ದಹಲಿ: ಅಪ್ರಾಪ್ತ ಬಾಲಕನೊಬ್ಬನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆಯೊಂದು ದಹಲಿಯ ಸೀಲಂಪುರ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಹುಡುಗನ ಮೇಲೆ ಅವನ ಮೂವರು ಸ್ನೇಹಿತರು ಮತ್ತು ಪಕ್ಕದ ಮನೆಯ ಹುಡುಗ ಸೇರಿ ಅತ್ಯಾಚಾರ ನಡೆಸಿದ್ದು, ಅವನ ಖಾಸಗಿ ಭಾಗಕ್ಕೆ ರಾಡ್ ಅನ್ನು ತೂರಿಸಿದ್ದಾರೆ ಎಂದು ದೆಹಲಿ ಮಹಿಳಾ ಆಯೋಗ ಭಾನುವಾರ ತಿಳಿಸಿದೆ. ಗಂಭೀರ ಸ್ಥಿತಿಯಲ್ಲಿರುವ ಅಪ್ರಾಪ್ತ ಬಾಲಕನನ್ನು ಪ್ರಸ್ತುತ ಎಲ್ಎನ್‌ಜೆಪಿ ಆಸ್ಪತ್ರೆಯಲ್ಲಿ ದಾಖಲಸಿದ್ದು, ಘಟನೆ ನಾಲ್ಕು ದಿನಗಳ ನಂತರ ಗುರುವಾರ ಪ್ರಕರನದ ಬಗ್ಗೆ ಪೋಷಕರಿಗೆ ತಿಳಿಸಲಾಗಿದೆ.
ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಈ ವಿಷಯವನ್ನು ಕುರಿತು ಎಸ್‌ಎಚ್‌ಒ ಸೀಲಂಪುರ್‌ಗೆ ಪತ್ರ ಬರೆದಿದ್ದು, “12 ವರ್ಷದ ಮಗುವಿನ ಮೇಲೆ ಸೆಪ್ಟೆಂಬರ್ 18 ರಂದು ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.. ಅವರು ಇಟ್ಟಿಗೆಗಳು ಮತ್ತು ರಾಡ್‌ಗಳಿಂದ ಅವನನ್ನು ಕ್ರೂರವಾಗಿ ಹಿಂಸಿಸಿದ್ದಾರೆ” ಎಂದು ಅವರು ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ಪೋಷಕರು ದೆಹಲಿ ಪೊಲೀಸರಿಗೆ ವಿಷಯ ತಿಳಿಸಿದ್ದು, ಅಪ್ರಾಪ್ತ ಹುಡುಗನ್ನು ಪ್ರಸ್ತುತ ಆಸ್ಪತ್ರೆಗೆ ದಾಖಲಿಸಿದ್ದಾರೆ.
DCW ಮುಖ್ಯಸ್ಥರು ಗಂಭೀರ ಸ್ಥಿತಿಯಲ್ಲಿರುವ ಬಾಲಕನ ಅಸ್ಪಷ್ಟ ಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ʼರಾಷ್ಟ್ರ ರಾಜಧಾನಿಯಲ್ಲಿ ಹುಡುಗಿಯರು ಬಿಡಿ, ಹುಡುಗರು ಸಹ ಸುರಕ್ಷಿತವಾಗಿಲ್ಲ, 12 ವರ್ಷದ ಹುಡುಗ ನಾಲ್ವರಿಂದ ಕ್ರೂರವಾಗಿ ಅತ್ಯಾಚಾರವೆಸಗಲಾಗಿದ್ದು ದೊಣ್ಣೆಯಿಂದ ಹೊಡೆದ ನಂತರ ಅರೆ ಸತ್ತ ಸ್ಥಿತಿಯಲ್ಲಿ ಹುಡುಗನನ್ನು ಬಿಟ್ಟಿದ್ದಾರೆ, ನಮ್ಮ ತಂಡವು ಈ ವಿಷಯದಲ್ಲಿ ಎಫ್‌ಐಆರ್ ದಾಖಲಿಸಿದೆ, ”ಎಂದು ಅವರು ತಿಳಿಸಿದ್ದಾರೆ.
ಅಪ್ರಾಪ್ತ ವಯಸ್ಕನ ಕುಟುಂಬವು ಸೆಪ್ಟೆಂಬರ್ 24 ರವರೆಗೆ ಹೇಳಿಕೆ ನೀಡಲಿಲ್ಲ ಎಂದು ಪೊಲೀಸರು ತಿಳಿಸಿದ್ದು, ಪ್ರಕರಣಕ್ಕೆ ನಿಯೋಜಿಸಲಾದ ತನಿಖಾ ಅಧಿಕಾರಿ ಅವರನ್ನು ನಿಯಮಿತವಾಗಿ ಸಂಪರ್ಕಿಸಿದರು. ಶನಿವಾರ, “ಸಖಿ” ಸಂಸ್ಥೆಯ ಸಲಹೆಗಾರರು ಗಾಯಗೊಂಡ ಮಗುವಿನ ತಾಯಿಯೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಸಮಾಲೋಚನೆಯ ನಂತರ, ಮೂರು ದಿನಗಳ ಹಿಂದೆ, ಅಂದರೆ 18.09.22 ರಂದು, ತನ್ನ ಮಗನನ್ನು ಅವನ ಮೂವರು ಸ್ನೇಹಿತರು ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ತಾಯಿ ಒಪ್ಪಿಕೊಂಡು ಮಾಹಿತಿ ನೀಡಿದ್ದಾರೆ.
ತನಿಖೆಯ ಸಂದರ್ಭದಲ್ಲಿ, ಈ ಕೃತ್ಯಯೆಸಿಗಿದ ಮೂರು ಹುಡುಗರು 10-12 ವರ್ಷದೊಳಗಿನವರಾಗಿದ್ದು, ಅಲ್ಲೆಗೊಳಗಾದ ಹುಡುಗನ ಸ್ನೇಹಿತರು ಮತ್ತು ನೆರೆಹೊರೆಯವರು ಎಂದು ತಿಳಿದುಬಂದಿದೆ. ಆರೋಪಿಗಳಲ್ಲಿ ಒಬ್ಬರು ಅಪ್ರಾಪ್ತರ ಸೋದರ ಸಂಬಂಧಿ ಎಂದು ಆರೋಪಿಸಲಾಗಿದೆ. ಇಲ್ಲಿಯವರೆಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಅಪ್ರಾಪ್ತನನ್ನು ಬಾಲಾಪರಾಧಿಗಳ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ. ಐಪಿಸಿ ಕಲಂ 377/34 ಮತ್ತು ಪೋಕ್ಸೋ ಕಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮೂಂದುವರೆಸಾಗಿದೆ.