ನವದೆಹಲಿ: ನಮ್ಮ ದೇಶಾದ್ಯಂತ ಮಹಾಸೋಂಕು ನಿಯಂತ್ರಿಸಲಾರದ ರೀತಿಯಲ್ಲಿ ಉಕ್ಕೇರಿ ಬರುತ್ತಿರುವ ಸಮಯದಲ್ಲಿ ಕೇಂದ್ರ ಸರಕಾರ ಎಲ್ಲ ಗಮನವನ್ನು ಆಮ್ಲಜನಕದ ಪೂರೈಕೆ ದೇಶಾದ್ಯಂತ ಎಲ್ಲ ಆಸ್ಪತ್ರೆಗಳಿಗೆ ಮತ್ತು ಆರೋಗ್ಯ ಕೇಂದ್ರಗಳಿಗೆ ಯಾವುದೇ ತಡೆಯಿಲ್ಲದಂತೆ ಹರಿದು ಬರುವಂತೆ ಖಚಿತ ಪಡಿಸುವುದರ ಮೇಲೆ ಕೇಂದ್ರೀಕರಿಸಬೇಕು ಮತ್ತು ತಕ್ಷಣವೇ ದೇಶಾದ್ಯಂತ ಒಂದು ಉಚಿತ ಸಾಮೂಹಿಕ ಲಸಿಕೀಕರಣ ಕಾರ್ಯಕ್ರಮವನ್ನು ಆರಂಭಿಸಬೇಕು ಮತ್ತು ಇದಕ್ಕೆ ಲಸಿಕೀಕರಣ ಕಾರ್ಯಕ್ರಮಕ್ಕೆಂದು ಬಜೆಟ್ನಲ್ಲಿ ನೀಡಿರುವ ರೂ.35,000 ಕೋಟಿಯನ್ನು ಬಳಸಬೇಕು ಎಂದು 13 ರಾಜಕೀಯ ಪಕ್ಷಗಳ ಮುಖಂಡರು ಜಂಟಿ ಹೇಳಿಕೆಯೊಂದರಲ್ಲಿ ಆಗ್ರಹಿಸಿದ್ದಾರೆ.
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಮತ್ತು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜ ರವರಲ್ಲದೆ ಸೋನಿಯಾ ಗಾಂಧಿ (ಕಾಂಗ್ರೆಸ್), ಹೆಚ್.ಡಿ.ದೇವೇಗೌಡ(ಜೆಡಿ-ಎಸ್), ಶರದ್ ಪವಾರ್ (ಎನ್ಸಿಪಿ) ಉದ್ಧವ್ ಠಕ್ರೆ(ಶಿವಸೇನಾ), ಮಮತಾ ಬ್ಯಾನರ್ಜಿ( ಟಿಎಂಸಿ), ಹೇಮಂತ್ ಸೋರೆನ್ ( ಜೆಎಂಎಂ), ಎಂ ಕೆ ಸ್ಟಾಲಿನ್ (ಡಿಎಂಕೆ), ಮಾಯಾವತಿ (ಬಿಎಸ್ಪಿ), ಫಾರುಕ್ ಅಬ್ದುಲ್ಲ(ಜಮ್ಮು-ಕಾಶ್ಮೀರ ಜನತಾ ಮೈತ್ರಿಕೂಟ), ಅಖಿಲೇಶ ಯಾದವ್(ಎಸ್ಪಿ) ಮತ್ತು ತೇಜಸ್ವಿ ಯಾದವ್(ಆರ್ ಜೆ ಡಿ) ಈ ಕುರಿತ ಜಂಟಿ ಹೇಳಿಕೆ ಪ್ರಕಟಿಸಿದ್ದಾರೆ.