ಬೆಂಗಳೂರು : ಪೆನ್‌ಡ್ರೈವ್ ಪ್ರಕರಣದಲ್ಲಿ ಹಾಸನದ ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ಪಿ. ಮಂಜೇಗೌಡ ಸ್ಫೋಟಕ ಮಾಹಿತಿ ಹೊರಹಾಕಿದ್ದು, ಬಿಜೆಪಿ ನಾಯಕ ದೇವರಾಜೇಗೌಡರ ಬಾಯಿ ಮುಚ್ಚಿಸಲು ಭವಾನಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ 15 ಕೋಟಿ ರೂ. ಒಪ್ಪಂದ ನಡೆಸಿದ್ದರು. ಪೆನ್‌ಡ್ರೈವ್ ಹೊಂದಿದ್ದ ಕಾರ್ತಿಕ್ ಅವರನ್ನು ಸುಮ್ಮನಾಗಿಸಲು ದೇವರಾಜೇಗೌಡ ಇಷ್ಟು ಹಣಕ್ಕೆ ಬೇಡಿಕೆ ಇರಿಸಿದ್ದರು ಎಂದು ದೇವರಾಜೇಗೌಡ ಮತ್ತು ರೇವಣ್ಣ ಕುಟುಂಬದ ನಡುವೆ ಜಿದ್ದಾಜಿದ್ದಿ ಇದೆ.
ಹೀಗಾಗಿ ಕಾರ್ತಿಕ್ ತನ್ನ ಮೇಲೆ ಆಸ್ತಿ ವಿಚಾರವಾಗಿ ಹಲ್ಲೆ ನಡೆಸಿದ್ದ ರೇವಣ್ಣ ವಿರುದ್ಧ ಕ್ರಮಕ್ಕಾಗಿ ದೇವರಾಜೇಗೌಡರನ್ನು ಭೇಟಿಯಾಗಿ ಪ್ರಜ್ವಲ್ ರೇವಣ್ಣನ ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್ ಕೊಟ್ಟಿದ್ದ. ಈ ವಿಚಾರವನ್ನು ಕಾರ್ತಿಕ್ ಬಿಡುಗಡೆ ಮಾಡಿರುವ ವೀಡಿಯೋದಲ್ಲೇ ಹೇಳಿದ್ದಾನೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಂಜೇಗೌಡ ಹೇಳಿದರು.
ಈ ಜಿದ್ದಾಜಿದ್ದಿ ನಡುವೆ ಭವಾನಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ದೇವರಾಜೇಗೌಡನನ್ನು ಭೇಟಿಯಾಗಿ ಅಶ್ಲೀಲ ವೀಡಿಯೋಗಳನ್ನು ಬಹಿರಂಗಪಡಿಸದಿರಲು 15 ಕೋಟಿ ರೂ.ಗೆ ಡೀಲ್ ಮಾಡಿ 10 ಕೋಟಿ ರೂ. ಮುಂಗಡವಾಗಿ ಕೊಟ್ಟಿದ್ದರು. ಆದರೆ ಕಾರ್ತಿಕ್ ಬಾಯಿ ಮುಚ್ಚಲಿಲ್ಲ. ಈ ವಿಚಾರವನ್ನು ನಾನು ಹೇಳುತ್ತಿಲ್ಲ, ಹಾಸನದ ಜನ ಹೇಳುತ್ತಿದ್ದಾರೆ ಎಂದು ಮಂಜೇಗೌಡ ಹೇಳಿದರು.
ಇದನ್ನು ಓದಿ : ಹೆಚ್.ಡಿ.ರೇವಣ್ಣ ಜಾಮೀನು ಅರ್ಜಿ ಮುಂದೂಡಿಕೆ
ದೇವರಾಜೇಗೌಡ ರಾಜಕೀಯ ಮುಖಂಡರ ಬ್ಲ್ಯಾಕ್‌ವೆುàಲ್ ಮಾಡುವುದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ. ಈ ಪೆನ್‌ಡ್ರೈವ್ ಕಾರ್ತಿಕ್ ಮತ್ತು ದೇವರಾಜೇಗೌಡ ವಿನಾ ಬೇರೆ ಯಾರ ಬಳಿಯೂ ಇರಲಿಲ್ಲ. ಹೀಗಾಗಿ ಹಾಸನದಲ್ಲಿ ದೇವರಾಜೇಗೌಡನೇ ಪೆನ್‌ಡ್ರೈವ್ ಹಂಚಿದ್ದಾರೆ. ಆದರೆ ತನಿಖೆ ದಿಕ್ಕು ತಪ್ಪಿಸುವ ಉದ್ದೇಶದಿಂದ ಡಿಸಿಎಂ ಡಿ.ಕೆ. ಶಿವಕುಮಾರ್ ಮೇಲೆ ಆರೋಪ ಹೊರಿಸಿದ್ದಾರೆ ಎಂದು ದೂರಿದರು.
ಸೋಮವಾರ ದೇವರಾಜೇಗೌಡ ಬಿಡುಗಡೆ ಮಾಡಿರುವ ಆಡಿಯೋ ಸುಳ್ಳು. ಯಾವುದೋ ಕಾರ್ಯನಿಮಿತ್ತ ಶಿವಕುಮಾರ್ ಅವರು ದೇವರಾಜೇಗೌಡನ ಜತೆ ಮಾತಾಡಿರಬಹುದು. ಆದರೆ ಅಶ್ಲೀಲ ವೀಡಿಯೋ ಕುರಿತು ಮಾತನಾಡಿಲ್ಲ. ಅದನ್ನೇ ಆತ ಈ ಪ್ರಕರಣದಲ್ಲಿ ಬಳಸಿಕೊಂಡಿದ್ದಾನೆ. ಈ ಬ್ಲ್ಯಾಕ್‌ವೆುàಲ್ ರಾಜಕೀಯ ನಿಲ್ಲಬೇಕಾದರೆ ಕಾರ್ತಿಕ್ ಗೌಡ ಮತ್ತು ದೇವರಾಜೇಗೌಡರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಅಶ್ಲೀಲ ವೀಡಿಯೋ ಹಂಚಿರುವ ಬಗ್ಗೆ ಪೂರ್ಣಚಂದ್ರ ತೇಜಸ್ವಿ ಎಂಬಾತ ನವೀನ್ ಗೌಡ ಹಾಗೂ ಇತರರ ವಿರುದ್ಧ ಹಾಸನ ಠಾಣೆ ಯಲ್ಲಿ ದೂರು ನೀಡಿದ್ದಾರೆ. ಆದರೆ ದೇವರಾಜೇಗೌಡನ ವಿರುದ್ಧ ಯಾಕೆ ದೂರು ನೀಡಿಲ್ಲ? ಆತ ಈ ಕೃತ್ಯದಲ್ಲಿ ಭಾಗಿ ಯಾಗಿದ್ದಾನೆ ಎಂದು ಗೊತ್ತಿದ್ದರೂ ರೇವಣ್ಣ ಏಕೆ ಆತನ ವಿರುದ್ಧ ದೂರು ನೀಡಿಲ್ಲ? ಭವಾನಿ, ಪ್ರಜ್ವಲ್ ಅವನ ಜತೆ ಡೀಲ್ ಮಾಡಿಕೊಂಡಿರುವುದೇ ಕಾರಣ ಎಂದು ಮಂಜೇಗೌಡ ಆರೋಪ ಮಾಡಿದ್ದಾರೆ.
ಇದನ್ನು ನೋಡಿ : ಪೆನ್ ಡ್ರೈವ್ ಪ್ರಕರಣದ ರೂವಾರಿ ಡಿಕೆಶಿ ಎಂದ ಬಿಜೆಪಿ, ಇದು ಬಿಜೆಪಿ – ಜೆಡಿಎಸ್ ಷಡ್ಯಂತ್ರ ಎಂದ ಡಿಕೆಶಿ