ಹಾಸನ: ಹಾಸನ ರಿಗ್ ಅಸೋಸಿಯೇಶನ್ ಮಾಲಿಕರು ಮತ್ತು ಏಜೆಂಟರ ಸಂಘದ ವತಿಯಿಂದ ಕೊಳವೆ ಬಾವಿ ಕೊರೆಯಲು ಈ ಭಾರಿ ರೈತರ ಅನುಕೂಲಕ್ಕಾಗಿ ಪ್ರತೀ ಅಡಿಗೆ 105 ರೂ. ನಿಗದಿ ಮಾಡಲಾಗಿದೆ ಎಂದು ಸಂಘದ ಖಜಾಂಚಿ ಜಿ.ಸಿ ಶಿವಣ್ಣ ತಿಳಿಸಿದರು. ಕೊಳವೆ ಬಾವಿ
ನಗರದಲ್ಲಿ ಇಂದು ಈ ಬಗ್ಗೆ ಮಾಹಿತಿ ನೀಡಿರುವ ಅವರು, ಹಾಸನ, ಆಲೂರು, ಸಕಲೇಶಪುರ ಮೂರು ತಾಲೂಕುಗಳ ಲಾರಿ ಮಾಲೀಕರು ಸೇರಿ ಸಂಘ ಸ್ಥಾಪಿಸಿಕೊಂಡು ಕಳೆದ ಆರು ವರ್ಷಗಳಿಂದ ಕೆಲಸ ಮಾಡಿಕೊಂಡುಬಂದಿದ್ದೇವೆ, ತಮ್ಮ ಸಂಘದಲ್ಲಿ 50 ಜನ ಸದಸ್ಯರಿದ್ದು ರೈತರ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಟ್ರಂಪ್ 2.0 ಮತ್ತು ಮೋದಿ 3.0 – ವ್ಯಂಗ್ಯಚಿತ್ರಕಾರರು ಕಾಣುವಂತೆ
ಕೊಳವೆ ಬಾವಿ ಕೊರೆಯುವ ವಿಚಾರವಾಗಿ ಕೆಲವೆಡೆ ರೈತರಿಗೆ ತಪ್ಪ ಮಾಹಿತಿ ನೀಡುವುದು, ದರ ಏರಿಕೆ ಮಾಡುವ ಕೆಲಸಗಳು ನಡೆಯುತ್ತಿವೆ, ಆದುದರಿಂದ ಸಂಘದ ಸದಸ್ಯರೆಲ್ಲ ಸೇರಿ ಸಭೆ ನಡೆಸಿ ಒಮ್ಮತದ ತೀರ್ಮಾನಕ್ಕೆ ಬಂದಿದ್ದು ಪ್ರತಿ ಅಡಿಗೆ 105 ರೂಪಾಯಿ ಹಾಗೂ ಕಡಿಮೆ ದರದಲ್ಲಿ ಕೇಸಿಂಗ್ ಪೈಪುಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಮಿಕರ ಸಂಬಳ ಹಾಗೂ ಬೋರ್ವೆಲ್ ಕೊರೆಯಲು ಬಳಸುವ ಉಪಕರಣಗಳ ಬೆಲೆ ಹೆಚ್ಚಳದ ನಡುವೆಯೂ ರೈತರ ಸಮಸ್ಯೆಗಳನ್ನು ಅರಿತು ನಮ್ಮ ಸಂಘ ಕೆಲಸ ಮಾಡುತ್ತಿದ್ದು, ಬೆಲೆ ಹೆಚ್ಚು ಮಾಡುವವರ ಮಾತಿಗೆ ಕೋವಿ ಕೊಡದೆ ಯಾವುದೇ ಮಾಹಿತಿ ಬೇಕಾದಲ್ಲಿ ನಮ್ಮ ಸಂಘದ ಸದಸ್ಯರು ಅಥವಾ ಸಂಘವನ್ನು ಸಂಪರ್ಕಿಸಲು ಕೋರಿದ್ದರು.
ಈ ವೇಳೆ ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಪುನೀತ್, ಉಪಾಧ್ಯಕ್ಷ ಉಮೇಶ್, ಕಾರ್ಯಾಧ್ಯಕ್ಷ ಆನಂದ್, ಪರಮೇಶ್, ಲಕ್ಷ್ಮಿಶ ಜಹೀರ್, ಅನುಪ್ ಹಾಗೂ ಸಂಘದ ಇತರ ಸದಸ್ಯರು ಇದ್ದರು.