ದೊಡ್ಡಬಳ್ಳಾಪುರ: ಫೈನಾನ್ಸ್ ಕೊಟ್ಟವರ ಕಿರುಕುಳಕ್ಕೆ ಬೇಸತ್ತ ದಂಪತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ ಘಟನೆ ದೊಡ್ಡಬಳ್ಳಾಪುರ ನಗರದ ಮುತ್ತೂರು ಬಳಿ ನಡೆದಿದೆ. ಪತಿ ಸ್ಥಳದಲ್ಲೇ ಮೃತಪಟ್ಟರೇ, ಪತ್ನಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
40 ವರ್ಷದ ಮೌಲಾಖಾನ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅವರ ಹೆಂಡತಿ ಸಮೀನಾ ಗಂಭೀರವಾಗಿ ಗಾಯಗೊಂಡಿದ್ದು, ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಮೌಲಾಖಾನ್ ನಗರದ ಇಸ್ಲಾಂಪುರ ನಿವಾಸಿಯಾಗಿದ್ದು, ಕಳೆದ 17 ವರ್ಷಗಳಿಂದ ನೇಕಾರಿಕೆ ವೃತ್ತಿ ಮಾಡುತ್ತಿದ್ದರು. ಹಣಕಾಸಿನ ಸಮಸ್ಯೆಯಿಂದ ಮೈಕ್ರೋ ಫೈನಾನ್ಸ್ ಕಂಪನಿಗಳಾದ ಬಂಧನ, SKS, ಬಜಾಜ್ ಫೈನಾನ್ಸ್ನಲ್ಲಿ 1.50 ಲಕ್ಷ ಸಾಲ ಮಾಡಿದ್ದರು ಎನ್ನಲಾಗಿದೆ.
ಸಾಲ ಮರು ಪಾವತಿಸುವಂತೆ ಫೈನಾನ್ಸ್ ಕಂಪನಿ ಪ್ರತಿನಿಧಿಗಳು ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ನೇಕಾರಿಕೆ ಕೆಲಸದಿಂದಲೂ ಅಷ್ಟೇನೂ ಆದಾಯ ಇರಲಿಲ್ಲ. ಗುರುವಾರ ಬೆಳಗ್ಗೆ ಮನೆ ಮುಂದೆ ಬಂದಿದ್ದ ಫೈನಾನ್ಸ್ ಪ್ರತಿನಿಧಿಗಳು ಸಾಲ ಮರುಪಾವತಿಸುವಂತೆ ಗಲಾಟೆ ಮಾಡಿದ್ದಾರೆ ಎನ್ನಲಾಗ್ತಿದೆ. ಇದರಿಂದ ಬೇಸತ್ತ ಮೌಲಾಖಾನ್ ಮತ್ತು ಸಮೀನಾ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ದೊಡ್ಡಬಳ್ಳಾಪುರ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ರಾಜ್ಯದಲ್ಲಿ ಇದೇ ರೀತಿ ಮೈಕ್ರೋ ಫೈನಾನ್ಸ್ ಕಂಪನಿಗಳ ಗೂಂಡಾಗಿರಿ ಹೆಚ್ಚಾಗುತ್ತಲೆ ಇದೆ. ಕಾಲಾವಕಾಶ ಕೇಳಿದರೂ ಕಾಲಾವಕಾಶ ನೀಡದೆ, ಬಡ್ಡಿಯ ಮೇಲೆ ಬಡ್ಡಿ ಹಾಕಿ ಕುಟುಂಬವನ್ನು ಬೀದಿಗೆ ತಂದು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಿವೆ. ಸಾಲ, ಬಡ್ಡಿಯ ಹೆಸರಲ್ಲಿ ಜೀವ ತೆಗೆಯುತ್ತಿರುವ ಮೈಕ್ರೋ ಫೈನಾನ್ಸ್ಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ದೇವಿ, ತಿಳಿಸಿದ್ದಾರೆ.
ಮೈಕ್ರೋ ಫೈನಾನ್ಸ್ ಗಳ ಕಾಟದಿಂದ, ಅದೆಷ್ಟೋ ಬಡ ಮಹಿಳೆಯರು, ತಮ್ಮ ಅಮೂಲ್ಯ ಜೀವವನ್ನು ಕಳೆದುಕೊಂಡಿದ್ದಾರೆ, ಅಲ್ಲದೆ ಈ ಮೈಕ್ರೋಫೈನಾನ್ಸ್ ಗಳ, ದಬ್ಬಾಳಿಕೆ, ರೌಡಿಸಂ ನಿಂದ, ಬಡ ಮಹಿಳೆಯರು ಆತ್ಮ ಹತ್ಯೆಯ ಪ್ರಯತ್ನಕ್ಕೂ, ಹಲವಾರು ಮಹಿಳೆಯರು ಪ್ರಯತ್ನ ಪಟ್ಟಿದ್ದಾರೆ,, ಈ ಬಗ್ಗೆ ಇಡೀ ರಾಜ್ಯದಲ್ಲಿ, ಋಣ ಮುಕ್ತ ಹೋರಾಟ ಸಮಿತಿ ರಚಿಸಿ ಇದರ ನೇತೃತ್ವದಲ್ಲಿ, ಸುಮಾರು 3 ವರ್ಷಗಳ ಹಿಂದೆ ಬೆಂಗಳೂರು ಫ್ರೆಡಂ ಪಾರ್ಕಿನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಕೂಡ ಮಾಡಿದ್ದೇವೆ, ಈ ಪ್ರತಿಭಟನೆ ಯಲ್ಲಿ ಸುಮಾರು 50,000 ಜನ ಸೇರಿದ್ರು ಈ ಪ್ರತಿಭಟನೆಗೆ, ಸರಕಾರದ ಪ್ರತಿನಿಧಿಯಾಗಿ ಬಂದ ಸಹಕಾರ ಸಚಿವ ಶ್ರೀ ಎಸ್. ಟಿ. ಸೋಮಶೇಖರ್ ಮನವಿ ಸ್ವೀಕರಿಸಿ, ಇನ್ಮುಂದೆ ಯಾವ್ದೆ ಮೈಕ್ರೋ ಫೈನಾನ್ಸ್ ಗಳು, ಈ ರಾಜ್ಯದಲ್ಲಿ ಬಡ ಮಹಿಳೆಯರಿಗೆ ತೊಂದರೆ ಕೊಟ್ಟಲ್ಲಿ, ಕಠಿಣವಾದ ಕಾನೂನು ಕ್ರಮವನ್ನು, ನಮ್ಮ ಸರಕಾರ ಕೈಗೊಳ್ಳುತ್ತೆ,, ಮಹಿಳೆಯರನ್ನು ಕಣ್ಣೀರು, ಹಾಕಿಸುವ ಯಾವ್ದೆ ಸರಕಾರ ಉಳಿದಿಲ್ಲ, ಈ ರಾಜ್ಯದಲ್ಲಿ, ಎಲ್ಲಾ ಮಹಿಳೆಯರ ರಕ್ಷಣೆಗೆ ಸರಕಾರ ಬದ್ದವಾಗಿದೆ,, ಸದ್ಯದಲ್ಲಿಯೇ ಈ ಋಣಮುಕ್ತ ಹೋರಾಟ ಸಮಿತಿಯ ಪದಾಧಿಕಾರಿಗಳನ್ನು, ನಮ್ಮ ಸರಕಾರ ಕರೆಯಿಸಿ ಮಾತುಕತೆ ಮಾಡ್ತೆವೆ, ಅಂತ ಭರವಸೆ ನೀಡಿದ್ರೂ… ಕಳೆದ 3 ವರ್ಷದಿಂದ ನಾವು ಸರಕಾರದ ಮಾತುಕತೆಯ, ನಿರೀಕ್ಷೆಯಲ್ಲಿ ಇದ್ದೇವೆ ಆದ್ರೆ ಇನ್ನು ಮುಂದೆ ನಾವು, ಸರಕಾರ ದಿಂದ ಯಾವ್ದೆ ಮಾತುಕತೆಯನ್ನು, ನಿರೀಕ್ಷೆ ಮಾಡಲ್ಲ ಈ ಸಮಸ್ಸೆಯ ಬಗ್ಗೆ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲಾ ಪಕ್ಷದ, ಶಾಶಕರಿಗೂ, ರಾಜ್ಯದ ಮುಖ್ಯಮಂತ್ರಿ, ವಿರೋಧ ಪಕ್ಷದ, ನಾಯಕರುಗಳಿಗೂ ಈ ಹಿಂದೇನೆ, ಮನವಿ ಅರ್ಪಿಸಿದರೂ, ಈ ಬಗ್ಗೆ, ಯಾವ್ದೆ ಪಕ್ಷದವರು, ಸದನದಲ್ಲಿ, ಪ್ರಸ್ತಾಪ ಮಾಡಿಲ್ಲ.. ಇದರಿಂದ ತಿಳಿಯುತ್ತೆ, ಈ ಮೈಕ್ರೋಫೈನಾನ್ಸ್ ಕಪ್ಪು ಹಣದಲ್ಲಿ ಇವರ ಪಾಲು ಕೂಡ ಇದೆ.. ಅಂತ,.. ಹಾಗಾಗಿ ಈ ಭ್ರಷ್ಟ ರಾಜಕಾರಣಿಗಳನ್ನು, ನಂಬಿ, ನಮ್ಮ ಸಮಿತಿ ಇನ್ನು ಹೋರಾಟ ಮಾಡಲ್ಲ,, ಈ ರಾಜ್ಯದಲ್ಲಿ, ಸುಮಾರು 68 ಲಕ್ಷ ಮಹಿಳೆಯರು ಈ ಮೈಕ್ರೋಫೈನಾನ್ಸ್ ಸಾಲ ಸಂತ್ರಸ್ತರು, ಸೇರಿ, ಈ ಇತಿಹಾಸದಲ್ಲಿಯೇ, ಈ ರಾಜಕಾರಣಿಗಳು, ನೆನಪಿಡಬೇಕಾದ ಒಂದು ನಿರ್ಣಾಯವನ್ನು ತಕೊಂಡಿದ್ದೇವೆ, ಅದೇನಂದ್ರೆ,, ಮುಂದಿನ ಎಲ್ಲಾ ಚುನಾವಣೆಗೆ, ಈ 68 ಲಕ್ಷ ಮಹಿಳೆಯರು ಹಾಗೂ ಅವರ ಮನೆಯ ಎಲ್ಲಾ ಸದಸ್ಯರು ನೋಟಾ ಬಟನ್ ಒತ್ತುವ, ಮೂಲಕ ಈ ರಾಜ್ಯದ, ಎಲ್ಲಾ ರಾಜಕೀಯ, ಪಕ್ಷ, ಹಾಗೂ ಅದರ ಮುಖಂಡರ ಮೇಲೆ ಅವಿಶ್ವಾಶ, ನಿರ್ಣಯ ವನ್ನು ಮಾಡಲು ಸಂಕಲ್ಪ ಮಾಡಿದ್ದೇವೆ