ಚರ್ಚೆಗೆ ಆಹ್ವಾನಿಸಿದರು : ಪ್ರಶ್ನೆ ಕೇಳಿದರೆ ಈಗ ಬೇಡ ಅಂದರು! ಉತ್ತರ ಕೊಡಬೇಕಾದವರು ತಬ್ಬಿಬ್ಬಾದರು!!

ಭೀಮನಗೌಡ ಸುಂಕೇಶ್ವರಹಾಳ

ಅಂತಿಮ ವರ್ಷದ ಕಾನೂನು ವಿದ್ಯಾರ್ಥಿ

 

ಮೊನ್ನೆ ಸುವರ್ಣ ಚಾನೆಲ್ ನಲ್ಲಿ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಾ ಇಲ್ಲವೆ ಹೇಡಿ ? ಎಂಬ ಚರ್ಚೆಗೆ ಹೋದಾಗ…

ಚರ್ಚೆ ಆರಂಭಕ್ಕೂ ಮುಂಚೆ ಎಂದಿನ ಶೈಲಿಯಲ್ಲಿ ನಿರೂಪಕರಾದ ಅಜಿತ್ ಹನುಮಕ್ಕನವರು ತಮ್ಮ ನಿರೂಪಣೆ ಮಾಡಿ…

“ಯಾರು ಪ್ರಶ್ನೆ ಕೇಳಿ ಸಂಸದರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ ನೋಡೋಣ.. ನಾವು ನಮ್ಮವರಿಗೆ ಹೇಳಿ ಅಂತವರನ್ನು ಕರೆಸಿದ್ದೇವೆ” ಅಂತ ಹೇಳುತ್ತಾ ಕಾರ್ಯಕ್ರಮ ಶುರು ಮಾಡುತ್ತಾರೆ.

ಅವರ ಬಾ ಜ ಪ , ಮೋರ್ಚಾ , ಎಬಿವಿಪಿ ಕಾರ್ಯಕರ್ತರು ಕೇಳಿದ ಪ್ರಶ್ನೆ ಗಳಿಗೆ ( ಹೊಗಳು ಭಟ್ಟರು ತರ )  ಉತ್ತರ ನೀಡಿರುವ ಬಗ್ಗೆ, ಅದೆಲ್ಲವನ್ನೂ ಗಮನಿಸಿ….

ನಾನು ಮೈಕ್ ತೆಗೆದು ಕೊಂಡು…

ಸಾವರ್ಕರ್ ಜೈಲಿಂದ ಹೊರ ಬಂದ ನಂತರ  ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ್ದ ಒಂದೇ ಒಂದು ಹೋರಾಟವನ್ನು ತಮ್ಮ ಮಾತುಗಳಲ್ಲಿ ದಾಖಲಿಸಲಿಲ್ಲ.

ಸಾವರ್ಕರ್ ಕ್ಷಮಾಪಣೆ ಪತ್ರ ಕೊಟ್ಟು ಜೈಲಿಂದ ಹೊರ ಬಂದ ನಂತರ..  ಹಾಗೂ ನಂತರದ ದಿನಗಳಲ್ಲಿ ಯಾವುದೇ ಸ್ವಾತಂತ್ರ ಹೋರಾಟದಲ್ಲಿಯೂ ಭಾಗವಹಿಸಲಿಲ್ಲ ಅನ್ನುವುದನ್ನು,

ಇನ್ನೊಂದು ಬ್ರಿಟಿಷರಿಂದ  60 ರೂ. ಪಿಂಚಣಿ ತೆಗೆದು ಕೊಂಡಿದ್ದನ್ನು  ತಾವು ಒಪ್ಪುತ್ತಿದ್ದೀರಲ್ವ ನಿಮಗೆ ಧನ್ಯವಾದಗಳು ಅಂತ ಮಾತು ಆರಂಭಿಸಿದೆ.

ನಂತರದಲ್ಲಿ…

1937 ರಲ್ಲಿ  ದ್ವಿರಾಷ್ಟ್ರ ಸಿದ್ಧಾಂತವನ್ನು ಅಹಮದಾಬಾದ್ ನಲ್ಲಿ ನಡೆದ 19 ನೆಯ ಹಿಂದೂ ಮಹಾಸಭಾ ಮಹಾಧಿವೇಶನ ದಲ್ಲಿ ಸಾವರ್ಕರ್ ಮಂಡಿಸುತ್ತಾರೆ..

ನಂತರ 3 ವರ್ಷಗಳ ನಂತರ ಮುಸ್ಲಿಂ ಲೀಗ್ ಕೂಡ ಇದನ್ನು ಮಂಡಿಸುತ್ತಾರೆ.

ಇದು ಧರ್ಮ ಆಧಾರಿತ ವಾಗಿ ದೇಶವನ್ನು ಒಡೆಯಲು ಸಾವರ್ಕರ್ ರೂಪಿಸಿದ ಸಂಚಲ್ಲವೆ ? ಎಂಬುದು ನನ್ನ ಪ್ರಶ್ನೆಯಾಗಿತ್ತು..

ಅದಕ್ಕೆ ಸಂಸದರು ,

ಮೊದಲು ಈ ಪಿಂಚಣಿಯ ಬಗ್ಗೆ ಹೇಳೋಣ ಎನ್ನುತ್ತಾ   ಪ್ರತೀ ತಿಂಗಳು 60 ರೂ. ಹಣ ಪಡೆದದ್ದು ನಿಜ ಆದರೆ ಅದು ಪಿಂಚಣಿ ಅಲ್ಲ ಬದಲಾಗಿ Sustenance,  ರತ್ನಗಿರಿಯ ಬ್ರಿಟಿಷ್ ಬಂಗಲೆಯಲ್ಲಿ ಗೃಹ ಬಂಧನದಲ್ಲಿ ಇಟ್ಟಾಗ ಅವರಿಗೆ ಊಟಕ್ಕೆ, ತಿಂಡಿಗೆ , ಪುಸ್ತಕಕ್ಕೆ ಹಣ ಬೇಕಲ್ಲವೇ ಎನ್ನುತ್ತಾ  ಜೊತೆಜೊತೆಗೆ ಮಹಾತ್ಮ ಗಾಂಧೀಜಿ ಅವರನ್ನು ಎಳೆತಂದು ಮಾತನಾಡುತ್ತಾ  ಒಟ್ಟಿನಲ್ಲಿ ಪ್ರಶ್ನೆಗೆ ಸಮರ್ಥನೆ ಅಂತೂ ಮಾಡಿಕೊಳ್ಳುತ್ತಾರೆ.

ಹಾಗೆ..

ದ್ವಿ ರಾಷ್ಟ್ರ ಸಿದ್ದಾಂತ ದ ಬಗ್ಗೆ ಎನೇನೆನೋ ಹೇಳುತ್ತಾ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ರನ್ನು ಬಳಸಿ ಕೊಳ್ಳುವುದು ಹಾಗೂ ನೆಹರು ಅವರನ್ನು ನಿಂದನೆ ಮಾಡುತ್ತಾ ಮೇಲಿನ  ಪ್ರಶ್ನೆಗಳಿಗೂ ಸಮರ್ಥನೆ ಮಾಡಿಕೊಳ್ಳುತ್ತಾರೆ.

ನಂತರದಲ್ಲಿ…

ಸಾವರ್ಕರ್ ಮಹಾತ್ಮ ಗಾಂಧಿ ಹತ್ಯಾ ವಿಚಾರಣೆಯಲ್ಲಿ ಆರೋಪಿಯಾಗಿದ್ದರು.

ಗೂಡ್ಸೆ ಜೊತೆಗೆ ಸಾವರ್ಕರ್ ರನ್ನು ಅರೆಸ್ಟ್ ಮಾಡಿ ಕಟಕಟೆಯಲ್ಲಿ ನಿಲ್ಲಿಸುತ್ತಾರೆ…. ಇದರ ಬಗ್ಗೆ ಏನು ಹೇಳುತ್ತೀರಿ ? ಅಂದಾಗ…

ನಾಥೂರಾಮ್ ಗೂಡ್ಸೆ  ಮಹಾತ್ಮ ಗಾಂಧೀಜಿ ಅವರನ್ನು ಕೊಲೆ ಮಾಡಿದ್ದು ಅಪರಾಧ ನಾವು ಖಂಡಿಸುತ್ತೇವೆ… ಯಾವ ಮನುಷ್ಯರು ಅಂತಹ ತಪ್ಪು ಮಾಡಬಾರದು ಅಂತೆಲ್ಲ ಸಂಸದ ಪ್ರತಾಪ್ ಸಿಂಹ ಹೇಳುತ್ತಾರೆ..

ಅದಕ್ಕೆ ನಾನು ತುಂಬಾ ಒಳ್ಳೆಯದು…

ಹಾಗಾದರೆ  ಸಾವರ್ಕರ್ ಅಪರಾಧಿ ಅಲ್ಲ, ಗೂಡ್ಸೇ ಗೂ ಸಾವರ್ಕರ್ ಗೂ ಸಂಬಂಧವಿಲ್ಲ ವಾ? ಅಂದಾಗ…

ಹೌದು ಇದನ್ನೇ ನಾವು ತಿಳಿಯ ಬೇಕಾದದ್ದು ಸಾವರ್ಕರ್ ಅವರನ್ನು ಅಂದಿನ ಕೋರ್ಟ್ ವಿಚಾರಣೆ ಮಾಡುತ್ತೆ ನಿಜ ಆದರೆ ಅದೇ ಕೋರ್ಟ್  ತನಿಖೆಯ ನಂತರ  ನಿರಪರಾಧಿ ಅಂತ ಹೇಳುತ್ತದೆ.

ಅದಕ್ಕೆ ನಾನು ಮುಂದುವರೆದು…

ನೀವೆಲ್ಲ ಸಾವರ್ಕರ್ ಅಭಿಮಾನಿಗಳು ಅಲ್ವಾ ಅಂದಾಗ …

ಹೌದು ಎನ್ನುತ್ತಾ ತಮ್ಮ ಹೊಗಳಿಕೆಯ ಮಾತುಗಳಿಂದ ಸಾವರ್ಕರ್ ರನ್ನು ಹೊಗಳುತ್ತಾ ನಾವು ಅವರ ಅಭಿಮಾನಿಗಳು ಎನ್ನುತ್ತಾರೆ.

ಅದಕ್ಕೆ ನಾನು ತುಂಬಾ ಒಳ್ಳೆಯದು… ಎನ್ನುತ್ತಾ ಮಾತು ಮುಂದುವರೆಸಿ…

ಆದರೆ ಅಂದಿನ ದಿನಗಳಲ್ಲಿ ತಾವೇ ಹೇಳಿದಂತೆ ಗಾಂಧಿ ಹತ್ಯಯ ವಿಚಾರಕ್ಕೆ ಸಾವರ್ಕರ್ ಮತ್ತು ಗೂಡ್ಸೆಗೂ ಸಂಬಂಧವಿಲ್ಲ ಎಂದಾಗ…

ನೀವುಗಳು ಸಾವರ್ಕರ್  ಅಭಿಮಾನಿಗಳು ಆಗಿ ನಿಮ್ಮ ಪಕ್ಷದ ಎಂಪಿ , MLA ಗಳು ಹಾಗೂ ಆರೆಸಸ್ ಕಾರ್ಯಕರ್ತರು ಗೂಡ್ಸೆಯನ್ನು ಯಾಕೆ ಹೊಗಳುತ್ತಿರಿ ಹಾಗೆ ಪೂಜೆ ಮಾಡುತ್ತಿದ್ದೀರಿ ಅಂತ ಕೇಳಿದಾಗ…

ಸಂಸದರು ಗೊಂದಲವಾಗಿ.. ಒಂದು ಕ್ಷಣ ತಬ್ಬಿಬ್ಬಾಗಿ….

ನಿರೂಪಕರನ್ನು ನೋಡಿ…

ಈಗ ಈ ಪ್ರಶ್ನೆ ಬೇಡ

ಮುಂದಿನ ಪ್ರಶ್ನೆಗೆ ಹೋಗೋಣ ಅಂತ ಅಂದು ಬಿಡೋದಾ…

ಪ್ರಸಾರ ಮಾಡಿರೋ ವಿಡಿಯೋ ನೋಡಿದ್ರೆ..

ಕೇಳಿರೋ ಪ್ರಶ್ನೆ ಹಾಗೂ ಆಗಿರೋ ಚರ್ಚೆ ಎಲ್ಲಾ ಎಡಿಟ್ ಮಾಡಿ ಅವರಿಗೆ ಬೇಕಿರೋದು ಮಾತ್ರ ತಗೊಂಡಿದ್ದಾರೆ.

ಇವೆಲ್ಲದರ ಮೇಲೆ ಗೊತ್ತಾಗಲ್ವಾ ಸಾವರ್ಕರ್ ಆಗಲಿ ಅಥವಾ ಅವರ ವಂಶಸ್ಥರಾಗಲಿ ವೀರರಾ ? ಅಥವಾ ಹೇಡಿಗಳಾ… ಎಂಬುದು.

Donate Janashakthi Media

Leave a Reply

Your email address will not be published. Required fields are marked *