ದೇಶದ ಪ್ರಮುಖ ವಿರೋಧ ಪಕ್ಷದ ನಾಯಕರಾದ ಮಾಯಾವತಿ, ಮಮತಾ ಬ್ಯಾನರ್ಜಿ, ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್ ಹಾಗೂ ರಾಹುಲ್ ಗಾಂಧಿ ಅವರು ಹಿಂದೂ ಧರ್ಮಗ ಬಗ್ಗೆ ತಪ್ಪಾಗಿ ಮಾತನಾಡಿದ್ದಾರೆ ಎಂದು ಬಿಂಬಿಸುವ ಹಲವಾರು ಹಿಂದಿ ಪತ್ರಿಕೆಗಳ ಕಟ್ಟಿಂಗ್ಗಳು ಇರುವ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಚಿತ್ರದಲ್ಲಿ ಇರುವ ಪೇಪರ್ ಕಟ್ಟಿಂಗ್ಗಳಲ್ಲಿ ಹಲವು ವಿಚಾರಗಳ ಬಗ್ಗೆ ನಾಯಕರು ಮಾತನಾಡಿದ್ದಾರೆನ್ನುವ ಹೆಡ್ಲೈನ್ಗಳು ಹಿಂದಿಯಲ್ಲಿ ಇದ್ದು, ಅದನ್ನು ಕನ್ನಡಕ್ಕೆ ಅನುವಾದ ಮಾಡಿ, ಅವರೆಲ್ಲರೂ ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂಬಂತೆ ಬಿಂಬಿಸಲಾಗುತ್ತಿದೆ. ಫ್ಯಾಕ್ಟ್ಚೆಕ್
ಮುಖ್ಯವಾಗಿ ವಾಟ್ಸಪ್ ಮತ್ತು ಫೇಸ್ಬುಕ್ನಲ್ಲಿ ಈ ಚಿತ್ರವನ್ನು ಹಂಚಲಾಗುತ್ತಿದೆ. ವೈರಲ್ ಮಾಡುತ್ತಿರುವವರಲ್ಲಿ ಬಿಜೆಪಿ ಅಭಿಮಾನಿಗಳು ಮತ್ತು ಕಾರ್ಯಕರ್ತರೆ ಮುಂಚೂಣಿಯಲ್ಲಿದ್ದಾರೆ. Dharmendra Kumar P ಎಂಬ ಬಿಜೆಪಿ ಬೆಂಬಲಿಗ ಫೇಸ್ಬುಕ್ ಖಾತೆಯೊಂದು ಸಮಾಲೋಚನೆ ಎಂಬ ಫೇಸ್ಬುಕ್ ಗ್ರೂಪ್ನಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಫ್ಯಾಕ್ಟ್ಚೆಕ್ | ಬಿಜೆಪಿ ಬೆಂಬಲಿಗರು ಹಂಚುತ್ತಿರುವ ಈ ಘಟನೆ ‘ಲವ್ ಜಿಹಾದ್’ ಅಲ್ಲ, ಯುಪಿಯದ್ದೂ ಅಲ್ಲ!
ವೈರಲ್ ಚಿತ್ರದ ಜೊತೆಗೆ ಬರಹ ಕೂಡಾ ಇದ್ದು ಅದು ಕೆಳಗಿನಂತಿದೆ:
★ ಹಳೇ ಪೇಪರ್ ಕಟಿಂಗ್ ಒಂದು ಸಿಕ್ಕಿತು… ಅದರಲ್ಲಿನ ಹೆಡ್ ಲೈನ್ ಓದಿ ನೋಡಿ ಶಾಕ್ ಆಗಬೇಡಿ ಹಿಂದೂಗಳೇ… ಇದು ವಾಸ್ತವ ಸತ್ಯ!!!!!
◆ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಬಿಡುವುದಿಲ್ಲ: ಮಾಯಾವತಿ
◆ ಮುಸ್ಲಿಮರು ಮತ್ತು ದಲಿತರು ಒಂದಾದರೆ ಹಿಂದೂಗಳ ಕೈಯಲ್ಲಿ ಚಪ್ಪಲಿ ಕ್ಲೀನ ಮಾಡಿಸುತ್ತೇವೆ: ಮಮತಾ ಬ್ಯಾನರ್ಜಿ
◆ ನಾನು ಮುಸ್ಲಿಮರಿಗಾಗಿ ಸಾಯುತ್ತೇನೆ ಮತ್ತು ಮುಸ್ಲಿಮರಿಗಾಗಿಯೇ ಬದುಕುತ್ತೇನೆ: ಮುಲಾಯಂ ಸಿಂಗ್ ಯಾದವ್
◆ ಕೇವಲ ಮುಸ್ಲಿಂ ಹುಡುಗಿಯರು ಮಾತ್ರ ನಮ್ಮ ಮಗಳು: ಅಖಿಲೇಶ್ ಯಾದವ್
◆ ನಾನು ಯಾವುದೇ ತರಹದ ಹಿಂದುತ್ವದಲ್ಲಿ ವಿಶ್ವಾಸ ಇಡುವುದಿಲ್ಲ: ರಾಹುಲ್ ಗಾಂಧಿ
ಫೇಸ್ಬುಕ್ನಲ್ಲಿ ಇದನ್ನು ಹಲವಾರು ಜನರು ಹಂಚುತ್ತಿದ್ದು ಅವುಗಳನ್ನು ಇಲ್ಲಿ ನೀವು ನೋಡಬಹುದಾಗಿದೆ. ವಾಟ್ಸಪ್ನಲ್ಲಿ ಕೂಡಾ ಇದನ್ನು ಬಿಜೆಪಿ ಬೆಂಬಲಿಗರು ಹಂಚುದ್ದಾರೆ. ಈ ಬಗ್ಗೆ ಫ್ಯಾಕ್ಟ್ಚೆಕ್ ಮಾಡುವಂತೆ ಜನಶಕ್ತಿ ಮೀಡಿಯಾದ ಫ್ಯಾಕ್ಟ್ಚೆಕ್ ವಾಟ್ಸಪ್ ಗ್ರೂಪ್ಗೆ ವಿನಂತಿಗಳು ಬಂದಿವೆ. ಜನಶಕ್ತಿ ಫ್ಯಾಕ್ಟ್ಚೆಕ್ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ಫ್ಯಾಕ್ಟ್ಚೆಕ್ | ಈ ವೈರಲ್ ವಿಡಿಯೊದಲ್ಲಿ ತೆವಳುತ್ತಿರುವವರು ಮುಸ್ಲಿಂ ಅಲ್ಲ, ಅದು ಯುಪಿಯದ್ದೂ ಅಲ್ಲ!
ಫ್ಯಾಕ್ಟ್ಚೆಕ್:
ವೈರಲ್ ಚಿತ್ರ ಮತ್ತು ಬರಹಗಳಲ್ಲಿ ಒಟ್ಟು 5 ರಾಜಕಾರಣಿಗಳ ಹೇಳಿಕೆಯ ಬಗ್ಗೆ ಹೇಳಲಾಗಿದೆ. ಅವುಗಳ ಬಗ್ಗೆ ನಾವು ಒಂದೊಂದಾಗಿ ನೋಡಬೇಕಾಗಿದೆ.
ಮೊದಲನೇ ಹೇಳಿಕೆ ◆ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಬಿಡುವುದಿಲ್ಲ: ಮಾಯಾವತಿ. ಈ ಹೇಳಿಕೆಯನ್ನು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ಹೇಳಿದ್ದಾರೆ ಎಂದು ವೈರಲ್ ಪೋಸ್ಟ್ ಪ್ರತಿಪಾದಿಸುತ್ತದೆ. ಮಾಯಾವತಿ ಅವರು ಈ ಹೇಳಿಕೆಯನ್ನು 2015 ರ ಅಕ್ಟೋಬರ್ ವೇಳೆಗೆ ಹೇಳಿದ್ದರು. ಅದನ್ನು ಜಾಗರಣ್ ಎಂಬ ಹಿಂದಿ ಪತ್ರಿಕೆ ವರದಿ ಮಾಡಿತ್ತು.
ಅವರ ಈ ಹೇಳಿಕೆ ನೀಡಿದ್ದರಾದರೂ, ಅದು ಹಿಂದೂ ಧರ್ಮ ವಿರೋಧಿ ಹೇಳಿಕೆಯಲ್ಲ. ದೇಶವೂ ಜಾತ್ಯಾತೀತ ರಾಷ್ಟ್ರವಾಗಿದೆ. ಭಾರತವನ್ನು ಒಂದು ಧರ್ಮದ ಆಧಾರದಲ್ಲಿ ಕಟ್ಟುತ್ತೇವೆ ಎನ್ನುವುದು ಮಾತ್ರ ಸಂವಿಧಾನ ವಿರೋಧಿ ಹೇಳಿಯಾಗಿದೆ. ಈ ದೇಶವನ್ನು ಧರ್ಮದ ಆಧಾರದಲ್ಲಿ ಕಟ್ಟಬೇಕು ಎಂದು ಆರೆಸ್ಸೆಸ್ ಮತ್ತು ಬಿಜೆಪಿಯ ಸಂಘಪರಿವಾರಗಳು ಬಯಸುತ್ತದೆ. ಹಾಗಾಗಿ ಮಾಯಾವತಿ ಅವರ ಹೇಳಿಕೆ ಆರೆಸ್ಸೆಸ್ ಮತ್ತು ಬಿಜೆಪಿಯ ಸಂಘಪರಿವಾರದ ವಿರೋಧಿಯಾಗಿದೆಯೆ ಹೊರತು, ಒಂದು ಧರ್ಮ ವಿರೋಧಿ ಹೇಳಿಕೆ ಅಲ್ಲ. ಹಾಗಾಗಿ ಮಾಯಾವತಿ ಅವರ ಸಂವಿಧಾನ ಪರ ಹೇಳಿಕೆಯನ್ನು ಹಿಂದೂ ವಿರೋಧಿ ಹೇಳಿಕೆ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ.
ಎರಡನೇ ಹೇಳಿಕೆ ◆ ಮುಸ್ಲಿಮರು ಮತ್ತು ದಲಿತರು ಒಂದಾದರೆ ಹಿಂದೂಗಳ ಕೈಯಲ್ಲಿ ಚಪ್ಪಲಿ ಕ್ಲೀನ ಮಾಡಿಸುತ್ತೇವೆ: ಮಮತಾ ಬ್ಯಾನರ್ಜಿ. ಈ ರೀತಿಯಾಗಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ ಎಂದು ನಾವು ಇಂಟರ್ನೆಟ್ನಲ್ಲಿ ಹುಡುಕಾಡಿದಾಗ, ಈ ರೀತಿಯ ವರದಿ ನಮಗೆ ಎಲ್ಲೂ ಪತ್ತೆಯಾಗಿಲ್ಲ. ನಾವು ಇಂಗ್ಲಿಷ್, ಬಂಗಾಳಿ ಹಾಗೂ ಹಿಂದಿ ಪತ್ರಿಕೆಗಳ ವರದಿಯನ್ನು ಇಂಟರ್ನೆಟ್ನಲ್ಲಿ ಹುಡುಕಿದ್ದೇವೆ. ಆದರೆ ಈ ರೀತಿಯಾಗಿ ಮಮತಾ ಬ್ಯಾನರ್ಜಿ ಹೇಳಿರುವ ಬಗ್ಗೆ ನಮಗೆ ಎಲ್ಲೂ ಸುಳಿವು ಸಿಕ್ಕಿಲ್ಲ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ಅವರು ಈ ಹೇಳಿಕೆಯನ್ನು ನೀಡಿದ್ದರೆ, ಪ್ರಮುಖ ಪತ್ರಿಕೆಗಳು ಅದನ್ನು ಖಂಡಿತಾ ವರದಿ ಮಾಡಿರುತ್ತಿದ್ದವು. ಆದರೆ ಅಂತಹ ಯಾವುದೆ ವರದಿಗಳು, ಹೇಳಿಕೆಗಳು ನಮಗೆ ಲಭ್ಯವಾಗಿಲ್ಲ. ಹೀಗಾಗಿ ಮಮತಾ ಬ್ಯಾನರ್ಜಿ ಅವರು ಈ ಹೇಳಿಕೆ ನೀಡಿದ್ದಾರೆ ಎಂಬುವುದು ಸುಳ್ಳಾಗಿದೆ. ಇದನ್ನೂ ಓದಿ: ಫ್ಯಾಕ್ಟ್ಚೆಕ್ | ಆರೆಸ್ಸೆಸ್ ಅನ್ನು ನಿಷೇಧಿಸಿತೆ ಕೆನಡಾ ಸರ್ಕಾರ?
ಮೂರನೇ ಹೇಳಿಕೆ ◆ ನಾನು ಮುಸ್ಲಿಮರಿಗಾಗಿ ಸಾಯುತ್ತೇನೆ ಮತ್ತು ಮುಸ್ಲಿಮರಿಗಾಗಿಯೇ ಬದುಕುತ್ತೇನೆ: ಮುಲಾಯಂ ಸಿಂಗ್ ಯಾದವ್. ಇದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರು 2017ರ ಜನವರಿ 16ರಂದು ನೀಡಿದ ಹೇಳಿಕೆಯಾಗಿದೆ. ಆದರೆ ಅವರ ಹೇಳಿಕೆ ಹಿಂದೂಗಳ ವಿರುದ್ಧ ನೀಡಿದ ಹೇಳಿಕೆಯಾಗಿರಲಿಲ್ಲ. ಬದಲಾಗಿ ತಮ್ಮ ಮಗ ಅಖಿಲೇಶ್ ಯಾದವ್ ಅವರ ವಿರುದ್ಧ ನೀಡಿದ್ದ ಹೇಳಿಕೆಯಾಗಿದೆ. ಆ ವೇಳೆ ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದರು.
2016ರ ಅಕ್ಟೋಬರ್ ವೇಳೆಗೆ ಉತ್ತರಪ್ರದೇಶದ ಆಡಳಿತರೂಢ ಸಮಾಜವಾದಿ ಪಕ್ಷದ ಹಿಡಿತಕ್ಕಾಗಿ ಮುಲಾಯಂ ಸಿಂಗ್ ಅವರ ಕುಟುಂಬದ ಒಳಗೆ ಕೌಟುಂಬಿಕ ಕಲಹ ಉಂಟಾಗಿತ್ತು. ಈ ಕಲಹ ತಾರಕ್ಕೇರಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ತಮ್ಮ ಚಿಕ್ಕಪ್ಪ ಶಿವಪಾಲ್ ಯಾದವ್ ಸೇರಿದಂತೆ ಹಿರಿಯ ನಾಯಕ ಅಮರ್ ಸಿಂಗ್ ಅವರ ಬೆಂಬಲಿಗರನ್ನು ಸಂಪುಟದಿಂದ ವಜಾಗೊಳಿಸಿದ್ದರು. ಇದಕ್ಕೆ ಪ್ರತಿಯಾಗಿ ಕೆಲವೇ ಗಂಟೆಗಳ ಒಳಗೆ ಬಿಜೆಪಿಯೊಂದಿಗೆ ಕೈಜೋಡಿಸಿರುವ ಆರೋಪದ ಮೇಲೆ ಪಕ್ಷದ ವರಿಷ್ಠರಾಗಿದ್ದ ಮುಲಾಯಂ ಸಿಂಗ್ ಯಾದವ್ ತಮ್ಮ ಸಹೋದರ ರಾಮಗೋಪಾಲ್ ಯಾದವ್ ಅವರನ್ನು ಪಕ್ಷದಿಂದ ತೆಗೆದುಹಾಕಿದ್ದರು.
ಕುಟುಂಬ ಕಲಹವು 2017ರ ವೇಳೆಗೆ ತೀವ್ರ ಉಲ್ಬಣಗೊಂಡಿತ್ತು. ಈ ವೇಳೆ ತಮ್ಮ ಮಗನ ಮೇಲೆಯೆ ಹರಿಹಾಯ್ದಿದ್ದ ಮುಲಾಯಂ ಸಿಂಗ್, ತತಮ್ಮ ಮಗ ಅಖಿಲೇಶ್ ಅವರು ರಾಮಗೋಪಾಲ್ ಅವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಕೂಡಾ ಆರೋಪಿಸಿದ್ದರು.
ಅಖಿಲೇಶ್ ಅವರು ಮುಸ್ಲಿಮರ ಬಗ್ಗೆ ನಕಾರಾತ್ಮಕ ಧೋರಣೆ ಹೊಂದಿದ್ದಾರೆ ಹಾಗೂ ಮುಸ್ಲಿಮರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ನಡೆಯುತ್ತಿದ್ದಾರೆ ಎಂದು ಮುಲಾಯಂ ಯಾದವ್ ಸ್ವತಃ ಮಗನ ಮೇಲೆಯೆ ಆರೋಪ ಹೊರಿಸಿದ್ದರು. ತಮ್ಮ ಮಾತಿಗೆ ಕಿವಿಗೊಡದಿದ್ದರೆ ಮಗನ ವಿರುದ್ಧವೇ ಸ್ಪರ್ಧಿಸುವುದಾಗಿ ಹೇಳಿದ್ದರು. ಅಂದು ಮಾತನಾಡಿದ್ದ ಅವರು “ನಾನು ಮುಸ್ಲಿಮರಿಗಾಗಿ ಬದುಕುತ್ತೇನೆ ಮತ್ತು ಅವರಿಗಾಗಿ ಸಾಯುತ್ತೇನೆ. ಮುಸ್ಲಿಮರ ಹಿತಾಸಕ್ತಿಗಳಿಗೆ ಬಂದರೆ, ನಾನು ಅವನ (ಅಖಿಲೇಶ್) ವಿರುದ್ಧವೂ ಹೋರಾಡುತ್ತೇನೆ” ಎಂದು ಅವರು ಹೇಳಿದ್ದರು. ಹೀಗಾಗಿ ಮುಲಾಯಂ ಸಿಂಗ್ ಅವರ ಈ ಹೇಳಿಕೆ ಹಿಂದೂ ವಿರೋಧಿ ಎಂಬಂತೆ ತಪ್ಪಾಗಿ ಬಿಂಬಿಸಲಾಗಿದೆ. ಇದನ್ನೂ ಓದಿ:ಫ್ಯಾಕ್ಟ್ಚೆಕ್: ಜಿ20 ಕಾರ್ಯಕ್ರಮದ ವೇಳೆ ‘ರಘುಪತಿ ರಾಘವ ರಾಜಾ ರಾಮ್’ ಭಜನೆಯಿಂದ ‘ಅಲ್ಲಾಹ್’ ಪದ ಮೋದಿ ತೆಗೆದುಹಾಕಿದರೆ?
ನಾಲ್ಕೆನೇ ಹೇಳಿಕೆ, ◆ ಕೇವಲ ಮುಸ್ಲಿಂ ಹುಡುಗಿಯರು ಮಾತ್ರ ನಮ್ಮ ಮಗಳು: ಅಖಿಲೇಶ್ ಯಾದವ್. ಈ ಹೇಳಿಕೆಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಅವರಾಗಲಿ, ಅವರ ಸರ್ಕಾರವಾಗಲಿ ಎಲ್ಲೂ ಹೇಳಿಲ್ಲ. ಆದರೆ 2012ರ ಡಿಸೆಂಬರ್ ವೇಳೆಗೆ ಅಖಿಲೇಶ್ ಅವರ ಸರ್ಕಾರವು, “ಹಮಾರಿ ಬೇಟಿ ಉಸ್ಕಾ ಕಲ್” ಎಂಬ ಯೋಜನೆಯೊಂದನ್ನು ಜಾರಿಗೆ ತಂದಿತ್ತು. ಈ ಯೋಜಯು, ಪ್ರೌಢಶಾಲೆಯಲ್ಲಿ ಉತ್ತೀರ್ಣರಾದ ಅಲ್ಪಸಂಖ್ಯಾತ ಸಮುದಾಯದ ಬಾಲಕಿಯರಿಗೆ ತಮ್ಮ ವ್ಯಾಸಂಗವನ್ನು ಮುಂದುವರಿಸಲು ಅಥವಾ ಅವರ ಮದುವೆಗಾಗಿ ಸರ್ಕಾರವು ಒಂದು ಬಾರಿ 30 ಸಾವಿರ ರೂಪಾಯಿಗಳನ್ನು ನೀಡುವುದಾಗಿ ಹೇಳಿತ್ತು.
ಈ ಯೋಜನೆಯ ಬಗ್ಗೆ ವಿಧಾನಸಭೆಯಯಲ್ಲಿ ಪ್ರಶ್ನೆ ಕೇಳಿದ್ದ ಬಿಜೆಪಿ ಶಾಸಕ ರಘುನಂದನ್ ಬದೌರಿಯಾ ಅವರಿಗೆ ಲಿಖಿತ ಉತ್ತರ ನೀಡಿದ್ದ ಸಮಾಜ ಕಲ್ಯಾಣ ಸಚಿವ ಅವಧೇಶ್ ಪ್ರಸಾದ್ ಅವರು, “ಅಲ್ಪಸಂಖ್ಯಾತ ಹೆಣ್ಣು ಮಕ್ಕಳಿಗೆ ನೀಡುಂತೆ ಇತರ ವರ್ಗದ ಹೆಣ್ಣು ಮಕ್ಕಳಿಗೆ ಈ ರೀತಿಯ ಯೋಜನೆ ಇಲ್ಲ. ಪರಿಶಿಷ್ಟ ಜಾತಿ, ಪಂಗಡ, ಸಾಮಾನ್ಯ ವರ್ಗ ಹಾಗೂ ತೀರಾ ಹಿಂದುಳಿದ ವರ್ಗದ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಮಾಡುವ ಯೋಜನೆ ಈಗಾಗಲೆ ಜಾರಿಯಲ್ಲಿದೆ. ಪರಿಶಿಷ್ಟ ಜಾತಿ, ಪಂಗಡ ಹಾಗೂ ಸಾಮಾನ್ಯ ವರ್ಗದ ಬಡ ಹೆಣ್ಣುಮಕ್ಕಳ ಮದುವೆಗೆ ಹತ್ತು ಸಾವಿರ ರೂ.ಗಳನ್ನು ನೀಡಲಾಗುತ್ತದೆ” ಎಂದಿದ್ದರು.
ಆದರೆ ವರದಿಯನ್ನು, “ನ್ಯೂಸ್ 18” ಮತ್ತು “ಒನ್ ಇಂಡಿಯಾ ಹಿಂದಿ” ವೆಬ್ಸೈಟ್ಗಳು, “ಕೇವಲ ಮುಸ್ಲಿಂ ಹುಡುಗಿಯರು ಮಾತ್ರ ನಮ್ಮ ಮಗಳು” ಎಂಬ ಹೆಡ್ಲೈನ್ ನೀಡಿ ತಪ್ಪಾಗಿ ಅರ್ಥೈಸುವಂತೆ ವರದಿ ಮಾಡಿವೆ. ಅದರನ್ನೆ ಈಗ ಫೇಸ್ಬುಕ್ ಮತ್ತು ವಾಟ್ಸಪ್ಗಳಲ್ಲಿ ವೈರಲ್ ಮಾಡುತ್ತಿದ್ದಾರೆ.
ವಾಸ್ತವದಲ್ಲಿ ಹಮಾರಿ ಬೇಟಿ ಉಸ್ಕಾ ಕಲ್ ಎಂಬ ಯೋಜನೆ ವಿರುದ್ಧ ಅಲಹಾಬಾದ್ ಹೈಕೋರ್ಟ್ನಲ್ಲಿ ಮೊಕದ್ದಮೆ ಕೂಡಾ ಹೂಡಲಾಗಿತ್ತು. ಈ ವೇಳೆ ಸರ್ಕಾರ, “ಸಂವಿಧಾನದಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಇರುವ ಅವಕಾಶದಂತೆ ಸರಕಾರ ಕೆಲಸ ಮಾಡಿದೆ” ಎಂದು ಹೇಳಿತ್ತು.
ಆದ್ದರಿಂದ ಅಖಿಲೇಶ್ ಯಾದವ್ ಅವರು ಅಥವಾ ಅವರ ಸರ್ಕಾರ, “ಮುಸ್ಲಿಂ ಹುಡುಗಿಯರು ಮಾತ್ರ ನಮ್ಮ ಮಗಳು” ಎಂದು ಎಲ್ಲಿಯೂ ಹೇಳಿಲ್ಲ. ಅಖಿಲೇಶ್ ಯಾದವ್ ಅವರು ಈ ಹೇಳಿಕೆ ನೀಡಿದ್ದಾರೆ ಎಂಬುವುದು ಸುಳ್ಳಾಗಿದ್ದು, ಅದನ್ನು ತಪ್ಪಾಗಿ ವರದಿ ಮಾಡಲಾಗಿದೆ. ಅಲ್ಲದೆ, ಈ ವಿಚಾರದ ಬಗ್ಗೆ ಸ್ವತಃ ಅಖಿಲೇಶ್ ಅವರೇ ಸ್ಪಷ್ಟನೆ ನೀಡಿದ್ದು, ತಮ್ಮ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಈ ವಿಡಿಯೊವನ್ನು ಕೆಳಗೆ ನೋಡಬಹುದಾಗಿದೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್ | ‘ಯುದ್ಧ ನಡೆದರೆ ಭಾರತದ ಮುಸ್ಲಿಮರು ಪಾಕ್ ಪರ’ ಎಂದು ಅಸಾದುದ್ದೀನ್ ಒವೈಸಿ ಹೇಳಿಲ್ಲ
ಐದನೇ ಹೇಳಿಕೆ, ◆ ನಾನು ಯಾವುದೇ ತರಹದ ಹಿಂದುತ್ವದಲ್ಲಿ ವಿಶ್ವಾಸ ಇಡುವುದಿಲ್ಲ: ರಾಹುಲ್ ಗಾಂಧಿ
ಆರ್ ಎನ್ ಎಸ್. ಈ ಹೇಳಿಕೆಯನ್ನು ರಾಹುಲ್ ಗಾಂಧಿ ಅವರು 2018ರ ಆಗಸ್ಟ್ ವೇಳೆಗೆ ಹೇಳಿದ್ದರು. ಆದರೆ ಅವರು ಅದನ್ನು ಹಿಂದೂ ಧರ್ಮಿಯರ ವಿರುದ್ಧ ನೀಡಿದ ಹೇಳಿಕೆಯಾಗಿರಲ್ಲ. ಅವರು ಈ ಹೇಳಿಕೆಯನ್ನು ನೀಡಿದ್ದು ಆರೆಸ್ಸೆಸ್ ಮತ್ತು ಬಿಜೆಪಿ ಪ್ರತಿಪಾದಿಸುವ ಉಗ್ರಗಾಮಿತನದ ವಿರುದ್ಧವಾಗಿತ್ತು.
2018 ರ ಆಗಸ್ಟ್ ವೇಳೆಗೆ ಹೈದರಾಬಾದ್ನಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು, “ಮೃದು ಹಿಂದುತ್ವವಾಗಲಿ, ಕಟ್ಟರ್ ಹಿಂದುತ್ವವಾಗಲಿ ನನಗೆ ಯಾವುದೇ ರೀತಿಯ ಹಿಂದುತ್ವದಲ್ಲಿ ನಂಬಿಕೆ ಇಲ್ಲ. ನಾವು ಹಿಂದೂಗಳು, ಅಷ್ಟೇ.. ಧರ್ಮದ ರಾಜಕಾರಣ ಮಾಡುವವರು ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಧರ್ಮದ ರಾಜಕೀಯದ ಬಗ್ಗೆ ಮಾತನಾಡಬಾರದು. ಅದನ್ನು ಮಾಡಬೇಕಾಗಿಲ್ಲ. ಹಿಂದೂ ಆಗಿರುವುದು ಮತ್ತು ಧರ್ಮದ ರಾಜಕೀಯ ಮಾಡುವುದು ಎರಡು ವಿಭಿನ್ನ ವಿಷಯಗಳು” ಎಂದು ಹೇಳಿದ್ದರು.
ಹಾಗಾಗಿ, ರಾಹುಲ್ ಗಾಂಧಿ ಅವರ, “ನಾನು ಯಾವುದೇ ತರಹದ ಹಿಂದುತ್ವದಲ್ಲಿ ವಿಶ್ವಾಸ ಇಡುವುದಿಲ್ಲ” ಎಂಬ ಹೇಳಿಕೆಯು ಬಿಜೆಪಿ ಮತ್ತು ಆರೆಸ್ಸೆಸ್ನ ಉಗ್ರಗಾಮಿ ರಾಜಕೀಯದ ಸಿದ್ದಾಂತದ ವಿರುದ್ಧವಾಗಿತ್ತೆ ವಿನಃ ಹಿಂದೂಗಳ ವಿರುದ್ಧವಾಗಿರಲ್ಲ.
ಒಟ್ಟಿನಲ್ಲಿ ಹೇಳಬೇಕಾದರೆ, ಮಾಯಾವತಿ, ಮಮತಾ ಬ್ಯಾನರ್ಜಿ, ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್ ಹಾಗೂ ರಾಹುಲ್ ಗಾಂಧಿ ಅವರು ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಸಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ಬೆಂಬಲಿಗರು ವೈರಲ್ ಮಾಡುತ್ತಿರುವ ಚಿತ್ರಗಳಲ್ಲಿ ಕೆಲವು ಹೇಳಿಕೆಗಳು ಸುಳ್ಳಾಗಿದ್ದು, ಕೆಲವನ್ನು ರಾಜಕೀಯ ದುರುದ್ದೇಶಕ್ಕಾಗಿ ತಪ್ಪಾಗಿ ಬಿಂಬಿಸಲಾಗಿದೆ.
ಯಾವುದೆ ವಿಡಿಯೊ, ಚಿತ್ರ ಅಥವಾ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವ ಮುಂಚೆ ಅದು ಸತ್ಯವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಅವುಗಳ ಬಗ್ಗೆ ನಿಮಗೆ ಸಂಶಯವಿದ್ದರೆ ಜನಶಕ್ತಿ ಮೀಡಿಯಾದ +916361984022 ಈ ನಂಬರ್ಗೆ ಕಳುಹಿಸಿ. ನಾವು ಅದನ್ನು ಫ್ಯಾಕ್ಟ್ಚೆಕ್ ಮಾಡುತ್ತೇವೆ.
ವಿಡಿಯೊ ನೋಡಿ: ದೇಶವನ್ನು ಆಳವಾಗಿ ಘಾಸಿಗೊಳಿಸಿದ ಎರಡು ಘಟನೆಗಳು Janashakthi Media