ಸಹಬಾಳ್ವೆಯ ಹಣತೆ ಬೆಳಗೋಣ – ದೇವನೂರ ಮಹಾದೇವ

ಕೆರಗೋಡು ಹನುಮಧ್ವಜ ವಿವಾದದ ಹಿನ್ನೆಲೆಯಲ್ಲಿ, ಪ್ರಗತಿಪರ ಸಂಘಟನೆಗಳ ಒಕ್ಕೂಟವು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಏರ್ಪಡಿಸಿದ್ದ ‘ಶಾಂತಿ ಸೌಹಾರ್ದಕ್ಕಾಗಿ ಪ್ರತಿಭಟನೆ’ ನಡೆಸಿತು.  ಸಹಬಾಳ್ವೆಯ

ಪ್ರತಿಭಟನಾ ಧರಣಿಯನ್ನ ಉದ್ದೇಶಿಸಿ ಹಿರಿಯ ಸಾಹಿತಿ ದೇವನೂರು ಮಹದೇವ ಮಾತನಾಡಿ, ‘ಬಿಜೆಪಿ, ಸಂಘಪರಿವಾರದ ಕಾರ್ಯಕರ್ತರು ಪಂಜು ಹಿಡಿದು ಬೆಂಕಿ ಹಚ್ಚಲು ಬಂದರೆ ನಾವು ಮನೆಮನೆಗಳಲ್ಲಿ ಸಹಬಾಳ್ವೆಯ ಹಣತೆ ಬೆಳಗಬೇಕಿದೆ. ಮಂಡ್ಯ ನೆಲದಲ್ಲಿ ಅಂತರಂಗೆಯಾಗಿ ಹರಿಯುತ್ತಿರುವ ಐಕ್ಯತೆಯ ಚೇತನಕ್ಕೆ ಜೀವ ತುಂಬಬೇಕಿದೆ’ ಎಂದರು.

‘ಮಂಡ್ಯದಂತಹ ನೆಲದಲ್ಲಿ ಕೆರಗೋಡು ಘಟನೆಯನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. 1938ರಲ್ಲಿ ನಡೆದ ಶಿವಪುರ ಧ್ವಜಸತ್ಯಾಗ್ರಹದಲ್ಲಿ ಧೀಮಂತ ಮಹಿಳೆಯೊಬ್ಬರು ಭಾಗವಹಿಸಿ ಪೊಲೀಸರಿಂದ ಏಟು ತಿಂದ ನೆಲವಿದು. ಕೆರಗೋಡು ಗ್ರಾಮದಲ್ಲಿ ಧಜ್ವಾರೋಹಣ ನೆಪದಲ್ಲಿ ಐಕ್ಯತೆಯನ್ನು ಛಿದ್ರಗೊಳಿಸಲಾಗಿದೆ. ಇದರ ಹಿಂದೆ ಬಿಜೆಪಿ, ಸಂಘಪರಿವಾರ ನಡೆಸುತ್ತಿರುವ ಮರ್ಮವನ್ನು ಅರಿಯಬೇಕಿದೆ’ ಎಂದರು. ‘ಮಂಡ್ಯದಲ್ಲಿ ಕಣ್ಣಿಗೆ ಕಾಣದ ಒಳಿತಿನ ಅಂತರ್ಜಲ ಹರಿಯುತ್ತಿದ್ದು ಇದಕ್ಕೆ ಹಲವು ಉದಾಹರಣೆಗಳಿವೆ. ಕೆರಗೋಡು ಸಮೀಪದ ಹೊನಗಾನಹಳ್ಳಿ ಗ್ರಾಮದ ಪುಟ್ಟಣ್ಣ ಊರ ಕೆರೆಯಲ್ಲಿ ಅಸ್ಪೃಶ್ಯರಿಗೂ ನೀರು ಬಳಸಲು ಅವಕಾಶ ನೀಡುತ್ತಾರೆ. ಆದರೆ ಊರಿನ ಮೂಢಾತ್ಮರು ಪುಟ್ಟಣ್ಣನಿಗೆ ಹಿಗ್ಗಾಮುಗ್ಗಾ ಥಳಿಸುತ್ತಾರೆ. ಆ ನಂತರ ಪುಟ್ಟಣ್ಣ ಊರುಬಿಟ್ಟು ಕೆ.ಆರ್‌.ಪೇಟೆಯ ಹೇಮಗಿರಿಯಲ್ಲಿ ನೆಲೆಸುತ್ತಾರೆ, ಅಲ್ಲೊಂದು ವಿದ್ಯಾಸಂಸ್ಥೆ ಸ್ಥಾಪಿಸುತ್ತಾರೆ’ ಎಂದರು.

‘ಪ್ರಜಾಪ್ರತಿನಿಧಿಸಭೆಯ ಸದಸ್ಯರಾಗಿದ್ದ ಎಸ್‌.ಸಿ.ಮಲ್ಲಯ್ಯ ಸೋಮನಹಳ್ಳಿಯಲ್ಲಿ ಸ್ಥಾಪಿಸಿದ್ದ ಒಕ್ಕಲಿಗರ ವಸತಿ ನಿಲಯಕ್ಕೆ ಅಸ್ಪೃಶ್ಯ ಮಕ್ಕಳನ್ನೂ ಸೇರಿಸಿ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಾರೆ. ಊರ ಹೊರಗಿದ್ದ ಅಸ್ಪೃಶ್ಯರಿಗೆ ತಮ್ಮ ಮನೆಯ ಎದುರಿನ ಜಾಗವನ್ನೇ ನೀಡಿ ಸಹಬಾಳ್ವೆಯಿಂದ ವಾಸಿಸುವಂತೆ ಮಾಡುತ್ತಾರೆ. ಮಹಾತ್ಮ ಗಾಂಧಿ ಈ ಊರಿಗೆ ಭೇಟಿ ನೀಡಿ ನಿಬ್ಬೆರಗಾಗಿ ನೋಡಿದ್ದರು’ ಎಂದರು. ‘

ಚಿಂತಕ ಕಾಳೆ ಗೌಡ ನಾಗವಾರ,ಕೂಲಿಕಾರ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಜಿ. ಎನ್, ನಾಗರಾಜ್, ಪ್ರಗತಿಪರ ಸಂಘಟನೆಗಳ ಮುಖಂಡರಾದ  ರಾಮಚಂದ್ರಪ್ಪ, ಜಗದೀಶ್ ಕೊಪ್ಪ, ಎಂ ಮಾಯಿಗೌಡ,ಗಾಯಕ ಜನಾರ್ಧನ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಸುನಂದ ಜಯರಾಮ್, ಟಿ.ಎಲ್ ಕೃಷ್ಣೇಗೌಡ, ಸುರೇಂದ್ರ ಕೌಲಗಿ, ಪ್ರೊ. ಹುಲ್ಕೆರೆ ಮಹದೇವ್, ಕರ್ನಾಟಕ ರಾಜ್ಯ ರೈತ ಸಂಘದ ಬಡಗಲ ಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಎ ಎಲ್ ಕೆಂಪೇಗೌಡ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಪುಟ್ಟ ಮಾದು, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಮಂಜುಳಾ, ಸಿಐಟಿಯುನ ಸಿ ಕುಮಾರಿ, ಮಹಿಳಾ ಮುನ್ನಡೆಯ ಪೂರ್ಣಿಮಾ, ಕರ್ನಾಟಕ ಜನಶಕ್ತಿ ಸಿದ್ದರಾಜು, ಕರ್ನಾಟಕ ದಲಿತ ಸಂಘರ್ಷ ಸಮಿತಿ ವೆಂಕಟಗಿರಿಯಯ್ಯ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಎಂ ವಿ ಕೃಷ್ಣ, ಅಂದಾನಿ ಸೋಮನಹಳ್ಳಿ, ಶಿವರಾಜ್ ಮರಳಿಗ, ಮಂಡ್ಯ ಜಿಲ್ಲಾ ಕುರುಬರ ಸಂಘ ಲೋಕೇಶ್, ದೊಡ್ಡಯ್ಯ, ಕ್ರೈಸ್ತ ಪ್ರಗತಿಪರ ಸಂಸ್ಥೆಯ ಥಾಮಸ್ ಬೆಂಜಮೀನ್, ಮುಸ್ಲಿಂ ಸೌಹಾರ್ದ ಒಕ್ಕೂಟ ದ ಅಮ್ಜದ್ ಪಾಷಾ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆಯ ಸಂದೇಶ್, ಅಖಿಲ ಭಾರತ ವಕೀಲರ ಸಂಘದ ಬಿ.ಟಿ ವಿಶ್ವನಾಥ್,ಸ ಮಾನ ಮನಸ್ಕರ ವೇದಿಕೆ ಲಕ್ಷ್ಮಣ್ ಚೀರನಹಳ್ಳಿ, ಎಂ.ಬಿ ನಾಗಣ್ಣ ಗೌಡ.ಮಂಡ್ಯ ಜಿಲ್ಲಾ ಮುಸ್ಲಿಂ ಒಕ್ಕೂಟದ ತಾಹೀರ್,ಪ್ರಾಂತರೈತ ಸಂಘದ ಜಿಲ್ಲಾ ಅಧ್ಯಕ್ಷ ಎನ್ ಎಲ್ ಭರತ್ ರಾಜ್, ದಲಿತ ಹಕ್ಕುಗಳ ಸಮಿತಿಯ ಕೃಷ್ಣನೇತೃತ್ವ ವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *