ಮತದಾನದ ಹಕ್ಕನ್ನು ಬುಡಮೇಲು ಮಾಡುವ ಪ್ರಯತ್ನಗಳತ್ತ ಗಮನ ಹರಿಯದಂತೆ ಮಾಡಲು 130ನೇ ತಿದ್ದುಪಡಿ ಮಸೂದೆ?

ಸಂವಿಧಾನದ 130ನೇ ತಿದ್ದುಪಡಿ ಕುರಿತಂತೆ ಅಮಿತ್ ಷಾರವರ ‘ಸಾಂವಿಧಾನಿಕ ನೈತಿಕತೆ’ಯ ಸಂತವೇ಼ಷವನ್ನು ಎಂದಿಗೂ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ ಸಂಸತ್ತಿನ ಎರಡು ಸದನಗಳ ಪ್ರಸ್ತುತ ಸಂಯೋಜನೆಯ ಸರಳ ಅಂಕಗಣಿತದ ತಿಳಿವು ಇರುವ ಯಾರಿಗೇ ಆದರೂ, ಈ ಮಸೂದೆಯ ಅಂಗೀಕಾರ ಸಾಧ್ಯವೇ ಇಲ್ಲ ಎಂದು ಖಂಡಿತವಾಗಿಯೂ ಕಾಣುತ್ತದೆ. ಹೀಗಿರುವಾಗ ಇದನ್ನು ಮುಂದೊತ್ತುತ್ತಲು ಇಷ್ಟೊಂದು ಹತಾಶೆ ಯಾಕೆ ಎಂಬ ಪ್ರಶ್ನೆ ಕಾಡುತ್ತಲೇ ಇರುತ್ತದೆ. ಬಿಜೆಪಿಯ ಚುನಾವಣಾ ಹಿತಾಸಕ್ತಿಗಳನ್ನು ಭದ್ರಪಡಿಸಿಕೊಳ್ಳುವ ಸಲುವಾಗಿ ಜನರ ಮತದಾನದ ಸಾಂವಿಧಾನಿಕ ಹಕ್ಕು ಇಲ್ಲದಂತೆ ಮಾಡಲು, ಚುನಾವಣಾ ಆಯೋಗ ಮತ್ತು ಸ್ವತಃ ಸಂವಿಧಾನವನ್ನು ಬುಡಮೇಲು ಮಾಡಲಾಗುತ್ತಿದೆ ಎಂಬುದಕ್ಕೆ ಹೆಚ್ಚೆಚ್ಚು ಪುರಾವೆಗಳು ಪ್ರಕಟವಾಗುತ್ತಿರುವಾಗ ಗಮನವನ್ನು ಬೇರೆಡೆಗೆ ತಿರುಗಿಸುವ ಒಂದು ಪ್ರಯತ್ನವಿದು ಎಂದು ಹೆಚ್ಚೆಚ್ಚು ಜನವಿಭಾಗಗಳು ನೋಡುತ್ತಿವೆ.
                                                                                                                                                                                                                                                               ನೀಲೋತ್ಪಲ ಬಸು

ಸಂಸತ್ತಿನ ಮಳೆಗಾಲದ ಅಧಿವೇಶನದ ಕೊನೆಯ ದಿನ ಜನರಿಗೆ ಮತ್ತು ಅವರ ಪ್ರತಿನಿಧಿಗಳಿಗೆ ಅಚ್ಚರಿ ಮತ್ತು ಆಘಾತ ಕಾದಿತ್ತು. ಜನರ ಮತದಾನದ ಮೂಲಭೂತ ಹಕ್ಕಿಗೆ ದೊಡ್ಡ ಪ್ರಮಾಣದಲ್ಲಿ ಕಂಟಕವುಂಟು ಮಾಡುವ ಆರೋಪಗಳು ತೀವ್ರ ಬಿರುಗಾಳಿ ಎಬ್ಬಿಸಿದ್ದ ಒಂದು ಅಧಿವೇಶನದ ನಡುವೆ, ಸಂಜೆ ಮುಗಿಯುತ್ತಿದ್ದಂತೆ ಗೃಹಮಂತ್ರಿ ಅಮಿತ್ ಷಾ ಒಂದು ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು.

ಸಂವಿಧಾನ (130ನೇ ತಿದ್ದುಪಡಿ) ಮಸೂದೆ, 2025, ಸಾಂವಿಧಾನಿಕ ಮತ್ತು ಕಾನೂನಿನ ಪ್ರಶ್ನೆಗಳನ್ನು ಎತ್ತಿದೆ. ಆದರೆ ಇಲ್ಲಿ ಮುಖ್ಯವಾಗಿ ಇದನ್ನು ರೂಪಿಸುವಲ್ಲಿ ಒಳಗೊಂಡಿರುವ ರಾಜಕೀಯವನ್ನು ಪರೀಕ್ಷಿಸಬೇಕಾಗಿದೆ. ಅದರಲ್ಲೂ, ಸಂವಿಧಾನ ತಿದ್ದುಪಡಿಯನ್ನು ತರುವ ಕಾರ್ಯವಿಧಾನದಲ್ಲಿ ತುಸುವಾದರೂ ಕಾತುರತೆ ಇರುವ ಯಾವುದೇ ನಾಗರಿಕರಿಗೆ ಈ ಕಸರತ್ತು ತಲ್ಲಣ ಉಂಟುಮಾಡದಿರದು. ಒಂದು ಸಂವಿಧಾನ ತಿದ್ದುಪಡಿಯನ್ನು ಅಂಗೀಕರಿಸಲು, ಆಳುವ ಕೂಟಕ್ಕೆ ಸಂಸತ್ತಿನ ಎರಡೂ ಸದನಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸದಸ್ಯರು ಹಾಜರಿದ್ದು, ಅವರ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಪ್ರಸ್ತುತ ಎರಡು ಸದನಗಳ ಸಂಯೋಜನೆಯ ಬಗ್ಗೆ ಸರಳ ಅಂಕಗಣಿತದ ಮೂಲಭೂತ ತಿಳಿವು ಇರುವ ಯಾರಿಗೇ ಆದರೂ. ಈ ಮಸೂದೆಯ ಅಂಗೀಕಾರ ಸಾಧ್ಯವೇ ಇಲ್ಲ ಎಂದು ಖಂಡಿತವಾಗಿಯೂ ಕಾಣುತ್ತದೆ.

ಇದನ್ನೂ ಓದಿ: ಕಾರ್ಯನಿರ್ವಹಿಸುವಲ್ಲಿ ಕಿರುಕುಳ ನೀಡಿದರೇ ಸೂಕ್ತ ಕ್ರಮ: ನಾಗಲಕ್ಷ್ಮೀ ಚೌದರಿ

ಮತದಾನದ ಹಕ್ಕನ್ನು ಬುಡಮೇಲು ಮಾಡುವ ಪ್ರಯತ್ನಗಳತ್ತ ಗಮನ ಹರಿಯದಂತೆ ಮಾಡಲು 130ನೇ ತಿದ್ದುಪಡಿ ಮಸೂದೆ?
ಮತದಾನದ ಹಕ್ಕನ್ನು ಬುಡಮೇಲು ಮಾಡುವ ಪ್ರಯತ್ನಗಳತ್ತ ಗಮನ ಹರಿಯದಂತೆ ಮಾಡಲು 130ನೇ ತಿದ್ದುಪಡಿ ಮಸೂದೆ?

ಹಾಗಾದರೆ ಎಂದಿಗೂ ಅಂಗೀಕಾರವಾಗಲಾರದ ಒಂದು ಶಾಸನವನ್ನು ಮುಂದೊತ್ತಲು ಏಕೆ ಈ ಅತ್ಯಾತುರ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಸರ್ಕಾರ ತನ್ನದೇ ಆದ ಉತ್ತರವನ್ನು ಒದಗಿಸಿದೆ. ಇದು ‘ಸಾರ್ವಜನಿಕ ಹಿತಾಸಕ್ತಿ, ಕಲ್ಯಾಣ ಮತ್ತು ಉತ್ತಮ ಆಳ್ವಿಕೆಯ’ ಒಂದು ಹೆಚ್ಚು ಉತ್ತಮವಾದ ರಕ್ಷಣೆಯನ್ನು ತರುವುದಕ್ಕಾಗಿ ಎಂಬುದು ಅವರ ದಾವೆ. ಈ ದಾವೆಯನ್ನು ‘ಸಾಂವಿಧಾನಿಕ ನೈತಿಕತೆಯ’ ಪುನಃಸ್ಥಾಪನೆಯ ಮಟ್ಟಕ್ಕೆ ಏರಿಸುವುದಾದರೆ, ಅದು ನಿಜವಾಗಿಯೂ ವಿಲಕ್ಷಣ ಸಂಗತಿಯಾಗುತ್ತದೆ.

ಮತದಾನದ ಹಕ್ಕನ್ನು ಬುಡಮೇಲು ಮಾಡುವ ಪ್ರಯತ್ನಗಳತ್ತ ಗಮನ ಹರಿಯದಂತೆ ಮಾಡಲು 130ನೇ ತಿದ್ದುಪಡಿ ಮಸೂದೆ?
ಮತದಾನದ ಹಕ್ಕನ್ನು ಬುಡಮೇಲು ಮಾಡುವ ಪ್ರಯತ್ನಗಳತ್ತ ಗಮನ ಹರಿಯದಂತೆ ಮಾಡಲು 130ನೇ ತಿದ್ದುಪಡಿ ಮಸೂದೆ?

 

 ‘ಸಾಂವಿಧಾನಿಕ ನೈತಿಕತೆ’ಯ ಭೀಷಣ ದಾಖಲೆ!

ಈ ವಿಷಯದಲ್ಲಿ ಸರ್ಕಾರದ ದಾಖಲೆಯ ಆಧಾರದ ಮೇಲೆ ಇಂತಹ ಉನ್ನತ ದಾವೆಗಳನ್ನು ಪರೀಕ್ಷಿಸಬೇಕಾಗುತ್ತದೆ. ಹಿಂದೆ, ಈ ಸರ್ಕಾರವೇ ಹಣ ಮಡಿಮಾಡುವುದನ್ನು ತಡೆಯುವ ಕಾಯ್ದೆ (ಪಿಎಂಎಲ್‌ಎ)ಗೆ ತಿದ್ದುಪಡಿ ತಂದಿತ್ತು; ವಾಸ್ತವವಾಗಿ ಇದು ಜಾರಿ ನಿರ್ದೇಶನಾಲಯ(ಇ.ಡಿ.)ವನ್ನು ಅಸ್ತ್ರವನ್ನಾಗಿ ಮಾಡಿತು. ಈ ಹೊಸ ತಿದ್ದುಪಡಿಯ ಅಡಿಯಲ್ಲಿ ಆರೋಪ ಹೊರಿಸಲ್ಪಟ್ಟವರಿಗೆ ಜಾಮೀನು ನಿರಾಕರಿಸಲು ಇ.ಡಿ.ಯನ್ನು ಶಸ್ತ್ರಸಜ್ಜಿತಗೊಳಿಸಲಾಯಿತು. ಪಿಎಂಎಲ್‌ಎ ಯ ಈ ಹೊಸ ಅವತಾರವನ್ನು ಅಂಗೀಕರಿಸಿದ ನಂತರ, ದೇಶವು ಮುಖ್ಯಮಂತ್ರಿಗಳೂ ಸೇರಿದಂತೆ ಹೆಚ್ಚಾಗಿ ಪ್ರಮುಖ ವಿಪಕ್ಷಗಳ ನಾಯಕರನ್ನೇ ಈ ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಆರು ತಿಂಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿ ಇರಿಸಲಾಗಿದೆ ಎಂಬುದನ್ನು ಕಂಡಿದೆ. ಮುಖ್ಯಮಂತ್ರಿಗಳಾದ ದೆಹಲಿಯ ಅರವಿಂದ್ ಕೇಜ್ರಿವಾಲ್ ಮತ್ತು ಜಾರ್ಖಂಡ್‌ನ ಹೇಮಂತ್ ಸೊರೆನ್ ಅವರನ್ನು ನಂತರ ಸಂಬಂಧಪಟ್ಟ ಹೈಕೋರ್ಟುಗಳು ಈ ಆರೋಪಗಳಿಂದ ಮುಕ್ತಗೊಳಿಸಿದವು. ಪ್ರಸ್ತಾವಿತ 130 ನೇ ಸಂವಿಧಾನ ತಿದ್ದುಪಡಿ ಜಾರಿಯಲ್ಲಿದ್ದಿದ್ದರೆ, ಈ ಇಬ್ಬರು ಖಂಡಿತವಾಗಿಯೂ ತಮ್ಮ ಹುದ್ದೆಯನ್ನು ಕಳೆದುಕೊಳ್ಳುತ್ತಿದ್ದರು.

ಆದರೆ, ಸರ್ಕಾರದ ಮುಂದೆ ಮಣಿಯಲು ಸತತವಾಗಿ ನಿರಾಕರಿಸುವ ವಿಪಕ್ಷಗಳ ಮುಖ್ಯಮಂತ್ರಿಗಳು ಒತ್ತಟ್ಟಿಗಿರಲಿ. ಸರ್ಕಾರವು ತನಗೆ ಬೇಕಾದಂತೆ ವಿಪಕ್ಷಗಳ ನಾಯಕರನ್ನು, ಸಂಸದರನ್ನು ಮತ್ತು ಶಾಸಕರನ್ನು ಶರಣಾಗುವಂತೆ ಮತ್ತು ಬಿಜೆಪಿಗೆ ಬಂದುಬಿಡುವಂತೆ ಮಣಿಸಬಹುದು. ಏಪ್ರಿಲ್ 2024 ರಲ್ಲಿ, ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯು ಇದರ ಕಾರ್ಯವಿಧಾನವನ್ನು ಮತ್ತು ಆಳುವ ಪಕ್ಷದ ಸವಲತ್ತುಗಳನ್ನು ಪಡೆಯಲು ಮುಂದಾದ ಇಂತಹ ಎರಡು ಡಜನ್‌ಗಿಂತಲೂ ಹೆಚ್ಚು ವಿಪಕ್ಷಗಳ ಸದಸ್ಯರ ಪಟ್ಟಿಯೊಂದಿಗೆ ಒಂದು ವರದಿಯನ್ನು ಮುಖುಟದಲ್ಲಿ ಪ್ರಕಟಿಸಿತು. ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ನ ಮಾಜಿ ಸಚಿವ ಹಾಗೂ ಈಗ ಪ್ರತಿಪಕ್ಷ ಬಿಜೆಪಿಯ ಮುಖಂಡರಾಗಿರುವ ಸುವೇಂಧು ಅಧಿಕಾರಿಯಿಂದ ಹಿಡಿದು, ಮಹಾರಾಷ್ಟ್ರದ ಮಾಜಿ ಕಾಂಗ್ರೆಸ್ ಮುಖ್ಯಮಂತ್ರಿ ಅಶೋಕ್ ಚವಾಣ್ ಮತ್ತು ಬಿಜೆಪಿಯ ಉನ್ನತ ನಾಯಕರ ಪ್ರಸಕ್ತ ಕಣ್ಮಣಿ ಮತ್ತು ಅಸ್ಸಾಂನ ಪ್ರಸ್ತುತ ಮುಖ್ಯಮಂತ್ರಿ ಹೇಮಂತ ಬಿಸ್ವ ಸರ್ಮಾ ವರೆಗೆ ಈ ಪಟ್ಟಿಯಲ್ಲಿದ್ದರು.

ಅವರೆಲ್ಲರ ಮೇಲೂ ಇ.ಡಿ. ಆರೋಪಗಳನ್ನು ಹೊರಿಸಿತ್ತು. ಮತ್ತು ಆಳುವ ಪಕ್ಷದ ಕಡೆಗೆ ದಾಟಿದ ನಂತರ, ಅವರಿಗೆ ತಕ್ಷಣವೇ ಶುದ್ಧಹಸ್ತರೆಂಬ ಪ್ರಮಾಣ ಪತ್ರ ಸಿಕ್ಕಿತು.

ಈ ಅಸಹ್ಯಕರ ಕಾರ್ಯವಿಧಾನದ ಅತ್ಯಂತ ಕೆಟ್ಟ ಪ್ರಹಸನವನ್ನು ಮಹಾರಾಷ್ಟ್ರದಲ್ಲಿ ಮಾಡಲಾಯಿತು; ಅಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಶಿವಸೇನೆ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಎರಡನ್ನೂ ವಿಭಜಿಸುವ ಮೂಲಕ ಉರುಳಿಸಲಾಯಿತು. ಈ ಕೃತ್ಯ ಎಷ್ಟು ನಿರ್ಲಜ್ಜವಾಗಿತ್ತೆಂದರೆ, ಶಿವಸೇನೆಯಿಂದ ಬಣ್ಣ ಬದಲಾಯಿಸಿದ ಏಕನಾಥ್ ಶಿಂಧೆ ನೇತೃತ್ವದ ಹೊಸ ಸರ್ಕಾರದ ಒಂಬತ್ತು ಸಚಿವರ ಮೇಲೆ ಇ.ಡಿ. ಆರೋಪ ಹೊರಿಸಿತ್ತು ಎಂದು ಗೊತ್ತಾಗಿದೆ. ನಂತರ ಈ ವ್ಯಕ್ತಿಗಳ ನೈರ್ಮಲ್ಯೀಕರಣವು ಬಿಜೆಪಿಗೆ ‘ವಾಷಿಂಗ್ ಮೆಷಿನ್’ ಎಂಬ ಜಿಗುಪ್ಸೆ ಹುಟ್ಟಿಸುವ ವಿಶೇಷವನ್ನು ತಂದುಕೊಟ್ಟಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಆದ್ದರಿಂದ, ಇಂದು ಅಮಿತ್ ಷಾ ಪ್ರಸ್ತಾವಿಸುತ ತಿದ್ದುಪಡಿ ರಾಜಕೀಯ ಅಥವಾ ಚುನಾವಣೆಯ ಬಗ್ಗೆ ಅಲ್ಲ ಎಂದು ಹೇಳುವ ಮೂಲಕ ಸಂತನಂತೆ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಂಡು ಅವರ ಸ್ವಂತ ಪಕ್ಷದ ಜನರು ಸಹ ಅಂತಹ ಅಸಂಬದ್ಧ ದಾವೆಗಳ ಬಗ್ಗೆ ಖಾಸಗಿಯಾಗಿ ನಗುತ್ತಿರಬಹುದು!

 “ವಾಶಿಂಗ್‌ಮೆಷಿನ್ ಬಳಸಲು ಸಾಧ್ಯವಿಲ್ಲದಾಗ ಇದನ್ನು ಬಳಸಲಾಗುವುದು”

ಭ್ರಷ್ಟಾಚಾರದ ವಿಷಯದಲ್ಲಿ ಬಿಜೆಪಿಯನ್ನು ಬಯಲಿಗೆ ತಂದ ಅತಿದೊಡ್ಡ ಸಂಗತಿ ಈಗ ಬಹಳ ಚೆನ್ನಾಗಿ ದಾಖಲಾಗಿದೆ, ಸುಪ್ರೀಂ ಕೋರ್ಟ್ ಬಿಜೆಪಿ ಸರಕಾರದ ಚುನಾವಣಾ ಬಾಂಡ್(ಇಬಿ) ಯೋಜನೆಯನ್ನು ಅಸಂವಿಧಾನಿಕ ಎಂದು ಘೋಷಿಸಿದೆ. ಈ ಯೋಜನೆ ಬಿಜೆಪಿ ಮತ್ತು ಕಾರ್ಪೊರೇಟ್‌ಗಳ ಒಂದು ಭಾಗದ ನಡುವೆ ಪರಸ್ಪರ ಕೆಲಸ ಮಾಡಿಸಿಕೊಳ್ಳುವ ಒಂದು ಅತ್ಯಂತ ನಗ್ನ ಕೃತ್ಯವಾಗಿತ್ತು. ವಾಸ್ತವವಾಗಿ, ಈ ಯೋಜನೆಯಡಿಯಲ್ಲಿ ಬಿಜೆಪಿ ಸ್ವೀಕರಿಸಿದ ದೇಣಿಗೆಗಳ ವಿವರಗಳು ಅದಕ್ಕೆ 5,000 ಕೋಟಿ ರೂ.ಗಳಿಗಿಂತ ಹೆಚ್ಚಿನ ಭಂಡಾರವನ್ನು ಪಡೆಯಲು ಯಾವ ರೀತಿಯ ಅಕ್ರಮ ವಹಿವಾಟುಗಳು ಅನುವು ಮಾಡಿಕೊಟ್ಟವು ಎಂಬುದರ ರೂಪುರೇಷೆಯನ್ನು ಸ್ಪಷ್ಟವಾಗಿ ಕೊಡುತ್ತವೆ. ಅಂತಹ ಬೃಹತ್ ಪ್ರಮಾಣದ ನಿಧಿಗಳನ್ನು ಪಡೆಯುವುದನ್ನು ಇ.ಡಿ. ಮತ್ತು ಸಿಬಿಐ ಸುಗಮಗೊಳಿಸಿದವು ಎಂಬುದನ್ನು ನಂತರದ ಮಾಧ್ಯಮ ತನಿಖೆಗಳು ಪ್ರಕಟಪಡಿಸಿವೆ. ಚುನಾವಣಾ ಬಾಂಡ್ ಯೋಜನೆ ಸ್ವಯಂಪ್ರೇರಿತ ದೇಣಿಗೆಗಳಲ್ಲ, ಅದಕ್ಕಿಂತ ಸಂಪೂರ್ಣ ಭಿನ್ನವಾಗಿ ಪಕ್ಕಾ ಸುಲಿಗೆಗಳೇ ಎಂದು ತೋರಿಸಿವೆ.

ಅಪಾರದರ್ಶಕತೆಯ ಅತ್ಯಂತ ಕೆಟ್ಟ ಜಾಹೀರಾತು

ಆದರೆ ಅಮಿತ್ ಷಾರವರಿಗೆ, ಸಾರ್ವಜನಿಕರ ನೆನಪು ಅಷ್ಟೇನೂ ಬೇಗ ಅಳಿಸಿಹೋಗುವುದಿಲ್ಲ, ಸಾಂವಿಧಾನಿಕ ನೈತಿಕತೆಯ ಅವರ ಉಲ್ಲೇಖವನ್ನು ಎಂದಿಗೂ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಯಾರು ತಾನೇ ನೆನಪಿಸಲು ಸಾಧ್ಯ? ಗೃಹ ಸಚಿವರು ಉಪಾಧ್ಯಕ್ಷ ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಅವರ ಮೇಲೆ ಆರೋಪ ಹೊರಿಸಲು ಸುಪ್ರೀಂ ಕೋರ್ಟ್ ಆದೇಶದ ನಿಂದನೆಯ ವರೆಗೂ ಯಾವುದೇ ಹಂತಕ್ಕೂ ಹೋಗಬಲ್ಲರು; ಹಾಗೆ ನೋಡಿದರೆ, ಈ ಚುನಾವಣೆ ನಡೆಯುತ್ತಿರುವುದೇ, ಮೊದಲನೆಯದಾಗಿ ಮಾಜಿ ಉಪಾಧ್ಯಕ್ಷ ಜಗದೀಪ್ ಧಂಖರ್‌ಗೆ ಅವರು ಏನೇನೋ ಮಾಡಿದ್ದರಿಂದ ತಾನೇ.

ಭ್ರಷ್ಟಾಚಾರದ ವಿರುದ್ಧ ಹೋರಾಡುವ ಪ್ರಧಾನ ಸಾಧನ ವೆಂದರೆ ಆಳ್ವಿಕೆಯಲ್ಲಿ ಪಾರದರ್ಶಕತೆಯನ್ನು ಸ್ಮರಿಸುವುದು. ಪ್ರಧಾನ ಮಂತ್ರಿಯವರ ಶೈಕ್ಷಣಿಕ ದಾಖಲೆಗಳನ್ನು ನಿರಾಕರಿಸುವ ಬಗ್ಗೆ ಕಾನೂನು ಜಗ್ಗಾಟಗಳು ಬಹುಶಃ ಈ ಸರಕಾರ ಅಪಾರದರ್ಶಕತೆಗೆ ಎಷ್ಟೊಂದು ಅಂಟಿಕೊಂಡಿದೆ ಎಂಬುದರ ಅತ್ಯಂತ ಕೆಟ್ಟ ಜಾಹೀರಾತು! ಅವರ ಶೈಕ್ಷಣಿಕ ದಾಖಲೆಯೇನೇ ಇರಲಿ, ಈ ಕೃತ್ಯ ಸಾರ್ವಜನಿಕರ ದೃಷ್ಟಿಯಲ್ಲಿ ಪ್ರಧಾನಿ ಅಥವಾ ಅವರ ಸರ್ಕಾರದ ನೈತಿಕ ಮಟ್ಟವನ್ನು ಹೆಚ್ಚಿಸುತ್ತದೆಯೇ?

ಸರ್ಕಾರದ ಇಂತಹ ಭೀಷಣ ದಾಖಲೆಯ ಹಿನ್ನೆಲೆಯಲ್ಲಿ, ಸಂವಿಧಾನದ 130ನೇ ತಿದ್ದುಪಡಿ ಮಸೂದೆ, 2025 ರಲ್ಲಿ ನಿರೂಪಿಸಿರುವ ಧ್ಯೇಯೋದ್ದೇಶಗಳನ್ನು ಯಾರೂ ನಂಬಲು ಸಾಧ್ಯವಿಲ್ಲ. ಇಂತಹ ಅಸಹ್ಯಕರ ತಿದ್ದುಪಡಿಯನ್ನು ಇಷ್ಟೊಂದು ಹತಾಶರಾಗಿ ಮುಂದೊತ್ತುತ್ತಿರುವುದಾದರೂ ಯಾಕೆ ಎಂಬ ಪ್ರಶ್ನೆ ಕಾಡುತ್ತಲೇ ಇರುತ್ತದೆ. ಬಿಜೆಪಿಯ ಚುನಾವಣಾ ಹಿತಾಸಕ್ತಿಗಳನ್ನು ಭದ್ರಪಡಿಸಿಕೊಳ್ಳುವ ಸಲುವಾಗಿ ಜನರ ಮತದಾನದ ಸಾಂವಿಧಾನಿಕ ಹಕ್ಕು ಇಲ್ಲದಂತೆ ಮಾಡಲು. ಸಾಂವಿಧಾನಿಕ ಸಂಸ್ಥೆಯಾದ ಭಾರತದ ಚುನಾವಣಾ ಆಯೋಗ (ಇಸಿಐ) ಮತ್ತು ಸ್ವತಃ ಸಂವಿಧಾನವನ್ನು ಬುಡಮೇಲು ಮಾಡಲಾಗುತ್ತಿದೆ ಎಂಬುದಕ್ಕೆ ಹೆಚ್ಚುತ್ತಿರುವ ಪುರಾವೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಒಂದು ಪ್ರಯತ್ನವಿದು ಎಂದು ಹೆಚ್ಚೆಚ್ಚು ಜನವಿಭಾಗಗಳು ನೋಡುತ್ತಿವೆ.

(ಕೃಪೆ: ‘ಪೀಪಲ್ಸ್ ಡೆಮಾಕ್ರಸಿ’ ವಾರಪತ್ರಿಕೆ)

ಇದನ್ನೂ ನೋಡಿ: ಅಮೆರಿಕ ಮಣಿಸಿದ ಮಹಾನ್‌ ನಾಯಕ ಫಿಡೆಲ್‌ ಕ್ಯಾಸ್ಟ್ರೊ – ಕೆ.ಎಸ್.ರವಿಕುಮಾರ್Janashakthi Media

Donate Janashakthi Media

Leave a Reply

Your email address will not be published. Required fields are marked *