ಬಳ್ಳಾರಿ : ಬಳ್ಳಾರಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ 21 ಸ್ಥಾನಗಳನ್ನು ಗೆದ್ದು ಪಾಲಿಕೆಯನ್ನು ಕಾಂಗ್ರೆಸ್ ವಶಕ್ಕೆ ತೆಗೆದುಕೊಂಡು ಆಡಳಿತವನ್ನು ನಡೆಸಲು ಸಿದ್ದತೆಯನ್ನು ಮಾಡಿಕೊಂಡಿದೆ. ಇದರ ಹಿನ್ನೆಲೆಯಲ್ಲಿ ಮೇಯರ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಮೇಯರ್ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದೆ. ಈ ಬಾರಿ ನಡೆದ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕಂಚುಕೊಟೆ ಆಗಿರುವ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯಗಳು ಇರುವ ಕೌಲ್ ಬಜಾರ್‌ದಿಂದ ಅಭ್ಯರ್ಥಿಗಳು ಗೆದ್ದಿದ್ದಾರೆ. ಇವು ಎಲ್ಲ ವಾರ್ಡ್ಗಳು ಗ್ರಾಮೀಣ ಪ್ರದೇಶದ ಶಾಸಕ ನಾಗೇಂದ್ರ ಕ್ಷೇತ್ರಕ್ಕೆ ಸಂಬoಧಿಸಿದ ವಾರ್ಡ್ಗಳು. ವಿಧಾನ ಸಭೆ ಚುನಾವಣಾ ನಲ್ಲಿ ಎಲ್ಲವು ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತವೆ. ಮುಂದೆ ಬರುವ ಚುನಾವಣೆಗಳನ್ನು ಲೆಕ್ಕಾಚಾರದಲ್ಲಿ ಇಟ್ಟುಕೊಂಡು, ಪ್ರಥಮ ಅವಧಿಯಲ್ಲಿ ಪ್ರಭಲ ಅಕಾಂಕ್ಷಿ ಅಗಿದ್ದ 30ನೆ ವಾರ್ಡ ನಿಂದ ಸ್ಪರ್ದಿಸಿ ಗೆದ್ದಿರುವ ಆಸೀಫ್‌ಗೆ ಮೇಯರ್ ಸ್ಥಾನವನ್ನು ಕೊಡವ ಲೆಕ್ಕಾಚಾರ ನಡೆಯುತ್ತಿದೆ.
ಶಾಸಕ ನಾಗೇಂದ್ರ ಕೂಡಾ ಆಸೀಫ್ ಬೆನ್ನಿಗೆ ನಿಲ್ಲುವ ಸಾಧ್ಯತೆಗಳೂ ಇದ್ದಾವೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ತಿಳಿದಿದೆ.ಆಸೀಫ್ ಕೂಡಾ ಉತ್ತಮ ವ್ಯಕ್ತಿ, ವಿದ್ಯಾವಂತ ಕೂಡ ಹೌದು. ಈಗಾಗಲೇ ಜನರ ಮನಸ್ಸನ್ನು ಗೆದ್ದಿದ್ದಾರೆ. ಯಾವುದೇ ಕಳಂಕವು ಇಲ್ಲದ ವ್ಯಕ್ತಿ ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ. ಇದರಲ್ಲಿ ಕೂಡ ಕಾಂಗ್ರೆಸ್ ಪಕ್ಷವು ಮುಸ್ಲಿಂ ಸಮುದಾಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಅವಕಾಶವನ್ನು ನೀಡುತ್ತಿದೆ. ಈ ಎಲ್ಲ್ಲಾ ಲೆಕ್ಕಾಚಾರಗಳನ್ನು ಹಾಕಿಕೊಂಡು ಮೇಯರ್ ಸ್ಥಾನ ಆಸೀಫ್‌ಗೆ ಕೊಡುವ ಸಾದ್ಯತೆ ಇದೇ ಎಂದು ತಿಳಿದುಬಂದಿದೆ. ಅಂದಿನಿoದ ಇಂದಿನ ವರೆಗೆ ಪ್ರತ್ಯಕ್ಷವಾಗಿ ರಾಜಕಾರಣಕ್ಕೆ ಎಂಟ್ರೀ ಕೊಡದ ಆಸೀಫ್ ಅವರು ಗ್ರಾಮೀಣ ಶಾಸಕ ನಾಗೇಂದ್ರ ಮತ್ತು ಕೌಲ್‌ಬಜಾರ್‌ನ ಜನರ ಒತ್ತಡದಿಂದ ರಾಜಕೀಯಕ್ಕೆ ಎಂಟ್ರೀ ಕೊಟ್ಟು 30 ನೇ ವಾರ್ಡನ್ನು ಕೈವಶ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ಜನರು ಬಿಜೆಪಿಯ ಆಡಳಿತಕ್ಕೆ ಬೇಸತ್ತು ಕಾಂಗ್ರೆಸ್‌ಗೆ ಮತ ನೀಡಿ ಆಶೀರ್ವದಿಸಿದ್ದಾರೆ-ಗ್ರಾಮೀಣ ಶಾಸಕ ನಾಗೇಂದ್ರ
ಆಸೀಫ್ ರವರ ಸಾಮಾಜಿಕ ಸೇವೆಗಳು,ಕೊರೋನ ಸಮಯದಲ್ಲಿ ಮಾಡಿದ ಸೇವೆಗಳು ಮತ್ತು ಮನೆ ಹತ್ತಿರ ಬಂದು ಕೈಚಾಚಿದ ಜನರನ್ನು ಬರೀಕೈಲಿ ಕಳುಹಿಸಿಲ್ಲ ಎಂದು ಜನರ ಅಭಿಪ್ರಾಯವಾಗಿದೆ, ಆದರೇ ಯಾವತ್ತು ಇವೆಲ್ಲವನ್ನೂ ಪ್ರಚಾರ ಮಾಡಿಕೊಂಡಿಲ್ಲ ಎಂದು ಅಲ್ಲಿನ ಜನರು ಹೇಳಿಕೊಳ್ಳುತಿದ್ದಾರೆ. ಇವೆಲ್ಲಾ ಅರೆತ ಮತದಾರರು ಅವರಿಗೆ ಆಶೀರ್ವಾದವನ್ನು ಮಾಡಿದ್ದಾರೆ. ಹಾಗಾಗಿ ಅವರು ಮೇಯರ್ ಆಗುವ ಸಾಧ್ಯತೆ ದಟ್ಟವಾಗಿದೆ
ವರದಿ : ಪಂಪನಗೌಡ.ಬಿ, ಬಳ್ಳಾರಿ.