ಗ್ಯಾಂಗ್ಟಕ್: ಸಿಕ್ಕಿಂ ರಾಜ್ಯದಲ್ಲಿ ಸರ್ಕಾರಿ ಮಹಿಳಾ ನೌಕರರಿಗೆ ಒಂದು ವರ್ಷ ರಜೆ ನೀಡಲಾಗುವುದು ಎಂದು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ ಸಿಂಗ್ ತಮಂಗ್ ತಿಳಿಸಿದ್ದಾರೆ.
ಸಿಕ್ಕಿಂ ರಾಜ್ಯ ಸೇವಾ ಅಧಿಕಾರಿಗಳ ಸಂಘದ ವಾರ್ಷಿಕ ಸಾಮಾನ್ಯ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೇಮ ಸಿಂಗ್ ಅವರು. ಮಹಿಳೆಯರ ಜೊತೆಗೆ ಪುರುಷರಿಗೂ ಒಂದು ತಿಂಗಳು ಪಿತೃತ್ವ ರಜೆ ನೀಡಲಾಗುವುದು ಎಂದು ಈ ಘೋಷಣೆ ಮಾಡಿದರು.
ಇದನ್ನೂ ಓದಿ:ಇಂಜಿನ್ ನಿರ್ವಹಣೆ ಕಾರ್ಯದ ವೇಳೆ ಸ್ಪೈಸ್ ಜೆಟ್ ವಿಮಾನ ಬೆಂಕಿಗೆ ಆಹುತಿ
ಸರ್ಕಾರಿ ಉದ್ಯಮದಾರರ ತಮ್ಮ ಮಕ್ಕಳು ಹಾಗೂ ಕುಟುಂಬದ ಬಗ್ಗೆ ಕಾಳಜಿ ವಹಿಸಲು ಸಹಕಾರಿಯಾಗಲಿದೆ ಎಂದರು.ಈ ಯೋಜನೆಯಲ್ಲಿನ ಕೆಲವು ಸೇವಾ ನಿಯಮಗಳನ್ನು ಬದಲಾವಣೆ ಮಾಡಿ ಶೀಘ್ರದಲ್ಲೇ ವಿವರ ಪ್ರಕಟಿಸಲಾಗುವುದು ಎಂದು ಪ್ರೇಮ್ ಸಿಂಗ್ ತಮಂಗ್ ಹೇಳಿದರು.
ಹೆರಿಗೆ ಪ್ರಯೋಜನ ಕಾಯ್ದೆ 1961 ರ ಪ್ರಕಾರ ಮಹಿಳೆಯರಿಗೆ ಹೆರಿಗೆ ರಜೆ ನೀಡಲಾಗುತ್ತಿದೆ.ಸದ್ಯ ಮಹಿಳೆಯರು 6 ತಿಂಗಳು ಅಥವಾ26 ವಾರಗಳ ವೇತನ ಸಹಿತ ಹೆರಿಗೆ ರಜೆಗೆ ಅರ್ಹಳಾಗಿದಾರೆ. ಹಿಮಾಲಯನ್ ರಾಜ್ಯವು ಭಾರತದಲ್ಲಿ ಕಡಿಮೆ ಜನಸಂಖ್ಯೆಯನ್ನು ಹೊದಿದೆ,ಸುಮಾರು 6.32 ಲಕ್ಷ ಜನಸಂಖ್ಯೆ ಇದೆ. ಸಿಕ್ಕಿಂ ಮತ್ತು ಅದರ ಜನರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತಿರುವ ಅಧಿಕಾರಿಗಳು ರಾಜ್ಯದ ಆಡಳಿತದ ಬೆನ್ನೆಲುಬು ಎಂದು ತಮಾಂಗ್ ಹೇಳಿದರು.