ನವದೆಹಲಿ: ಫೇಮ್-2 ಯೋಜನೆಯಡಿ ಬೆಂಗಳೂರಿಗೆ 1,221 ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲಾಗಿದೆ ಎಂದು ಡಿಸೆಂಬರ್ 2ರಂದು ಲೋಕಸಭೆಯಲ್ಲಿ ಭಾರಿ ಕೈಗಾರಿಕೆ ಇಲಾಖೆಯ ರಾಜ್ಯ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮಾ ತಿಳಿಸಿದ್ದಾರೆ. ಬೆಂಗಳೂರು
ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ‘ಕರ್ನಾಟಕಕ್ಕೆ ಫೇಮ್-2 ಯೋಜನೆಯಡಿ 6,862 ಮತ್ತು ಪಿ.ಎಂ. ಇ-ಡ್ರೈವ್ ಯೋಜನೆಯಡಿ 13,800 ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜಿಸಲಾಗಿದೆ‘ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹೆಚ್‌ಡಿಕೆ – ಪ್ರಹ್ಲಾದ್ ಜೋಶಿ ಭರವಸೆ: ಹೋರಾಟ ಮುಂದೂಡಿದ ಅಂಗನವಾಡಿ ಕಾರ್ಯಕರ್ತೆಯರು
ಪಿ.ಎಂ. ಇ-ಡ್ರೈವ್ ಯೋಜನೆಯ ಮೊದಲ ಹಂತದ 10,900 ಇ-ಬಸ್‌ಗಳ ಹಂಚಿಕೆಯಲ್ಲಿ ಬೆಂಗಳೂರಿಗೆ 4,500 ಇ-ಬಸ್‌ಗಳನ್ನು ಹಂಚಿಕೆ ಮಾಡಲಾಗಿದೆ. ಫೇಮ್-2 ಯೋಜನೆಗೆ ಒಟ್ಟು ₹517.23 ಕೋಟಿ ಅನುದಾನ ನೀಡಲಾಗಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ನೋಡಿ: ಉಳ್ಳಾಲದಲ್ಲಿ ಸರಕಾರಿ ತಾಲೂಕು ಆಸ್ಪತ್ರೆ ಸ್ಥಾಪನೆ ಯಾವಾಗ ? Janashakthi Media
