ಅಮೇರಿಕಾ : ಹೂಸ್ಟನ್ ನಗರದ 11 ವರ್ಷದ ಬಾಲಕನ ಮೇಲೆ ಗುಂಡಿನ ದಾಳಿಯಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಮಾಷೆ ಮಾಡಲೆಂದು ಮನೆಯ ಡೋರ್ ಬೆಲ್ ಬಾರಿಸಿದ ಮನೆಯವರು ಬಾಗಿಲು ತೆರೆಯುವ ಮುನ್ನವೇ ಅಲ್ಲಿಂದ ತಪ್ಪಿಸಿಕೊಂಡು ಹೋಗುವ ‘ಡಿಂಗ್ ಡಾಂಗ್ ಡಿಚಿಂಗ್’ ಎನ್ನುವ ಪ್ರ್ಯಾಂಕ್ ಮಾಡುವ ವೇಳೆ ಘಟನೆ ಜರುಗಿದೆ.
ಇದನ್ನೂ ನೋಡಿ: ತೆಲಂಗಾಣ | ವೈಫಲ್ಯಗಳಿಗೆ ಎದೆಗುಂದದೆ ಐಎಫ್ಎಸ್ ಹುದ್ದೆಗೇರಿದ ಕನ್ನಡತಿ
ಘಟನೆಯ ಕುರಿತು ತನಿಖೆ ಮಾಡಲಾಗುತ್ತಿದೆ. ಇದುವರೆಗೂ ಯಾರನ್ನೂ ಬಂಧಿಸಲಾಗಿಲ್ಲ. ಮೃತ ಬಾಲಕನ ಗುರುತು ಲಭ್ಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
2023 ರಲ್ಲೂ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ‘ಡಿಂಗ್ ಡಾಂಗ್ ಡಿಚಿಂಗ್’ಪ್ರ್ಯಾಂಕ್ ಮಾಡಿದ ಮೂವರು ಬಾಲಕರನ್ನು ವ್ಯಕ್ತಿಯೊಬ್ಬರು ಗುಂಡಿಟ್ಟು ಕೊಂದಿದ್ದರು. 2025ರ ಮೇ ತಿಂಗಳಲ್ಲೂ ಟಿಕ್ಟಾಕ್ ವಿಡಿಯೊಗಾಗಿ ಪ್ರ್ಯಾಂಕ್ ಮಾಡುತ್ತಿದ್ದ 18 ವರ್ಷದ ಹುಡುಗನ ಮೇಲೆ ಗುಂಡಿನ ದಾಳಿಯಾಗಿತ್ತು.
ಇದನ್ನೂ ನೋಡಿ: ಪರಿಶಿಷ್ಟರ ಹಣ ಬಳಕೆ ಪರಿಶಿಷ್ಟರಿಗೇ ಬಳಸಿ – ಜ್ಞಾನಪ್ರಕಾಶ್ ಸ್ವಾಮೀಜಿ Janashakthi Media
