದು ಎಂದರು.

Donate Janashakthi Media

Leave a Reply

Your email address will not be published. Required fields are marked *