ಕಲ್ಲಿದ್ದಲು ಗಣಿಯೊಳಗೆ ನುಗ್ಗಿದ ನೀರು; ಒಳಗೆ ಸಿಲುಕಿಕೊಂಡ 9 ಕಾರ್ಮಿಕರು

ಅಸ್ಸಾಂ: ಸೋಮವಾರ (ಜನವರಿ 6) ರಂದು ದಿಮಾ ಹಸಾವೂ ಜಿಲ್ಲೆಯ ಕಲ್ಲಿದ್ದಲು ಗಣಿಯೊಳಗೆ ಹಠಾತ್ ನೀರು ನುಗ್ಗಿದ ನಂತರ ಒಂಬತ್ತು ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ಜಿಲ್ಲೆಯ ಉಮಾಂಗೊದ ಕಲ್ಲಿದ್ದಲು ಕ್ಯಾರಿಯಲ್ಲಿ ಈ ಘಟನೆ ನಡೆದಿದೆ.

ಕ್ಯಾರಿಯ ಉದ್ಯೋಗಿಗಳ ಪ್ರಕಾರ, ಕಲ್ಲಿದ್ದಲಿನ ಗಣಿಯೊಳಗೆ ಸುಮಾರು 15 ಕಾರ್ಮಿಕರು ಇದ್ದರು. ಆದರೆ ಅಧಿಕಾರಿಗಳು ಒಟ್ಟು ಕಾರ್ಮಿಕರ ಸಂಖ್ಯೆಯನ್ನು ದೃಢಪಡಿಸಿಲ್ಲ. ಗಂಗಾ ಬಹದ್ದೂರ್ ಶ್ವೇತ್, ಹುಸೇನ್ ಅಲಿ, ಜಾಕಿರ್ ಹುಸೇನ್, ಸರ್ಪಾ ಬರ್ಮನ್, ಮುಸ್ತಫಾ ಸೀಖ್, ಖುಷಿ ಮೋಹನ್ ರಾಯ್, ಸಂಜಿತ್ ಸರ್ಕಾರ್, ಲಿಜನ್ ಮಗರ್ ಮತ್ತು ಶರತ್ ಗೋಯರಿ ಎಂಬ ಕಾರ್ಮಿಕರ ಹೆಸರುಗಳನ್ನು ಶರ್ಮಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಹಿಂದಿನ ಪೋಸ್ಟ್‌ನಲ್ಲಿ ಶರ್ಮಾ, ” ಕಾರ್ಮಿಕರು ಕಲ್ಲಿದ್ದಲು ಗಣಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ನಿಖರವಾದ ಸಂಖ್ಯೆ ಮತ್ತು ಸ್ಥಿತಿ ಇನ್ನೂ ತಿಳಿದಿಲ್ಲ. ಡಿಸಿ ಎಸ್ಪಿ ಮತ್ತು ನನ್ನ ಸಹೋದ್ಯೋಗಿ ಕೌಶಿಕ್ ರೈ ಸ್ಥಳಕ್ಕೆ ಧಾವಿಸುತ್ತಿದ್ದಾರೆ. ಎಲ್ಲರ ಸುರಕ್ಷತೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಟ್ವಿಟ್
ಮಾಡಿದ್ದಾರೆ.

ಇದನ್ನೂ ಓದಿ: ಬೀದಿ ಬದಿ ವ್ಯಾಪಾರಸ್ಥರ ಅನಿರ್ದಿಷ್ಟಾವಧಿ ಧರಣಿ

ಸೇನೆಯ ನೆರವು ಕೋರಿದ ರಾಜ್ಯ ಸರ್ಕಾರ

ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನೆಯ ಸಹಾಯ ಕೋರಲಾಗಿದೆ ಎಂದು ಶರ್ಮಾ ಹೇಳಿದರು. “ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್ಬಿಆರ್‌ಎಫ್) ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಸಹ ಘಟನೆಯ ಸ್ಥಳಕ್ಕೆ ತೆರಳಿ ಪ್ರಯತ್ನಗಳಿಗೆ ಸಹಾಯ ಮಾಡುತ್ತಿವೆ” ಎಂದು ಶರ್ಮಾ ಹೇಳಿದ್ದಾರೆ.

ಹಲವಾರು ಕಾರ್ಮಿಕರು ಸಿಕ್ಕಿಬಿದ್ದಿರುವ ಶಂಕೆ ಇದೆ ಎಂದು ದಿಮಾ ಹಸಾವೊ ಪೊಲೀಸ್ ವರಿಷ್ಠಾಧಿಕಾರಿ (ಎಸ್ಸಿ) ಮಾಯಾಂಕ್ ಝಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಕ್ಷಣಾ ಕಾರ್ಯ ಮುಂದುವರಿದಿದೆ.  ಸಿಲುಕಿಬಿದ್ದಿರುವ ಕಾರ್ಮಿಕರನ್ನು ಪತ್ತೆಹಚ್ಚಲು ಮತ್ತು ಬಿಡುಗಡೆ ಮಾಡಲು ಸ್ಥಳೀಯ ಅಧಿಕಾರಿಗಳು, ತುರ್ತು ಸ್ಪಂದಕರು ಮತ್ತು ಗಣಿಗಾರಿಕೆ ತಜ್ಞರನ್ನು ಒಳಗೊಂಡ ತಂಡಗಳೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣ ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *