ಕಳೆದ 6 ವರ್ಷಗಳಲ್ಲೇ ಅತಿಹೆಚ್ಚು ಉಷ್ಣಾಂಶ ದಾಖಲಾದ ದಿನ: ಏಪ್ರಿಲ್ 25ರ ಗುರುವಾರ

ಬೆಂಗಳೂರು: ಏಪ್ರಿಲ್ ತಿಂಗಳಲ್ಲಿ 25ನೇ ತಾರೀಖಿನ ಗುರುವಾರ ಇದು ಕಳೆದ 6 ವರ್ಷಗಳಲ್ಲೇ ಅತಿಹೆಚ್ಚು ಉಷ್ಣಾಂಶ ದಾಖಲಾಗಿದೆ.ಅಂದರೆ ಇ್ಉ 44 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

ರಾಜ್ಯದಲ್ಲಿ 2017 ರಿಂದ 2024ರ ಇಸವಿಯ ಈ ಎಂಟು ವರ್ಷಗಳಲ್ಲಿ ಏ.24ರ ಬೆಳಗ್ಗೆ 8.30ರಿಂದ ಏ.25ರ ಬೆಳಗ್ಗೆ 8.30ರ ಸಂದರ್ಭದಲ್ಲಿ ಉಷ್ಣಾಂಶವನ್ನು ಹೋಲಿಕೆ ಮಾಡಿದೆ. ಆ ಪೈಕಿ 2019 ರಿಂದ 2024ರ ನಡುವಿನ 6 ವರ್ಷಗಳಲ್ಲಿ ಇಂದು ದಾಖಲಾದ 44 ಡಿಗ್ರಿ ಉಷ್ಣಾಂಶವು ಕಳೆದ 6 ವರ್ಷಗಳಲ್ಲೇ ಈ ಅವಧಿಯಲ್ಲಿ ಗರಿಷ್ಠ ತಾಪಮಾನವಾಗಿದೆ. ಹಾಗೂ 8 ವರ್ಷಗಳಲ್ಲಿ ಎರಡನೇ ಅತ್ಯಧಿಕ ತಾಪಮಾನ ಇದಾಗಿದೆ ಎಂದು ಕೆಎಸ್ ಎನ್ ಡಿಎಂಸಿ ವಿಜ್ಞಾನಿಗಳು ತಿಳಿಸಿದ್ದಾರೆ.2017ನೇ ಇಸವಿಯಲ್ಲಿ ಇದೇ ಅವಧಿಯಲ್ಲಿ 42.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, 2018ರಲ್ಲಿ 44.7, 20190 43.2 8, 2020 2 43.3 ಡಿಗ್ರಿ ಉಷ್ಣಾಂಶ, 2021ನೇ ಇಸವಿಯಲ್ಲಿ 41.4, 20220 41.5, 20230 43.4 8 ಪ್ರಖರವಾದಿ ಉಷ್ಣಾಂಶವಿದ್ದಿತ್ತು. ಆದರೆ 2024ರ ಇಸವಿಯ ಏಪ್ರಿಲ್ 25ರಂದು ಬರೋಬ್ಬರಿ 44 ಡಿಗ್ರಿಯಷ್ಟು ಉಷ್ಣಾಂಶ ಹೆಚ್ಚಿರುವುದು ಕಂಡು ಬಂದಿದೆ.

ಇದನ್ನೂ ಓದಿ : ಹೆಚ್ಚುತ್ತಿರುವ ತಾಪಮಾನ:ವಹಿಸಬೇಕಾದ ಎಚ್ಚರಿಕೆ: ಹವಾಮಾನ ಇಲಾಖೆ ನೀಡಿದ‌ ಸೂಚನೆಗಳೇನು?

ಬೀದರ್, ಕಲಬುರ್ಗಿ, ರಾಯಚೂರು, ಯಾದಗಿರಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ ಹಾಗೂ ಬಳ್ಳಾರಿ ಮೊದಲಾದ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು 40 ರಿಂದ 44 ಡಿಗ್ರಿಯ ಆಸುಪಾಸಿನಲ್ಲಿದೆ. ಈ ಜಿಲ್ಲೆಗಳ ಕನಿಷ್ಠ ತಾಪಮಾನವು 24ರಿಂದ 26ರ ಮಧ್ಯದಲ್ಲಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 38.1 ಹಾಗೂ ಕನಿಷ್ಠ 23 ಡಿಗ್ರಿಯಷ್ಟು ದಾಖಲಾಗಿದೆ.

ಈ ನಡುವೆ ಕಳೆದ ವರ್ಷವೂ ಮಳೆಯಾಗದ ಕಾರಣ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟವೂ ಕಡಿಮೆಯಾಗಿದೆ.

ರಾಜ್ಯದ ಪ್ರಮುಖ ಡ್ಯಾಂಗಳಲ್ಲಿನ ನೀರಿನ ಸಂಗ್ರಹ ಪ್ರಮಾಣ :

ಇನ್ನು ಏ.25ರಂದು ಕೃಷ್ಣ ನದಿ ಜಲಾಯನ ಪ್ರದೇಶಲ್ಲಿನ 6 ಜಲಾಶಯಗಳಲ್ಲಿ 24.46 ಟಿಎಂಸಿಯಷ್ಟು ನೀರು ಒಳಹರಿವು ಇದ್ದರೆ, ನದಿಗೆ 10.709 ಟಿಎಂಸಿ ಹೊರಬಿಡಲಾಗುತ್ತಿದೆ. 33.14 ಟಿಎಂಸಿಯಷ್ಟು ನೀರನ್ನು ಕಾಲುವೆಗಳಿಗೆ ಹರಿಸಲಾಗುತ್ತಿದೆ. ಒಟ್ಟಾರೆ ಈ ಜಲಾಶಯಗಳಲ್ಲಿ ಶೇ. 22.65 ರಷ್ಟು ನೀರಿನ ಸಂಗ್ರಹವಿದೆ. ಕೃಷ್ಣ ನದಿ ಜಲಾಯನ ಪ್ರದೇಶದಲ್ಲಿ ಒಟ್ಟು 6 ಜಲಾಶಯಗಳು ಬರುತ್ತದೆ. ಆಲಮಟ್ಟಿ, ಭದ್ರಾ, ಹಿಡಕಲ್ ಡ್ಯಾಮ್, ಮಲಪ್ರಭಾ, ನಾರಾಯಣಪುರ ಹಾಗೂ ತುಂಗಭದ್ರಾ ಅಣೆಕಟ್ಟುಗಳು ಬರುತ್ತದೆ.

ಹಾಗೆಯೇ ಕಾವೇರಿ ನದಿ ಜಲಾಯನ ಪ್ರದೇಶದಲ್ಲಿ ಹಾರಂಗಿ, ಹೇಮಾವತಿ, ಕೆಆರ್ ಎಸ್ ಹಾಗೂ ಕಬಿನಿ ಡ್ಯಾಮ್ ಗಳು ಬರುತ್ತದೆ. ಇಲ್ಲಿ ಒಟ್ಟಾರೆ 73.57 ಟಿಎಂಸಿಯಷ್ಟು ನೀರು ಒಳಹರಿವಿದ್ದರೆ, 46.21 ಟಿಎಂಸಿಯಷ್ಟು ನೀರು ನದಿಗಳಿಗೆ ಬಿಡುಗಡೆಯಾಗುತ್ತಿದೆ. ಇನ್ನು 23.97 ಟಿಎಂಸಿಯಷ್ಟು ನೀರು ಕಾಲುವೆಗಳಿಗೆ ಬಿಡಲಾಗುತ್ತಿದೆ. ಒಟ್ಟಾರೆ ಈ 4 ಡ್ಯಾಮ್ ಗಳಲ್ಲಿ ನೀರಿನ ಸಂಗ್ರಹವು ಶೇ.23.55 ರಷ್ಟಿದೆ ಎಂದು ಜಲಸಂಪನ್ಮೂಲ ಇಲಾಖೆಯು ತಿಳಿಸಿದೆ.

ಏಪ್ರಿಲ್ 25ರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಯ ಅವಧಿಯಲ್ಲಿ ಬೆಳಗಾವಿಯ ಹುಕ್ಕೇರಿಯಲ್ಲಿನ ಕೇಸ್ತಿ ಎಂಬಲ್ಲಿ 97 ಮಿ.ಮೀ ಅತಿಹೆಚ್ಚಿನ ಮಳೆಯಾಗಿರುವುದು ವರದಿಯಾಗಿದೆ.

Donate Janashakthi Media

Leave a Reply

Your email address will not be published. Required fields are marked *