ವಿದ್ಯಾರ್ಥಿನೀಯರು ಅಸ್ವಸ್ಥ: ದೆವ್ವ ಹಿಡಿದಿದೆಯೆಂದು ತಾಂತ್ರಿಕ​ ಬಾಬಾನನ್ನು ಕರೆಸಿದ ಶಾಲಾ ಆಡಳಿತ ಮಂಡಳಿ!

ಮಹೋಬಾ: ವೈಜ್ಞಾನಿಕವಾಗಿ ಜಗತ್ತು ಎಷ್ಟೊಂದು ಬೆಳವಳಿಗೆ ಕಾಣುತ್ತಿದೆ. ಇದರ ದೊಡ್ಡ ಪಾಲು ಸಲ್ಲುವುದು ಶಿಕ್ಷಣ ವ್ಯವಸ್ಥೆಗೆ. ಈ ಮೂಲಕ ಮೌಢ್ಯತೆಯನ್ನು ತೊಡೆದು ಹಾಕುವ ಕೆಲಸಗಳು ನಡೆಯುತ್ತಲೇ ಇರುತ್ತವೆ. ಕೆಲವೊಂದು ಸಂದರ್ಭದಲ್ಲಿ ಎಲ್ಲವನ್ನು ಮೀರಿ ಮೌಢ್ಯತೆ ಬಲಿಯಾಗುವವರು ಎಷ್ಟೋ ಮಂದಿ. ಹೀಗೆ ಸ್ವತಃ ಶಾಲಾ ಆಡಳಿತ ಮಂಡಳಿ ಮೌಢ್ಯತೆಗೆ ಬಲಿ ಬಿದ್ದು ಅತ್ಯಂತ ಅವೈಜ್ಞಾನಿಕ ಕ್ರಮವೊಂದು ನಡೆಸಿರುವುದು ಬೆಳಕಿಗೆ ಬಂದಿದೆ.

ಇದನ್ನು ಓದಿ: ಮಳೆಗಾಗಿ ಮೌಢ್ಯತೆಗೆ ಮಾರು ಹೋದ ಜನ: ಹೂತಿದ್ದ ಶವದ ಮೇಲೆ ನೀರು ಹಾಕಿ‌ ಪ್ರಾರ್ಥನೆ

ಇಂತಹ ವಿಚಿತ್ರ ಘಟನೆಯೊಂದು ಜರುಗಿರುವುದು ಉತ್ತರ ಪ್ರದೇಶ ರಾಜ್ಯದ ಮಹೋಬಾ ಜಿಲ್ಲೆಯ ಪನ್ವಾಡಿ ಡೆವಲಪ್‌ಮೆಂಟ್ ಬ್ಲಾಕ್‌ನ ಮಹುವಾ ಗ್ರಾಮದಲ್ಲಿರುವ ಸರ್ಕಾರಿ ಕನ್ಯಾ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಎಂದಿನಂತೆ ಶಾಲೆಯ ಮಕ್ಕಳು ಮಧ್ಯಾಹ್ನದ ಊಟವನ್ನು ಸೇವಿಸಿದ ಬಳಿಕ ಸುಮಾರು 15 ವಿದ್ಯಾರ್ಥಿನೀಯರು ಅಸ್ವಸ್ಥಗೊಂಡಿದ್ದಾರೆ. ಇವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ತೋರಿಸಲಾಗಿದೆ. ಆ ಬಳಿಕವೂ ಮಾಟ ಮಂತ್ರ ಮಾಡುವ ತಾಂತ್ರಿಕ ಬಾಬಾನನ್ನು ಕರೆಸಿ ಚಿಕಿತ್ಸೆ ಕೊಡಿಸಿದ ವಿಚಿತ್ರ ಘಟನೆಯೊಂದು ಜರುಗಿದೆ.

ಸೋಮವಾರ(ಡಿಸೆಂಬರ್‌ 19) ವಿದ್ಯಾರ್ಥಿನೀಯರು ಮಧ್ಯಾಹ್ನದ ಊಟವನ್ನು ಮಾಡಿದ್ದಾರೆ. ಅವರಲ್ಲಿ ಕೆಲವು ವಿದ್ಯಾರ್ಥಿನೀಯರಿಗೆ ಆರೋಗ್ಯ ಹದಗೆಟ್ಟಿತ್ತು. ವಿದ್ಯಾರ್ಥಿನೀಯರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಅವರು ಬಿಡುಗಡೆಯಾದ ಮೇಲೆ ಶಾಲಾ ಆವರಣಕ್ಕೆ ಕರೆತಂದು ತಾಂತ್ರಿಕ್ ಬಾಬಾನ ಎದುರು ತೋರಿಸಲಾಗಿದೆ. ವಿದ್ಯಾರ್ಥಿನೀಯರ ಮೈಮೇಲೆ ದೆವ್ವ ಭೂತ ಬಂದಿವೆ ಎಂದು ಭಾವಿಸಿ ತಾಂತ್ರಿಕ್ ಬಾಬಾನನ್ನು ಕರೆಸಲಾಗಿತ್ತು ಎನ್ನಲಾಗುತ್ತಿದೆ.

ಇದನ್ನು ಓದಿ: ಆರ್ಥಿಕ ಏಳಿಗೆಗಾಗಿ ಇಬ್ಬರು ಮಹಿಳೆಯರನ್ನು ಬಲಿ ಕೊಟ್ಟ ಮೂವರು ಕಿರಾತಕರು!

ಘಟನೆಯ ಬಗ್ಗೆ ಪನ್ವಾಡಿ ಪೊಲೀಸ್ ಠಾಣೆ ಪ್ರಭಾರಿ ಜಯಪ್ರಕಾಶ್ ಉಪಾಧ್ಯಾಯ ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಲಿಖಿತ ದೂರು ಬಂದಿಲ್ಲ ಮತ್ತು ಯಾರನ್ನೂ ಬಂಧಿಸಿಲ್ಲ. ಶಾಲೆಯ ದೆವ್ವವಿದೆ ಹಾಗಾಗಿ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರಾಗಿದ್ದಾರೆಂದು ಗ್ರಾಮಸ್ಥರು ನಂಬಿಕೆ ಇಟ್ಟಿದ್ದಾರೆ ಎಂದು ಬಾಲಕಿಯೊಬ್ಬಳು ಹೇಳಿದ್ದಾಳೆ. ಆಕೆ ಶಾಲೆಯಲ್ಲಿ ಬಿಳಿ ಬಣ್ಣದ ಉಡುಗೆ ಉಟ್ಟುಕೊಂಡಿದ್ದ ಮಹಿಳೆಯೊಬ್ಬಳನ್ನು ಕಂಡಿದ್ದಾಳೆ. ಅದು ದೆವ್ವ ಎಂದು ಭಾವಿಸಿದ್ದಾಳೆ ಎಂದರು.

ಮಹೋಬಾ ಕುಲ್ಪಹಾರ್‌ನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್(ಎಸ್‌ಡಿಎಂ) ಅರುಣ್ ದೀಕ್ಷಿತ್‌ ಮಾಹಿತಿ ನೀಡಿದ್ದು, ಸೋಮವಾರ ಈ ಘಟನೆ ನಡೆದಿದ್ದು, ತನಿಖೆ ನಡೆಸಲಾಗುತ್ತಿದೆ. ಮಧ್ಯಾಹ್ನದ ಊಟದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವಾಸ್ತವಾಂಶಗಳನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ. ಅನಾರೋಗ್ಯಕ್ಕೆ ಒಳಗಾದ ವಿದ್ಯಾರ್ಥಿನೀಯರ ವಯಸ್ಸು ಒಂಭತ್ತರಿಂದ 13 ವರ್ಷ ಎಂದು ತಿಳಿದುಬಂದಿದೆ ಎಂದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ಮತ್ತೊಂದೆಡೆ ವೈದ್ಯರು ಹೇಳುವ ಪ್ರಕಾರ ವಿದ್ಯಾರ್ಥಿನೀಯರು ಗಾಬರಿಯಿಂದ ಮೂರ್ಛೆ ಹೋಗಿದ್ದರು ಮತ್ತು ಎಲ್ಲರೂ ತುಂಬಾ ಭಯಪಟ್ಟಿದ್ದರು. ಆದರೆ ಈಗ ಎಲ್ಲರ ಸ್ಥಿತಿ ಸಾಮಾನ್ಯವಾಗಿದೆ ಎಂದು ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *