ನವದೆಹಲಿ ಜ 22 : ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರದ ನಡುವಿನ 11 ನೇ ಸುತ್ತಿನ ಮಾತುಕತೆ ಮತ್ತೊಮ್ಮೆ ವಿಫಲವಾಗಿದ್ದು, ಜನವರಿ 26 ರ ಗಣರಾಜ್ಯೋತ್ಸವ ಟ್ರ್ಯಾಕ್ಟರ್ ಪರೇಡ್ ಯಶಸ್ವಿಗೊಳಿಸಲು ರೈತ ಸಂಘಟನೆಗಳ ನಿರ್ಧಾರಿಸಿವೆ.
ರೈತ ಸಂಘಟನೆಗಳ ಜೊತೆ ಹಿಂದೆ ನಡೆದಿದ್ದ ಹತ್ತು ಸುತ್ತಿನ ಮಾತುಕತೆಗಳ ನಂತರ ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ಮತ್ತೊಮ್ಮೆ 11 ನೇ ಸುತ್ತಿನ ಮಾತುಕತೆ ನಡೆದು ಯಾವುದೇ ನಿರ್ಧಾರಗಳಿಲ್ಲದೆ ಮುಕ್ತಾಯವಾಗಿದೆ. ಸಭೆಗೆ ಹಿಂದಿನ ತಮ್ಮ ನಿಲುವನ್ನು ಮತ್ತಷ್ಟು ಸ್ಪಷ್ಟಪಡಿಸಿಕೊಂಡು ಹೋಗಿದ್ದ ರೈತ ಮುಖಂಡರು ಸರ್ಕಾರ ಈ ಮೂರೂ ಕಾನೂನುಗಳನ್ನು ವಾಪಸ್ ಪಡೆಯಬೇಕೆಂಬ ತಮ್ಮ ಬೇಡಿಕೆಯನ್ನು ಮುಂದಿಟ್ಟವು. ಮಾತ್ರವಲ್ಲ ಮೊನ್ನೆ ನಡೆದ ಹತ್ತನೇ ಸುತ್ತಿನ ಮಾತುಕತೆಯಲ್ಲಿ ಸರ್ಕಾರ ಈಕಾನೂನುಗಳನ್ನು ಒಂದುವರೆ ವರ್ಷಗಳ ಕಾಲ ತಡೆಹಿಡಿಯುವುದಾಗಿ, ಮತ್ತು ಒಂದು ಸಮಿತಿಯನ್ನು ರಚಿಸಿನಂತರನಿರ್ಧರಿಸುವುದಾಗಿ ತಿಳಿಸಿತ್ತು.
ಈ ಕುರಿತು ಸಭೆಯಲ್ಲಿ ಚರ್ಚಿಸಿದ ರೈತ ಮುಖಂಡರು ಭಾರತ ಸಂಸದೀಯ ಪ್ರಜಾಪ್ರಭುತ್ವವನ್ನು ಒಪ್ಪುಕೊಂಡಿದೆ. ಯಾವುದೇ ಕಾನೂನುಗಳನ್ನು ಮಾಡಬೇಕಾದರೂ ಮತ್ತು ರದ್ದುಗೊಳಿಸಬೇಕಾದರೂ ಅದಕ್ಕೆ ಅದರದೇ ಆದ ನಿಯಮಾವಳಿಯಳಿವೆ. ಈ ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಿ ಪಾಸ್ ಮಾಡಲಾಗಿದೆ. ಅದೇ ರೀತಿ ಈ ಕಾಯ್ದೆಗಳನ್ನು ತಡೆಹಿಡಿಯುವ ಮತ್ತು ರದ್ದುಗೊಳಿಸುವ ಸಂಸತ್ತಿಗೆ ಮಾತ್ರ ಇದೆ. ಈ ಅಧಿಕಾರ ಸರ್ಕಾರಕ್ಕಾಗಲಿ, ಸಚಿವ ಸಂಪುಟಕ್ಕಾಗಲಿ ಅಥವಾ ಸುಪ್ರೀಂ ಕೋರ್ಟಿಗಾಗಲಿ ಇಲ್ಲ. ನೀವು ಈಕಾನೂನುಗಳನ್ನು ರದ್ದುಗೊಳಿಸಲು ವಿಶೇಷ ಅಧಿವೇಶ ಕರೆಯಿರಿ ಎಂದು ಒತ್ತಾಯಿಸಿದರು. ಇದಕ್ಕೆ ಸರಗಕಾರದ ಕಡೆಯಿಂದ ಯಾವುದೇ ಉತ್ತರ ಸಿಗದೆ ಸಭೆ ಮುಕ್ತಾಯವಾಗಿದೆ.
ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವ ಟ್ರ್ಯಾಕ್ಟರ್ ಪೆರೆಡ್ ನಡೆಸಲು ಈ ಹಿಂದೆಯೇ ನಿರ್ಧರಿಸಲಾಗಿತ್ತು. ಇದರಲ್ಲಿ ಯಾವುದೇ ಬದಲಾವಣೆಗಳಿಲ್ಲ. ಮತ್ತು ಈ ಪೆರೆಡನ್ನು ಶಾಂತಿಯುತವಾಗಿ ನಡೆಸಲು ನಿರ್ಧರಿಸಲಾಗಿದೆ ಎಂದು ರೈತ ಮುಖಂಡರು ತಿಳಿಸಿದರು.