ವಿಧಾನಸಭಾ ಚುನಾವಣೆ; 124 ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಮೊದಲ ಪಟ್ಟಿ ಬಿಡುಗಡೆ-ವರುಣದಿಂದ ಸಿದ್ದು, ಕನಕಪುರದಿಂದ ಡಿಕೆಶಿ ಸ್ಪರ್ಧೆ

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್‌ ಪಕ್ಷವು ತನ್ನ ರಾಜ್ಯದ 224 ಕ್ಷೇತ್ರಗಳಲ್ಲಿ 124 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಮಾಡಿದೆ. ಈ ಮೂಲಕ ಆಡಳಿತರೂಢ ಬಿಜೆಪಿ ಮತ್ತು ರಾಜ್ಯ ಪ್ರಮುಖ ಪಕ್ಷ ಜೆಡಿ(ಎಸ್‌)ಗಳಿಗಿಂತ ಮೊದಲೇ ತನ್ನ ಅಭ್ಯರ್ಥಿಗಳನ್ನು ಕಾಂಗ್ರೆಸ್‌ ಅಂತಿಮಗೊಳಿಸಿದೆ.

ಸದ್ಯ ನೂರಕ್ಕೂ ಹೆಚ್ಚಿನ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಭಾವಿ ನಾಯಕರ ಸ್ಪರ್ಧೆ ಮಾಡಲಿರುವ ಕ್ಷೇತ್ರಗಳು ಅಂತಿಮಗೊಂಡಿವೆ. ಪ್ರಮುಖವಾಗಿ ಸಾಕಷ್ಟು ದಿನಗಳಿಂದ ಕ್ಷೇತ್ರ ಆಯ್ಕೆ ವಿಚಾರವಾಗಿಯೇ ಸುದ್ದಿಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಸ್ಪರ್ಧೆ ಮಾಡುವ ಕ್ಷೇತ್ರದ ಬಗ್ಗೆ ಇದ್ದಂತ ಕುತೂಹಲಕ್ಕೂ ತೆರೆ ಬಿದ್ದಿದೆ.

ಇದನ್ನು ಓದಿ: ಮುಂದಿನ ವಾರ ಕಾಂಗ್ರೆಸ್‌ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಗೆ ಸಿದ್ಧತೆ : ಮಾ.15 ರಂದು ಮಹತ್ವದ ಸಭೆ

ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ 124 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 32 ಮಂದಿ ವೀರಶೈವ ಲಿಂಗಾಯಿತರಿಗೆ, ರೆಡ್ಡಿ ಒಳಗೊಂಡಂತೆ 25 ಮಂದಿ ಒಕ್ಕಲಿಗರಿಗೆ ಟಿಕೆಟ್ ನೀಡಲಾಗಿದೆ.

22 ಜನ ಪರಿಶಿಷ್ಟ ಜಾತಿ, 10 ಜನ ಪರಿಶಿಷ್ಟ ಪಂಗಡ, 5 ಜನ ಬ್ರಾಹ್ಮಣ, 5 ಜನ ಕುರುಬ ಸಮುದಾಯ, 4 ಮಂದಿ ಈಡಿಗ ಸಮುದಾಯ, 8 ಜನ ಮುಸ್ಲಿಂ, ಮರಾಠ 2, ರಜಪೂತ್ 2, ಇತರೆ 7 ಹಾಗೂ ಒಬ್ಬರು ಕ್ರಿಶ್ಚಿಯನ್ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆಯಾಗಿದೆ.

ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ, ಕನಕಪುರ ಕ್ಷೇತ್ರದಿಂದ ಡಿ ಕೆ ಶಿವಕುಮಾರ್‌, ದೇವನಹಳ್ಳಿ(ಎಸ್‌ ಸಿ ಮೀಸಲು) ಕ್ಷೇತ್ರದಿಂದ ಕೆ.ಹೆಚ್.ಮುನಿಯಪ್ಪ, ಗಾಂಧಿನಗರದಿಂದ ದಿನೇಶ್‌ ಗುಂಡೂರಾವ್‌, ಬಿಟಿಎಂ ಲೇಔಟ್‌ ನಿಂದ ರಾಮಲಿಂಗ ರೆಡ್ಡಿ, ರಾಮನಗರ ಕ್ಷೇತ್ರದಿಂದ ಇಕ್ಬಾಲ್‌ ಹುಸೇನ್ ಎಚ್‌ ಎ ಅವರಿಗೆ ಟಿಕೆಟ್‌ ನೀಡಲಾಗಿದೆ.

ಇದನ್ನು ಓದಿ: ಕೈ ಅಭ್ಯರ್ಥಿಗಳ ಮೊದಲ ಪಟ್ಟಿ ನಾಳೆ ಬಿಡುಗಡೆ : ಡಿ.ಕೆ.ಶಿವಕುಮಾರ್‌

ಕೊರಟಗೆರೆ (ಎಸ್‌ಸಿ ಮೀಸಲು) ಕ್ಷೇತ್ರದಿಂದ ಜಿ.ಪರಮೇಶ್ವರ್‌, ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಶಾಮನೂರು ಶಿವಶಂಕರಪ್ಪ, ದಾವಣಗೆರೆ ಉತ್ತರ ಎಸ್.ಎಸ್.‌ ಮಲ್ಲಿಕಾರ್ಜುನ್, ಟಿ.ನರಸೀಪುರ ಹೆಚ್.ಸಿ.ಮಹದೇವಪ್ಪ, ಹೊಸಕೋಟೆ‌ ಕ್ಷೇತ್ರದಿಂದ ಶರತ್‌ ಬಚ್ಚೇಗೌಡ, ಚಿತ್ತಾಪುರ (ಎಸ್‌ಸಿ ಮೀಸಲು) ಕ್ಷೇತ್ರದಿಂದ ಪ್ರಿಯಾಂಕ್‌ ಖರ್ಗೆ, ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಟಿಕೆಟ್‌ ನೀಡಲಾಗಿದೆ.

ನಂಜನಗೂಡು (ಎಸ್‌ಸಿ ಮೀಸಲು) ಕ್ಷೇತ್ರದಿಂದ ಧ್ರುವನಾರಾಯಣ್‌ ಅವರ ಪುತ್ರ ದರ್ಶನ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಇನ್ನು ಕಾಂಗ್ರೆಸ್‌ಗೆ ಸೇರ್ಪಡೆಯಾದ ಪಕ್ಷೇತರ ಶಾಸಕ ಎಚ್‌. ನಾಗೇಶ್‌ ಗೆ ಮಹದೇವಪುರ(ಎಸ್‌ಟಿ ಮೀಸಲು) ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ.

ಕ್ಷೇತ್ರ ಹಾಗೂ ಅಭ್ಯರ್ಥಿಗಳ ಪಟ್ಟಿ ಹೀಗಿವೆ;

ಕ್ಷೇತ್ರ ಸಂಖ್ಯೆ ಕ್ಷೇತ್ರದ ಹೆಸರು ಅಭ್ಯರ್ಥಿ ಹೆಸರು
2 ಚಿಕ್ಕೋಡಿ-ಸದಲಗಾ ಗಣೇಶ್‌ ಹುಕ್ಕೇರಿ
4 ಕಾಗವಾಡ ಬರಮಗೌಡ ಅಲಗೌಡ ಕಾಗೆ
5 ಕುಡಚಿ – ಎಸ್‌ಸಿ ಮಹೇಂದ್ರ ಕೆ. ತಮ್ಮಣ್ಣನ್ನವರ್‌
7 ಹುಕ್ಕೇರಿ ಎ.ಬಿ. ಪಾಟೀಲ್‌
10 ಯಮಕನಮರಡಿ – ಎಸ್‌ಟಿ ಸತೀಶ್‌ ಲಕ್ಷ್ಮಣರಾವ್‌ ಜಾರಕಿಹೊಳಿ
14 ಖಾನಪುರ ಡಾ. ಅಂಜಲಿ ನಿಂಬಾಳ್ಕರ್‌
16 ಬೈಲಹೊಂಗಲ ಮಹಾಂತೇಶ್‌ ಶಿವಾನಂದ ಕೌಜಲಗಿ
18 ರಾಮದುರ್ಗ ಅಶೋಕ್‌ ಎಂ. ಪಣ್ಣಣ
21 ಜಮಖಂಡಿ ಆನಂದ ಸಿದ್ದು ನ್ಯಾಮಗೌಡ
25 ಹುನಗುಂಡ ವಿಜಯಾನಂದ ಎಸ್‌. ಕಾಶಪ್ಪನವರ್‌
26 ಮುದ್ದೇಬಿಹಾಳ ಅಪ್ಪಾಜಿ ಅಲಿಯಾಸ್‌ ಸಿ.ಎಸ್‌. ನಾಡಗೌಡ
28 ಬಸವನಬಾಗೇವಾಡಿ ಶಿವಾನಂದ ಪಾಟೀಲ್
29 ಬಬಲೇಶ್ವರ ಎಂ.ಬಿ. ಪಾಟೀಲ್‌
32 ಇಂಡಿ ಯಶವಂತರಾಯಗೌಡ ವಿ. ಪಾಟೀಲ್‌
35 ಜೇವರ್ಗಿ ಡಾ. ಅಜಯ್‌ ಧರಂ ಸಿಂಗ್‌
36 ಶೋರಾಪುರ್‌ -ಎಸ್ಟಿ ರಾಜಾವೆಂಕಟಪ್ಪ ನಾಯ್ಕ್‌
37 ಶಹಾಪುರ್‌ ಶರಣಬಸಪ್ಪ ಗೌಡ
41 ಸೇಡಂ ಡಾ. ಶರಣಪ್ರಕಾಶ್‌ ಪಾಟೀಲ್‌
42 ಚಿಂಚೋಳಿ – ಎಸ್‌ಸಿ ಸುಭಾಷ್ ವಿ. ರಾಥೋಡ್‌
45 ಗುಲ್ಬರ್ಗಾ ಉತ್ತರ ಕನೀಝ್‌ ಫಾತೀಮಾ
46 ಆಳಂದ ಬಿ.ಆರ್‌. ಪಾಟೀಲ್‌
48 ಹುಮನಾಬಾದ್ ರಾಜಶೇಖರ್‌ ಬಿ. ಪಾಟೀಲ್‌
49 ಬೀದರ್‌ ದಕ್ಷಿಣ ಅಶೋಕ್‌ ಖೇಣಿ
50 ಬೀದರ್‌ ರಹೀಂ ಖಾನ್‌
51 ಭಾಲ್ಕಿ ಈಶ್ವರ್‌ ಖಂಡ್ರೆ
53 ರಾಯಚೂರು ಗ್ರಾಮಾಂತರ – ಎಸ್‌ಟಿ ಬಸನಗೌಡ ದದ್ದಲ್‌
59 ಮಸ್ಕಿ -ಎಸ್‌ಟಿ ಬಸನಗೌಡ ತುರ್ವಿಹಾಳ್‌
60 ಕುಷ್ಟಗಿ ಅಮರೇಗೌಡ ಪಾಟೀಲ್‌ ಬಯ್ಯಾಪುರ
61 ಕನಕಗಿರಿ – ಎಸ್‌ಸಿ ಶಿವರಾಜ್‌ ಸಂಗಪ್ಪ ತಂಗಡಗಿ
63 ಯಲಬುರ್ಗಾ ಬಸವರಾಜ ರಾಯರೆಡ್ಡಿ
64 ಕೊಪ್ಪಳ ಕೆ. ರಾಘವೇಂದ್ರ
66 ಗದಗ ಎಚ್.ಕೆ. ಪಾಟೀಲ್‌
67 ರೋಣ ಜಿ.ಎಸ್‌. ಪಾಟೀಲ್‌
72 ಹುಬ್ಬಳ್ಳಿ-ಧಾರವಾಡ-ಪೂರ್ವ-ಎಸ್‌ಸಿ ಪ್ರಸಾದ್‌ ಅಬ್ಬಯ್ಯ
76 ಹಳಿಯಾಳ ಆರ್‌.ವಿ. ದೇಶಪಾಂಡೆ
77 ಕಾರವಾರ ಸತೀಶ್‌ ಕೃಷ್ಣ ಸೈಲ್‌
79 ಭಟ್ಕಳ ಮಂಕಾಳ ಸುಬ್ಬ ವೈದ್ಯ
82 ಹಾನಗಲ್‌ ಶ್ರೀನಿವಾಸ್‌ ವಿ. ಮಾನೆ
84 ಹಾವೇರಿ -ಎಸ್‌ಸಿ ರುದ್ರಪ್ಪ ಲಮಾಣಿ
85 ಬ್ಯಾಡಗಿ ಬಸವರಾಜ್‌ ಎನ್‌. ಶಿವಣ್ಣನರ್‌
86 ಹಿರೆಕೆರೂರು ಯು.ಬಿ. ಬಣಕಾರ್‌
87 ರಾಣೆಬೆನ್ನೂರು ಪ್ರಕಾಶ್‌ ಕೆ. ಕೋಳಿವಾಡ್‌
88 ಹಡಗಲಿ-ಎಸ್‌ಸಿ ಪಿ.ಟಿ. ಪರಮೇಶ್ವರ ನಾಯ್ಕ್‌
89 ಹಗರಿಬೊಮ್ಮನಹಳ್ಳಿ- ಎಸ್‌ಸಿ ಎಲ್‌.ಬಿ.ಪಿ. ಭೀಮಾ ನಾಯ್ಕ್‌
90 ವಿಜಯನಗರ ಎಚ್‌.ಆರ್‌. ಗವಿಯಪ್ಪ
91 ಕಂಪ್ಲಿ -ಎಸ್‌ಟಿ ಜೆ.ಎನ್‌. ಗಣೇಶ್‌
93 ಬಳ್ಳಾರಿ -ಎಸ್‌ಟಿ ಬಿ. ನಾಗೇಂದ್ರ
95 ಸಂಡೂರು -ಎಸ್‌ಟಿ ಈ. ತುಕಾರಾಮ್‌
98 ಚಳ್ಳಕೆರೆ-ಎಸ್‌ಟಿ ಟಿ ರಘುಮೂರ್ತಿ
100 ಹಿರಿಯೂರು ಡಿ. ಸುಧಾಕರ್‌
101 ಹೊಸದುರ್ಗ ಗೋವಿಂದಪ್ಪ ಬಿ.ಜಿ.
108 ಮಾಯಕೊಂಡ-ಎಸ್‌ಸಿ ಕೆ.ಎಸ್‌. ಬಸವರಾಜು
112 ಭದ್ರಾವತಿ ಸಂಗಮೇಶ್ವರ ಬಿ.ಕೆ.
116 ಸೊರಬ ಎಸ್‌ ಮಧು ಬಂಗಾರಪ್ಪ
117 ಸಾಗರ ಗೋಪಾಲಕೃಷ್ಣ ಬೇಲೂರು
118 ಬೈಂದೂರು ಕೆ. ಗೋಪಾಲ ಪೂಜಾರಿ
119 ಕುಂದಾಪುರ ಎಂ. ದಿನೇಶ್‌ ಹೆಗ್ಡೆ
121 ಕಾಪು ವಿನಯ್‌ ಕುಮಾರ್‌ ಸೊರಕೆ
123 ಶೃಂಗೇರಿ ಟಿ.ಡಿ. ರಾಜೇಗೌಡ
128 ಚಿಕ್ಕನಾಯಕನಹಳ್ಳಿ ಕಿರಣ್‌ ಕುಮಾರ್‌
129 ತಿಪಟೂರು ಕೆ. ಷಡಕ್ಷರಿ
130 ತುರುವೇಕರೆ ಕಾಂತರಾಜ್‌ ಬಿ.ಎಂ.
131 ಕುಣಿಗಲ್‌ ಡಾ.ಎಚ್‌.ಡಿ. ರಂಗನಾಥ್‌
136 ಶಿರಾ ಟಿ.ಬಿ. ಜಯಚಂದ್ರ
137 ಪಾವಗಡ -ಎಸ್‌ಸಿ ಎಚ್‌.ವಿ. ವೆಂಕಟೇಶ್‌
138 ಮಧುಗಿರಿ ಕೆ.ಎನ್‌. ರಾಜಣ್ಣ
139 ಗೌರಿಬಿದನೂರು ಶಿವಶಂಕರ್‌ ರೆಡ್ಡಿ ಎನ್‌.ಎಚ್‌.
140 ಬಾಗೇಪಲ್ಲಿ ಎಸ್‌.ಎನ್‌.ಸುಬ್ಬಾ ರೆಡ್ಡಿ
143 ಚಿಂತಾಮಣಿ ಡಾ.ಎಂ.ಸಿ. ಸುಧಾಕರ್‌
144 ಶ್ರೀನಿವಾಸ್‌ಪುರ ಕೆ.ಆರ್‌. ರಮೇಶ್‌ ಕುಮಾರ್‌
146 ಕೋಲಾರ ಗೋಲ್ಡ್‌ ಫೀಲ್ಡ್‌ – ಎಸ್‌ಸಿ ರೂಪಕಲಾ ಎಂ ಶಶಿಧರ್‌
147 ಬಂಗಾರಪೇಟೆ – ಎಸ್‌ಟಿ ಎಸ್‌.ಎನ್‌. ನಾರಾಯಣಸ್ವಾಮಿ
149 ಮಾಲೂರು ಕೆ.ವೈ. ನಂಜೇಗೌಡ
152 ಬ್ಯಾಟರಾಯನಪುರ ಕೃಷ್ಣಬೈರೇಗೌಡ
154 ರಾಜರಾಜೇಶ್ವರಿನಗರ ಕುಸುಮ ಹನುಮಂತರಾಯಪ್ಪ
157 ಮಲ್ಲೇಶ್ವರಂ ಅನೂಪ್‌ ಅಯ್ಯಂಗಾರ್‌
158 ಹೆಬ್ಬಾಳ ಸುರೇಶ್‌ ಬಿ.ಎಸ್‌. (ಬೈರತಿ)
160 ಸರ್ವಜ್ಞನಗರ ಕೆ.ಜೆ. ಜಾರ್ಜ್‌
162 ಶಿವಾಜಿ ನಗರ ರಿಜ್ವಾನ್‌ ಅರ್ಷದ್‌
163 ಶಾಂತಿನಗರ ಎನ್‌.ಎ. ಹ್ಯಾರಿಸ್‌
165 ರಾಜಾಜಿನಗರ ಪುಟ್ಟಣ್ಣ
166 ಗೋವಿಂದರಾಜನಗರ ಪ್ರಿಯ ಕೃಷ್ಣ
167 ವಿಜಯನಗರ ಎಂ. ಕೃಷ್ಣಪ್ಪ
168 ಚಾಮರಾಜಪೇಟೆ ಬಿ.ಝಡ್‌.ಜಮೀರ್‌ ಅಹಮದ್‌ ಖಾನ್‌
170 ಬಸವನಗುಡಿ ಯು.ಬಿ. ವೆಂಕಟೇಶ್‌
173 ಜಯನಗರ ಸೌಮ್ಯ ರೆಡ್ಡಿ
174 ಮಹಾದೇವಪುರ-ಎಸ್‌ಟಿ ನಾಗೇಶ್‌ ಟಿ
177 ಆನೇಕಲ್‌ -ಎಸ್‌ಸಿ ಬಿ. ಶಿವಣ್ಣ
180 ದೊಡ್ಡಬಳ್ಳಾಪುರ ಟಿ. ವೆಂಕಟರಾಮಯ್ಯ
181 ನಲಮಂಗಲ-ಎಸ್‌ಸಿ ಶ್ರೀನಿವಾಸಯ್ಯ ಎನ್‌
182 ಮಾಗಡಿ ಎಚ್‌.ಸಿ. ಬಾಲಕೃಷ್ಣ
186 ಮಳವಳ್ಳಿ-ಎಸ್‌ಸಿ ಪಿ.ಎಂ. ನರೇಂದ್ರಸ್ವಾಮಿ
190 ಶ್ರೀರಂಗಪಟ್ಟಣ ಎ.ಬಿ. ರಮೇಶ್‌ ಬಂಡಿಸಿದ್ದೇಗೌಡ
191 ನಾಗಮಂಗಲ ೆನ್‌. ಚಲುವರಾಯಸ್ವಾಮಿ
197 ಹೊಳೆನರಸೀಪುರ ಶ್ರೇಯಸ್‌ ಎಂ ಪಟೇಲ್‌
199 ಸಕಲೇಶಪುರ-ಎಸ್‌ಸಿ ಮುರಳಿ ಮೋಹನ್‌
200 ಬೆಳ್ತಂಗಡಿ ರಕ್ಷಿತ್‌ ಶಿವರಾಮ್‌
201 ಮೂಡಬಿದ್ರೆ ಮಿಥುನ್‌ ಎಂ ರೈ
204 ಮಂಗಳೂರು (ಉಳ್ಳಾಲ) ಯುಟಿ ಅಬ್ದುಲ್‌ ಖಾದರ್‌ ಅಲಿ ಫರೀಸ್‌
205 ಬಂಟ್ವಾಳ ರಮಾನಾಥ ರೈ ಬಿ.
207 ಸುಳ್ಯ -ಎಸ್‌ಸಿ ಕೃಷ್ಣಪ್ಪ ಜಿ.
209 ವಿರಾಜಪೇಟೆ ಎ.ಎಸ್‌. ಪೊನ್ನಣ್ಣ
210 ಪಿರಿಯಾಪಟ್ಟಣ ಕೆ. ವೆಂಕಟೇಶ್‌
211 ಕೃಷ್ಣರಾಜನಗರ ಡಿ. ರವಿಶಂಕರ್‌
212 ಹುಣಸೂರು ಎಚ್‌.ಪಿ. ಮಂಉನಾಥ್‌
213 ಹೆಗ್ಗಡದೇವನಕೋಟೆ-ಎಸ್‌ಟಿ ಅನಿಲ್‌ ಕುಮಾರ್‌ ಸಿ
218 ನರಸಿಂಹರಾಜ ತನ್ವೀರ್‌ ಸೇಠ್‌
221 ಹನೂರು ಆರ್‌. ನರೇಂದ್ರ
223 ಚಾಮರಾಜನಗರ ಸಿ. ಪುಟ್ಟರಂಗಶೆಟ್ಟಿ
224 ಗುಂಡ್ಲುಪೇಟೆ ಕೆ.ಎಂ. ಗಣೇಶ್‌ ಪ್ರಸಾದ್‌

ಸಿದ್ದರಾಮಯ್ಯ ಸ್ಪರ್ಧಿಸಬೇಕೆಂದುಕೊಂಡಿದ್ದ ಕೋಲಾರ ಕ್ಷೇತ್ರದಿಂದ ಯಾರು ಸ್ಪರ್ಧಿಸುತ್ತಾರೆ ಎಂಬುದು ಇನ್ನೂ ಅಂತಿಮಗೊಂಡಿಲ್ಲ. ಇದರೊಂದಿಗೆ ಬಾದಾಮಿ ಎರಡೂ ಕ್ಷೇತ್ರಗಳ ಟಿಕೆಟ್ ಘೋಷಣೆ ಆಗಿಲ್ಲ. ಉಡುಪಿ, ಕಾರ್ಕಳ, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಪುತ್ತೂರು ಕ್ಷೇತ್ರದ  ಅಭ್ಯರ್ಥಿಗಳು ಯಾರೆಂದೂ ಇನ್ನೂ ಬಹಿರಂಗಗೊಳಿಸಿಲ್ಲ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *