ಧರ್ಮಸ್ಥಳ ಕೊಲೆ ಪ್ರಕರಣ : ಎಸ್‌ಐಟಿ ನೇಮಕಕ್ಕೆ ಸ್ವಾಗತ ಪ್ರಾಮಾಣಿಕ ತನಿಖೆ ಅಗತ್ಯ

ಬೆಂಗಳೂರು :  ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಆಸಹಜ ಸಾವುಗಳೆಂದು ಹಣೆಪಟ್ಟಿ‌‌ ಹೊತ್ತು ಶೈತ್ಯಾಗಾರ ಸೇರಿದ್ದ ಪ್ರಕರಣಗಳ ತನಿಖೆಗೆ ಜನಾಭಿಪ್ರಾಯದಂತೆ ಎಸ್.ಐ.ಟಿ ನೇಮಿಸಿದ ರಾಜ್ಯ ಸರ್ಕಾರವನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯು ಸ್ವಾಗತಿಸಿದೆ.

ಈ ಘಟನೆಗೆ ಸಂಬಂಧಿಸಿದಂತೆ ಪ್ರಾಮಾಣಿಕವಾಗಿ ತನಿಖೆ ನಡೆಯಬೇಕೆಂಬ ನಮ್ಮ ಹಾಗೂ ಸಾರ್ವಜನಿಕರ ನಿರೀಕ್ಷೆಯ ಹಿನ್ನೆಲೆಯಲ್ಲಿ, ಈ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್.ಐ.ಟಿ.)ಗೆ ರಾಜ್ಯ ಸರ್ಕಾರ ಹಸ್ತಾಂತರಿಸಿದೆ. ಸರ್ಕಾರದ ಈ ನಿಲುವು ಉತ್ತಮವಾಗಿದೆ. ಸಮಾಜದ ನೈತಿಕತೆ ಹಾಗೂ ಶ್ರದ್ಧೆಗೆ ನಿಲುಕುವ ಬಲವಾದ ಆಧಾರವೆಂದರೆ “ಸತ್ಯ”. ಆದ್ದರಿಂದ, ಈ ಪ್ರಕರಣದಲ್ಲಿ ಎಸ್.ಐ.ಟಿ. ತನಿಖಾ ತಂಡ ಸತ್ಯಾಂಶವನ್ನು ಅತಿ ಶೀಘ್ರವಾಗಿ ಪ್ರಾಮಾಣಿಕ ತನಿಖೆ ನಡೆಸಿ ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು ಎಂಬುದು ನಮ್ಮ ಆಶಯ ಎಂದು ತಿಳಿಸಿದ್ದಾರೆ.

ಪ್ರಾರಂಭದ ಹಂತದಿಂದ ಇಂತಹ ಪ್ರಕರಣಗಳನ್ನು ನಿಯಂತ್ರಿಸಲು ಒತ್ತಾಯಿಸುತ್ತ ಕೆಲಸ ಮಾಡಿದ ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನ್ಯಾಯನಿಷ್ಠರಾಗಿ ಸತ್ಯವನ್ನು ಬಯಲಿಗೆಳೆಯಬೇಕು.ಕೃತ್ಯ ಎಸಗಿದ, ಕೃತ್ಯಕ್ಕೆ ಕಾರಣರಾದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲಾರದಂತೆ ಕ್ರಮವಹಿಸಬೇಕು ಎಂದು ಅಖಿಲ ಭಾರತ ಜನವಾದಿ‌‌ ಮಹಿಳಾ ಸಂಘಟನೆ ಒತ್ತಾಯಿಸುತ್ತದೆ.ಎಂದು ಸಂಘಟನೆಯ ರಾಜ್ಯಧ್ಯಕ್ಷರಾದ ಮೀನಾಕ್ಷಿ ಬಾಳಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಪತ್ರಿಕಾ ಹೆಳಿಕೆ ನೀಡಿದಾರೆ.

Donate Janashakthi Media

Leave a Reply

Your email address will not be published. Required fields are marked *