ಗ್ರಾಮ ಪಂಚಾಯತಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ವತಿಯಿಂದ ಪ್ರತಿಭಟನೆ

ಕೋಲಾರ: ಗ್ರಾಮ ಪಂಚಾಯತಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ ಸಿಐಟಿಯು ವತಿಯಿಂದ ಜಿಲ್ಲೆಯಾದ್ಯಂತ ಗ್ರಾಪಂ ಕಛೇರಿಗಳ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ಕೊರೊನಾ ಹೋಗಲಾಡಿಸಲು ಹಗಲುರಾತ್ರಿ ಎನ್ನದೇ ದುಡಿಯುತ್ತಾ ಇದ್ದಾರೆ ಗ್ರಾಮಗಳಲ್ಲಿ ಸೋಂಕಿತರಿಗೆ ಪಂಚಾಯತಿ ಮತ್ತು ಆರೋಗ್ಯ ಇಲಾಖೆಯಿಂದ ನೇರವಾಗಿ ಸಹಾಯ ಮತ್ತು ಮಾರ್ಗದರ್ಶನ ನೀಡುತ್ತಾ ಇದ್ದಾರೆ ಇಂತವರನ್ನು ಸರಕಾರಗಳು ಕೊರೊನಾ ವಾರಿಯರ್ಸ್‌ ಆಗಿ ನೇಮಕಮಾಡುವ ಜೊತೆಗೆ ಸರಕಾರದ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯತಿ ನೌಕರರಿಗೆ ಕಳೆದ ಎರಡು‌ ಮೂರು ವರ್ಷಗಳಿಂದ ವೇತನ ನೀಡಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಕೂಡಲೇ ಬಾಕಿ ವೇತನದ ಹಣ ಬಿಡುಗಡೆ ಮಾಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪಂಚಾಯಿತಿಯ ಕರ ವಸೂಲಿ ಹಣದಲ್ಲಿ ಶೇಕಡ 40ರಷ್ಟು ಹಣದಲ್ಲಿ ಸಿಬ್ಬಂದಿ ಬಾಕಿ ವೇತನ ಪಾವತಿ‌ ಮಾಡಬೇಕು. ಎಲ್ಲಾ‌‌ ಸಿಬ್ಬಂದಿಗೆ ಪಿಂಚಣಿ ನೀಡಬೇಕು. ವೈದ್ಯಕೀಯ ವೆಚ್ಚ ನೀಡಬೇಕು. ನೌಕರರಿಗೆ ಸಮವಸ್ತ್ರ ನೀಡಬೇಕು ಎಂದು ಒತ್ತಾಯಿಸಿದರು.

ನಿವೃತ್ತಿ ಹೊಂದಿದ ನೌಕರರಿಗೆ ಬಾಕಿ ವೇತನ ಹಾಗೂ ನಿವೃತ್ತಿ ವೇತನ ನೀಡಬೇಕು. ಬಿಲ್‌ ಕಲೆಕ್ಟರ್‌ ಖಾಲಿ ಇರುವ ಹುದ್ದೆಗೆ ಅರ್ಹ ಪಂಪ್‌ ಆಪರೇಟರ್‌ಗಳಿಗೆ ಬಡ್ತಿ ನೀಡಬೇಕು ದೇಶದ 70% ಭಾಗವಾದ ಹಳ್ಳಿಗಳಲ್ಲಿ ಗ್ರಾಮ ಪಂಚಾಯತಿಗಳಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳನ್ನು ಕರೋನ ವಾರಿಯರ್ಸ ಎಂದು ಪರಿಗಣಿಸಿ ಆಸ್ಪತ್ರೆ ಖರ್ಚು ಮತ್ತು ಮರಣ ಹೊಂದಿದ ಸಿಬ್ಬಂದಿಗಳಿಗೆ 30 ಲಕ್ಷ ಪರಿಹಾರ ಹಣವನ್ನು  ಸರಕಾರದಿಂದಲೇ ಪರಿಹಾರ ಮೊತ್ತ ಪಾವತಿಸಬೇಕು ಎಂದು ಒತ್ತಾಯಿಸಿದರು

ಗ್ರಾಮ ಪಂಚಾಯತಿ ನೌಕರರಿಗೆ ವಿಶೇಷವಾಗಿ 15ನೇ ಹಣಕಾಸು ಯೋಜನೆಯ ಅನುದಾನ ಈಗಾಗಲೇ ಬಿಡುಗಡೆಯಾದ ಅನುದಾನದಲ್ಲಿ  ವೇತನ ಪಾವತಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಗಳ ವೇತನ ಪಾವತಿಸಬೇಕು ಕರವಸೂಲಿಯಲ್ಲಿ  ಬಿಲ್ ಕಲೆಕ್ಟರ್ ಮತ್ತು ಸಿಪಾಯಿ ವೇತನ ಪಾವತಿಸಬೇಕುಬಬಿಲ್ ಕಲೆಕ್ಟರ್ ಹಾಗೂ ಗುಮಾಸ್ತರಿಂದ ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ಬಡ್ತಿಗೆ ಈಗಾಗಲೇ ಸರಕಾರದ ನಿರ್ದೇಶನದಂತೆ ಬಡ್ತಿ ಕೊಡಬೇಕು ನಿವೃತ್ತಿ ವೇತನ ಮತ್ತು ಬಾಕಿ ವೇತನ ಪಾವತಿಸಬೇಕು ಎಂದು ಒತ್ತಾಯಿಸಿದರು.

 

Donate Janashakthi Media

Leave a Reply

Your email address will not be published. Required fields are marked *