ದಾವಣಗೆರೆ ಜಿಲ್ಲಾಸ್ಪತ್ರೆ: 135 ನವಜಾತ ಶಿಶುಗಳು, 28 ಗರ್ಭಿಣಿಯರ ಸಾವು

ದಾವಣಗೆರೆ: ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಕಳೆದ 7 ತಿಂಗಳಲ್ಲಿ 135 ನವಜಾತ ಶಿಶುಗಳು, 28 ಗರ್ಭಿಣಿಯರು ಸಾವನ್ನಪ್ಪಿರುವ ಘಟನೆ ಜನರಲ್ಲಿ ಆತಂಕ ಸೃಷ್ಟಿಮಾಡಿದೆ.

ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಸುತ್ತಮುತ್ತಲಿನ ನಾಲ್ಕದು ಜಿಲ್ಲೆಯ ಸಾವಿರಾರು ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಾರೆ. ಆದರೆ ಆಸ್ಪತ್ರೆಯಲ್ಲಿ ಕಳೆದ 7 ತಿಂಗಳಿಂದ ಶಿಶುಗಳ ಹಾಗೂ ಗರ್ಭಿಣಿಯರ ಸಾವಿನ ಸಂಖ್ಯೆ: ಬೆಚ್ಚಿ ಬೀಳಿಸುವಂತಿದೆ.

ಇದನ್ನೂ ಓದಿ : ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯ ನಂತರ ಬಾಣಂತಿಯರ ಸಾವು ಮತ್ತು VIMMS ನಲ್ಲಿ ಮತ್ತೊಂದು ಗರ್ಭಿಣಿಯ ಸಾವು ಬಗ್ಗೆ ತನಿಖೆ ನಡೆಸಲು ಅಗ್ರಹ

ಜಿಲ್ಲೆಯಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಹೆಚ್ಚಿದೆ. ಗರ್ಭಿಣಿಯರ ಸಾವಿನ ಸಂಖ್ಯೆಯೂ ಹೆಚ್ಚಾಗಿದೆ. ಜಿಲ್ಲಾ ಆಸ್ಪತ್ರೆ ನೀಡಿರುವ ವರದಿ ನೋಡಿ ಆರೋಗ್ಯ ಸಚಿವರೇ ಶಾಕ್ ಆಗಿದ್ದಾರೆ. ಪ್ರತಿ ತಿಂಗಳು 600-700 ಹೆರಿಗೆ ಆಗುವ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶುಗಳ ಸಾವು ಹೆಚ್ಚುತ್ತಿದೆ. ಮುಂಚಿತವಾಗಿಯೇ ಗರ್ಭಿಣಿಯರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತೆ ಸೂಚಿಸಲಾಗಿದೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯಾಧಿಕಾರಿಗಳು ಹಾಗೂ ವೈದ್ಯರ ಜೊತೆ ಸಭೆ ನಡೆಸಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಯಾವುದೇಸೌಲಭ್ಯ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಸಿಜೇರಿಯನ್ ಡೆಲಿವರಿಗಳು ಶೇ.75ರಷ್ಟು ಜಾಸ್ತಿಯಾಗಿದೆ. ಈ ಬಗ್ಗೆಯೂ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ನೋಡಿ : ಕೇಂದ್ರ ರಾಜ್ಯ ಸರ್ಕಾರಗಳ ರೈತ – ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಐತಿಹಾಸಿಕ ಹೋರಾಟಕ್ಕೆ ಸಿದ್ದತೆ

Donate Janashakthi Media

Leave a Reply

Your email address will not be published. Required fields are marked *