ಚುನಾವಣಾ ಬಾಂಡ್‌ : 35 ಔಷಧೀಯ ಕಂಪನಿಗಳಿಂದ 1000 ಕೋಟಿ ರೂ ಲೂಟಿ ಮಾಡಿದ ಬಿಜೆಪಿ

ಸಿ.ಸಿದ್ದಯ್ಯ
ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ಮತ್ತು ಐಟಿ ಇಲಾಖೆಯಿಂದ ದಾಳಿ ಎದುರಿಸಿದ 7 ಫಾರ್ಮಾ ಕಂಪನಿಗಳು ಚುನಾವಣಾ ಬಾಂಡ್‌
ಇತ್ತೀಚಿನ ವರ್ಷಗಳಲ್ಲಿ, ದೇಶದಲ್ಲಿ ತಯಾರಿಸಲಾದ ಕೆಮ್ಮು ಸಿರಪ್ ಗಳು ಮತ್ತು ಕಣ್ಣಿನ ಮುಲಾಮುಗಳಿಗೆ ಸಂಬಂಧಿಸಿದ ಸಾವುಗಳು ಮತ್ತು ಸೋಂಕುಗಳ ಘಟನೆಗಳಿಂದಾಗಿ ಜಾಗತಿಕ ಗಮನವು ಭಾರತದಲ್ಲಿನ ಔಷಧೀಯ ಕ್ಷೇತ್ರದತ್ತ ತಿರುಗಿದೆ. ಇದು ಅನೇಕ ರಾಷ್ಟ್ರಗಳಲ್ಲಿ ವರದಿಯಾಗಿದೆ. ಇಂತಹ ಕಳಪೆ ಮತ್ತು ಗುಣಮಟ್ಟವಲ್ಲದ ಔಷಧಿ ತಯ್ಯಾರಿಸುವ ಫಾರ್ಮಾ ಕಂಪನಿಗಳ ವಿರುದ್ದ ಕ್ರಮ ತೆಗೆದುಕೊಳ್ಳುವ ಬದಲಾಗಿ, ಚುನಾವಣಾ ಬಾಂಡ್ ಮೂಲಕ ಹಣ ಸ್ವೀಕರಿಸುವ ಮೂಲಕ ಇಂತಹ ಕಂಪನಿಗಳ ಜೊತೆ ರಾಜಿ ಮಾಡಿಕೊಳ್ಳಲಾಗುತ್ತಿದೆ ಎಂಬುದೇ ತೀವ್ರ ಕಳವಳಕಾರಿ ಸಂಗತಿಯಾಗಿದೆ. 

ಲೂಟಿಕೋರರಿಗೆ ಲೂಟಿ ಮಾಡಲು ಯಾವ ಮಾರ್ಗವಾದರೇನು? ಅಂತಹವರಿಗೆ ಸಹೃಧಯ ಎಂಬುದೇ ಇರುವುದಿಲ್ಲ.  ಅದನ್ನು ನಾವು, ರಸ್ತೆ, ರೈಲ್ವೇ, ವಿಮಾನ, ವಿದ್ಯುತ್, ನೀರು, ಶಿಕ್ಷಣ, ಆರೋಗ್ಯ ಇಂತಹ ಸಾರ್ವಜನಿಕ ಮೂಲಭೂತ ಸೌಕರ್ಯಗಳ ಕ್ಷೇತ್ರಗಳಲ್ಲಿ ಖಾಸಗಿಯವರಿಗೆ ಪಾಲು ನೀಡಿಯೋ, ಅಥವಾ ಸಂಪೂರ್ಣವಾಗಿ ಖಾಸಗಿಯವರಿಗೇ ಕೊಡುವ ಮೂಲಕವೋ ಆಳುವ ಬಂಡವಾಳಶಾಹಿ ರಾಜಕೀಯ ಪಕ್ಷಗಳು ‘ಕೊಡು ಕೊಳ್ಳುವ ವ್ಯವಹಾರ’ ಮಾಡುವುದನ್ನು ನೋಡಿದ್ದೇವೆ.  ಆದರೆ, ಬಿಜೆಪಿ ಪಕ್ಷವು ಜನರ ಆರೋಗ್ಯದ ವಿಷಯದಲ್ಲೂ, ಜನರು ಬಳಸುವ ಜೀವರಕ್ಷಕ ಔಷಧಿಗಳ ವಿಷಯದಲ್ಲೂ ಕೊಡು ಕೊಳ್ಳುವ ವ್ಯವಹಾರದ ಮೂಲಕ ಹಣ ಪಡೆದಿದೆ ಎಂಬುದು ಕಳವಳಕಾರಿ ಸಂಗತಿಯಾಗಿದೆ. ನಾವಿಲ್ಲಿ ಹೇಳಲು ಹೊರಟಿರುವುದು, ಔಷಧಿ ಕಂಪನಿಗಳಿಂದ ಚುನಾವಣಾ ಬಾಂಡ್ ಮೂಲಕ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ವಸೂಲಿ ಮಾಡಿರುವ ಬಗ್ಗೆ. ಇವುಗಳಲ್ಲಿ ಕನಿಷ್ಠ ಏಳು ಕಂಪನಿಗಳು ತಮ್ಮ ಚುನಾವಣಾ ಬಾಂಡ್ ಖರೀದಿಯ ಸಮಯದಲ್ಲಿ ಕಳಪೆ ಗುಣಮಟ್ಟದ ಔಷಧಿಗಳನ್ನು ಉತ್ಪಾದಿಸಿದ್ದಕ್ಕಾಗಿ ತನಿಖೆಗೆ ಒಳಪಟ್ಟಿವೆ ಎಂಬುದೇ ಮತ್ತಷ್ಟು ಕಳವಳಕ್ಕೆ ಕಾರಣವಾಗಿದೆ.

ಚುನಾವಣಾ ಬಾಂಡ್ ಯೋಜನೆಯ ಸಾಂವಿಧಾನಿಕತೆ ಮತ್ತು ಕಾನೂನುಬದ್ಧತೆ ಮತ್ತು ಭಾರತೀಯ ಪ್ರಜಾಪ್ರಭುತ್ವಕ್ಕೆ ಒಡ್ಡುವ ಅಪಾಯದ ವಿರುದ್ಧ, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್, Common Cause ಹಾಗೂ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ)- (CPIM) 2017ರಲ್ಲಿ ಸಲ್ಲಿಸಿದ ಅರ್ಜಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ನ ಐವರು ನ್ಯಾಯಾಧೀಶರ ಪೀಠ ಇತ್ತೀಚೆಗೆ ಚುನಾವಣಾ ಬಾಂಡ್ ಗಳ ವಿವರಗಳನ್ನು ಬಹಿರಂಗಗೊಳಿಸುವಂತೆ ಭಾರತೀಯ ಸ್ಟೇಟ್ ಬ್ಯಾಂಕ್ ಗೆ ಆದೇಶಿಸಿದೆ. ಅಸಂವಿಧಾನಿಕ ಚುನಾವಣಾ ಬಾಂಡ್ ವಿವರ ಬಹಿರಂಗಗೊಳ್ಳುತ್ತಿದ್ದಂತೆ ಬಿಜೆಪಿ ಮತ್ತು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಒಂದೊಂದೇ ಅವ್ಯವಹಾರಗಳು ಬಟಾ ಬಯಲಾಗುತ್ತಿವೆ. ಸುಪ್ರೀಂ ಕೋರ್ಟ್ ಆದೇಶದಂತೆ ಚುನವಾಣಾ ಬಾಂಡ್ ವ್ಯವಹಾರ ಸಂಪೂರ್ಣ ಬಯಲಾದರೆ ಬಿಜೆಪಿ ಮತ್ತು ಕೆಲವು ರಾಜಕೀಯ ಪಕ್ಷಗಳ ಇನ್ನಷ್ಟು ರಹಸ್ಯಗಳು ಬಯಲಾಗುತ್ತವೆ. ಈ ರೀತಿ ಬಯಲಾದ ಹೃಧಯಹೀನ ವ್ಯವಹಾರಗಳಲ್ಲಿ ಒಂದೆದ್ದರೆ, ಜೀವರಕ್ಷಕ ಔಷಧ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ಏಳು ಔಷಧಿ ತಯ್ಯಾರಕಾ ಸಂಸ್ಥೆಗಳು ಚುನಾವಣಾ ಬಾಂಡ್ ಗಳ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿವೆ ಎಂಬುದು.

ಇದನ್ನು ಓದಿ : ಬರಗಾಲ ನಿರ್ವಹಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ -ಅಶ್ವತ್ಥನಾರಾಯಣ

ಭಾರತದಲ್ಲಿನ 35 ಔಷಧೀಯ ಕಂಪನಿಗಳು ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಸುಮಾರು 1,000 ಕೋಟಿ ರೂಪಾಯಿಗಳನ್ನು ನೀಡಿವೆ ಎಂದು ಚುನಾವಣಾ ಆಯೋಗವು ಮಾರ್ಚ್ 14 ರಂದು ಬಿಡುಗಡೆ ಮಾಡಿದ ಅಂಕಿಅಂಶಗಳು ಬಹಿರಂಗಪಡಿಸಿದೆ. ಇವುಗಳಲ್ಲಿ ಕನಿಷ್ಠ ಏಳು ಕಂಪನಿಗಳು ಬಾಂಡ್ ಗಳನ್ನು ಖರೀದಿಸಿದಾಗ ಕಳಪೆ ಗುಣಮಟ್ಟದ ಔಷಧಗಳಿಗಾಗಿ ತನಿಖೆ ಎದುರಿಸುತ್ತಿದ್ದವು ಎಂಬುದು, ಜನರ ಆರೋಗ್ಯದ ವಿಷಯದಲ್ಲಿ ಇವರು ಎಷ್ಟೆಲ್ಲಾ ಆಟವಾಡುತ್ತಾರೆ ಎಂಬುದನ್ನು ತಿಳಿದಾಗ ಔಷಧಿಗಳ ಗುಣಮಟ್ಟದ ಬಗ್ಗೆ ಆತಂಕ ಉಂಟಾಗುತ್ತದೆ.

ಐಟಿ ದಾಳಿಗೊಳಗಾದ ಔಷಧಿ ಕಂಪನಿಗಳು ;

 ಯಶೋದಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ; ಇದು ಹೆಲ್ತ್‌ಕೇರ್ ಮತ್ತು ಫಾರ್ಮಾ ಬಾಂಡ್ ಮಾರುಕಟ್ಟೆಯಲ್ಲಿ ಮೊದಲ ಖರೀದಿದಾರರಾಗಿ ಹೊರಹೊಮ್ಮಿದೆ. ಇದು ತಲಾ 1 ಕೋಟಿ ರೂಪಾಯಿ ಮೌಲ್ಯದ 162 ಬಾಂಡ್‌ಗಳನ್ನು ಅಂದರೆ, ಒಟ್ಟು 162 ಕೋಟಿ ರೂ.ಗಳ ಬಾಂಡ್ ಗಳನ್ನು ಪಡೆದುಕೊಂಡಿದೆ. ಯಶೋದಾ ಆಸ್ಪತ್ರೆಯು ಡಿಸೆಂಬರ್ 2020 ರಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಪರಿಶೀಲನೆಯನ್ನು ಎದುರಿಸಿತು.

ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ : ಸಿಎನ್‌ಬಿಸಿ ಟಿವಿ18 ವರದಿ ಮಾಡಿದಂತೆ, ಡಾ. ರೆಡ್ಡೀಸ್ ಲ್ಯಾಬೊರೇಟರೀಸ್, ಪ್ರತಿ ರೂ. 1 ಕೋಟಿ ಮೌಲ್ಯದ 80 ಬಾಂಡ್‌ಗಳನ್ನು, ಒಟ್ಟು ರೂ. 80 ಕೋಟಿಗೆ ಖರೀದಿಸಿದೆ. ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ನವೆಂಬರ್ 2023 ರಲ್ಲಿ ತೆರಿಗೆ ಸಂಬಂಧಿತ ಕ್ರಮಗಳನ್ನು ಎದುರಿಸಿತು. ನಿರ್ದಿಷ್ಟವಾಗಿ ಹೇಳುವುದಾದರೆ, ಡಾ. ರೆಡ್ಡೀಸ್ ಲ್ಯಾಬೋರೇಟರೀಸ್‌ ನ ಡಾ. ಕೆ. ನಾಗೇಂದರ್ ರೆಡ್ಡಿ ತೆರಿಗೆ ವಂಚನೆಯ ಆರೋಪಕ್ಕೆ  ಗುರಿಯಾಗಿದ್ದರು.

ಡಿವಿಸ್ ಲ್ಯಾಬೊರೇಟರೀಸ್ : 2019 ರ ಫೆಬ್ರುವರಿ 14 ಮತ್ತು 18 ರ ನಡುವೆ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 132 ರ ಅಡಿಯಲ್ಲಿ ಪಟ್ಟಿಯಲ್ಲಿರುವ ಅಂಕಿಅಂಶಗಳಿಗೆ, ಔಷಧ ಸಂಸ್ಥೆ ಡಿವಿಸ್ ಲ್ಯಾಬೊರೇಟರೀಸ್, ಆದಾಯ ತೆರಿಗೆ ಇಲಾಖೆಯಿಂದ ಶೋಧ ಕಾರ್ಯಾಚರಣೆಯನ್ನು ಎದುರಿಸಿದೆ. ಇದು ರೂ. 55 ಕೋಟಿ ಮೌಲ್ಯದ ಬಾಂಡ್ ಗಳನ್ನು ಖರೀದಿಸಿದೆ.

ಅರಬಿಂದೋ ಫಾರ್ಮಾ ಲಿಮಿಟೆಡ್‌ :  ಇದು ರೂ. 50 ಕೋಟಿಗೂ ಹೆಚ್ಚು ದೇಣಿಗೆ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಕಂಪನಿಯ ನಿರ್ದೇಶಕ ಪಿ. ಶರತ್ ರೆಡ್ಡಿ ಅವರನ್ನು ನವೆಂಬರ್ 2022 ರಲ್ಲಿ ಬಂಧಿಸಿತ್ತು.

ಟೊರೆಂಟ್ ಫಾರ್ಮಾ : ಗುಜರಾತ್ ಮೂಲದ ಟೊರೆಂಟ್ ಫಾರ್ಮಾ 2019 ರ ಮೇ ಮತ್ತು ಅಕ್ಟೋಬರ್‌ನಲ್ಲಿ 12.5 ಕೋಟಿ ರೂಪಾಯಿ, 2021 ರ ಏಪ್ರಿಲ್‌ನಲ್ಲಿ 7.50 ಕೋಟಿ ರೂಪಾಯಿ, 2022 ರ ಜನವರಿ ಮತ್ತು ಅಕ್ಟೋಬರ್‌ನಲ್ಲಿ 25 ಕೋಟಿ ರೂಪಾಯಿ, 2023 ರ ಅಕ್ಟೋಬರ್‌ನಲ್ಲಿ 7 ಕೋಟಿ ರೂಪಾಯಿ ಮತ್ತು ಜನವರಿ 2024 ರಲ್ಲಿ 25.5 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಿದೆ.

ಈ ಕಂಪನಿ ಮೇ 2019 ರಿಂದ ಜನವರಿ 2024 ರ ನಡುವೆ ಒಟ್ಠರೆಯಾಗಿ ರೂ 77.5 ಕೋಟಿ ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಖರೀದಿಸಿದೆ.

ಕಂಪನಿಯ ಆಂಟಿಪ್ಲೇಟ್‌ಲೆಟ್ ಮೆಡಿಸಿನ್, ಡಿಪ್ಲಾಟ್-150, ಡ್ರಗ್ ಪರೀಕ್ಷೆಯಲ್ಲಿ ವಿಫಲವಾಗಿದೆ ಮತ್ತು 2018 ರಲ್ಲಿ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತವು ಕಳಪೆ ಗುಣಮಟ್ಟ ಎಂದು ಘೋಷಿಸಿತು.

ಅಕ್ಟೋಬರ್ 2019 ರಲ್ಲಿ, ರಕ್ತದೊತ್ತಡವನ್ನು ಕಡಿಮೆ ಮಾಡಲು ಬಳಸಲಾಗುವ ಟೊರೆಂಟ್ ಫಾರ್ಮಾದ ಔಷಧ ಲೋಸರ್ ಎಚ್ (Losar H), ಗುಜರಾತ್ ಆಹಾರ ಮತ್ತು ಔಷಧ ಆಡಳಿತವು ಕಳಪೆ ಗುಣಮಟ್ಟದ್ದಾಗಿದೆ ಎಂದು ಕಂಡುಬಂದಿದೆ. ಸೆಪ್ಟೆಂಬರ್ 2019 ರಲ್ಲಿ, ಯುನೈಟೆಡ್ ಸ್ಟೇಟ್ಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ತನ್ನ ಉತ್ಪಾದನಾ ಘಟಕದಲ್ಲಿ ಪುನರಾವರ್ತಿತ ಗುಣಮಟ್ಟ-ಸಂಬಂಧಿತ ವೈಫಲ್ಯಗಳಿಗಾಗಿ ಸಂಸ್ಥೆಗೆ ಎಚ್ಚರಿಕೆಯನ್ನು ನೀಡಿತು. ಅಂತಹ ಸೂಚನೆಯು ಭಾರತೀಯ ಅಧಿಕಾರಿಗಳಿಂದ ತಪಾಸಣೆಗೆ ಒಳಗಾಗುತ್ತದೆ ಮತ್ತು ಕಂಪನಿಯ ಉತ್ಪಾದನಾ ಪರವಾನಗಿಯನ್ನು ಅಮಾನತುಗೊಳಿಸಬಹುದು. ಆದರೆ, ಗುಜರಾತ್ ಸರ್ಕಾರ ಔಷಧ ಕಂಪನಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ಡಿಸೆಂಬರ್ 2021 ರಲ್ಲಿ, ಅದರ ಔಷಧಿ ನಿಕೋರಾನ್ ಎಲ್ವಿ (Nicoran LV), ಹೃದ್ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿತ್ತು, ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತವು ಪರೀಕ್ಷಿಸಿದಾಗ ಗುಣಮಟ್ಟವನ್ನು ಪೂರೈಸಲು ವಿಫಲವಾಗಿದೆ.

ಫೆಬ್ರವರಿ 2023 ರಲ್ಲಿ, ಅತಿಸಾರಕ್ಕೆ ಚಿಕಿತ್ಸೆ ನೀಡಲು ಬಳಸಲಾಗುವ ಅದರ ಲೋಪಮೈಡ್ (Lopamide) ಔಷಧವು ಕರಗುವಿಕೆಯ ಪರೀಕ್ಷೆ (dissolution test)ಯಲ್ಲಿ ವಿಫಲವಾಯಿತು ಮತ್ತು ಕಳಪೆ ಗುಣಮಟ್ಟದ್ದಾಗಿದೆ.

ಇದನ್ನು ಓದಿ : ಜೆಡಿಎಸ್ ಗೆ ‘ಬಿಗ್ ಶಾಕ್’ : ಇಂದು ‘ಪರಿಷತ್’ ಸದಸ್ಯತ್ವಕ್ಕೆ ಮರಿತೀಬ್ಬೆಗೌಡ ರಾಜೀನಾಮೆ

Cipla : 2018 ಮತ್ತು 2022 ರ ನಡುವೆ ಸಿಪ್ಲಾ ತನ್ನ ಔಷಧಿಗಳಿಗಾಗಿ ನಾಲ್ಕು ಶೋಕಾಸ್ ನೋಟಿಸ್‌ಗಳನ್ನು ಸ್ವೀಕರಿಸಿದೆ ಮತ್ತು 2019 ರಿಂದ ರೂ 39.2 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ.

ಆಗಸ್ಟ್ 2018 ರಲ್ಲಿ, ಅದರ ಆರ್‌ಸಿ ಕೆಮ್ಮು ಸಿರಪ್ ತಪಾಸಣೆಯ ಸಮಯದಲ್ಲಿ ಮಾನದಂಡಗಳನ್ನು ಪೂರೈಸಲು ವಿಫಲವಾಗಿದೆ. ಮುಂದಿನ ವರ್ಷ ರೂ. 14 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿತು.

ಜುಲೈ 2021 ರಲ್ಲಿ, ಅದರ ರೆಮೆಡಿಸಿವಿರ್ ಔಷಧಿ ಸಿಪ್ರೇಮಿ (Cipremi)ಗೆ ಎರಡು ಬಾರಿ ನೋಟಿಸ್‌ಗಳನ್ನು ಸ್ವೀಕರಿಸಿದೆ. ಹೆಟೆರೊ(Hetero)ದಂತೆಯೇ, ಸಿಪ್ರೆಮಿಯು ಅಗತ್ಯಕ್ಕಿಂತ ಕಡಿಮೆ ಪ್ರಮಾಣದ ರೆಮೆಡಿಸಿವಿರ್ ಅನ್ನು ಹೊಂದಿರುವುದು ಕಂಡುಬಂದಿದೆ. ನವೆಂಬರ್ 2022 ರಲ್ಲಿ ಸಿಪ್ಲಾ ರೂ 25.2 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿತು.

Intas Pharmaceutical : ಅಕ್ಟೋಬರ್ 2022 ರಲ್ಲಿ 20 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿತು. 2020 ರಲ್ಲಿ, ಕಂಪನಿಯ Enapril-5 ಟ್ಯಾಬ್ಲೆಟ್ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತವು (FDA) ಯ ಕರಗುವಿಕೆಯ ಪರೀಕ್ಷೆಯಲ್ಲಿ ವಿಫಲವಾಗಿದೆ.

IPCA ಲ್ಯಾಬೊರೇಟರೀಸ್ ಲಿಮಿಟೆಡ್ : IPCA Laboratories Limited ನವೆಂಬರ್ 2022 ಮತ್ತು ಅಕ್ಟೋಬರ್ 2023 ರ ನಡುವೆ ರೂ 13.5 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ. ಅಕ್ಟೋಬರ್ 2018 ರಲ್ಲಿ, ಅದರ ಪರಾವಲಂಬಿ ಔಷಧವಾದ ಲಾರಿಯಾಗೊ(Lariago) ಅಗತ್ಯಕ್ಕಿಂತ ಕಡಿಮೆ ಕ್ಲೋರೊಕ್ವಿನ್ ಫಾಸ್ಫೇಟ್ ಮಟ್ಟವನ್ನು ಹೊಂದಿತ್ತು ಮತ್ತು ಕಳಪೆ ಗುಣಮಟ್ಟದ್ದಾಗಿದೆ ಎಂದು ಕಂಡುಬಂದಿದೆ. ಮುಂಬೈ ಫುಡ್ ಅಂಡ್ ಡ್ರಗ್ಸ್ ಅಡ್ಮಿನಿಸ್ಟ್ರೇಷನ್ ಫ್ಲ್ಯಾಗ್ ಮಾಡಿದ ಔಷಧವನ್ನು ಐಪಿಸಿಎಯ ಡೆಹ್ರಾಡೂನ್ ಪ್ಲಾಂಟ್‌ನಲ್ಲಿ ತಯಾರಿಸಲಾಗಿದೆ.

Glenmark : 2022 ಮತ್ತು 2023 ರ ನಡುವೆ ಗ್ಲೆನ್‌ಮಾರ್ಕ್ (Glenmark) ತನ್ನ ಗುಣಮಟ್ಟವಿಲ್ಲದ ಔಷಧಿಗಳಿಗಾಗಿ ಐದು ನೋಟೀಸ್‌ಗಳನ್ನು ಸ್ವೀಕರಿಸಿದೆ. ಇವುಗಳಲ್ಲಿ ನಾಲ್ಕನ್ನು ಮಹಾರಾಷ್ಟ್ರ ಆಹಾರ ಮತ್ತು ಔಷಧಗಳ ಆಡಳಿತವು ತನ್ನ ರಕ್ತದೊತ್ತಡವನ್ನು ನಿಯಂತ್ರಿಸುವ ಔಷಧಿ ಟೆಲ್ಮಾವನ್ನು ಗುಣಮಟ್ಟವಲ್ಲ ಎಂದು ಫ್ಲ್ಯಾಗ್ ಮಾಡಿದೆ, ಹೆಚ್ಚಾಗಿ ಕರಗುವಿಕೆಯ ಪರೀಕ್ಷೆಯಲ್ಲಿ ವಿಫಲವಾಗಿದೆ. ಈ ಫಾರ್ಮಾಸ್ಯುಟಿಕಲ್ ಕಂಪನಿಯು ನವೆಂಬರ್ 2022 ರಲ್ಲಿ 9.75 ಕೋಟಿ ರೂಪಾಯಿ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಿದೆ.

Zydus Healthcare : ಗುಜರಾತ್ ಮೂಲದ ಝೈಡಸ್ ಹೆಲ್ತ್ಕೇರ್ 2022 ಮತ್ತು 2023 ರ ನಡುವೆ 29 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ಗಳನ್ನು ಖರೀದಿಸಿದೆ.

2021 ರಲ್ಲಿ, ಬಿಹಾರ ಡ್ರಗ್ ಈ ಕಂಪನಿಯು ತಯಾರಿಸಿದ ರೆಮ್ಡೆಸಿವಿರ್ (remdesivir) ಔಷಧಿಗಳ ಬ್ಯಾಚ್ ನಲ್ಲಿ ಬ್ಯಾಕ್ಟೀರಿಯಾ ಎಂಡೋಟಾಕ್ಸಿನ್ ಕುರುಹುಗಳು ಕಂಡುಬಂದ ನಂತರ “ಪ್ರಮಾಣಿತ ಗುಣಮಟ್ಟವಲ್ಲ” ಎಂದು ಘೋಷಿಸಿತು. ಹಲವಾರು ರೋಗಿಗಳು ಔಷಧಿಗಳಿಂದ ಪ್ರತಿಕೂಲ ಔಷಧ ಪ್ರತಿಕ್ರಿಯೆಗಳನ್ನು ಅನುಭವಿಸಿದ್ದಾರೆಂದು ವರದಿಯಾಗಿದೆ.

ಆದರೆ ಗುಜರಾತ್ ಡ್ರಗ್ ರೆಗ್ಯುಲೇಟರ್ ಹೆಚ್ಚಿನ ಪರೀಕ್ಷೆಗಾಗಿ ಈ ಬ್ಯಾಚ್ ಗಳ ಮಾದರಿಗಳನ್ನು ಸಂಗ್ರಹಿಸಲಿಲ್ಲ ಮತ್ತು Zydus ನ ಉತ್ಪಾದನಾ ಘಟಕದ ವಿರುದ್ಧ ಯಾವುದೇ ಕ್ರಮವನ್ನು ಪ್ರಾರಂಭಿಸಲಿಲ್ಲ.

ಹೆಟೆರೊ ಫಾರ್ಮಾ : 2021 ರಲ್ಲಿ ಹೆಟೆರೊ ಫಾರ್ಮಾ ಕೂಡ ಐಟಿ ಕ್ರಮವನ್ನು ಎದುರಿಸಿತು. ಇಲಾಖೆಯು ಗುಂಪಿನ ವಿರುದ್ಧದ ದಾಳಿಯ ಸಮಯದಲ್ಲಿ ರೂ. 550 ಕೋಟಿಗಳಷ್ಟು ಲೆಕ್ಕವಿಲ್ಲದ ಆದಾಯವನ್ನು ಕಂಡುಕೊಂಡ ನಂತರ ಈ ದಾಳಿ ನಡೆದಿದೆ. ಇಲ್ಲಿಯವರೆಗೆ, ಇಲಾಖೆಯು ದಾಳಿಯಲ್ಲಿ ರೂ. 142 ಕೋಟಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದೆ ಎಂದು CBDT ಅಕ್ಟೋಬರ್ 2021 ರಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.

ನ್ಯೂಸ್ ಲ್ಯಾಂಡ್ರಿ, ಸ್ಕ್ರಾಲ್ ಮತ್ತು ದಿ ನ್ಯೂಸ್ ಮಿನಿಟ್ ನ ಜಂಟಿ ಪ್ರಯತ್ನದಿಂದ ಸಂಗ್ರಹಿಸಿದ ಇತ್ತೀಚಿನ ವರದಿಯಲ್ಲಿ, ಹೆಟೆರೊ ಲ್ಯಾಬ್ಸ್ ಮತ್ತು ಹೆಟೆರೊ ಹೆಲ್ತ್ ಕೇರ್ ಏಪ್ರಿಲ್ 2022 ರಲ್ಲಿ ಒಟ್ಟು 39 ಕೋಟಿ ರೂಪಾಯಿಗಳ ಚುನಾವಣಾ ಬಾಂಡ್ ಗಳನ್ನು ಖರೀದಿಸಿದೆ ಎಂದು ತಿಳಿದುಬಂದಿದೆ.

COVID-19 ಚಿಕಿತ್ಸೆಗಾಗಿ ಕಳಪೆ ರೆಮ್‌ಡೆಸಿವಿರ್‌ ? 39 ಕೋಟಿ ರೂ ಬಾಂಡ್

ಹೆಟೆರೊ ಲ್ಯಾಬ್ಸ್ ಮತ್ತು ಹೆಟೆರೊ ಹೆಲ್ತ್ ಕೇರ್: ಹೈದರಾಬಾದ್ ಮೂಲದ ಹೆಟೆರೊ ಲ್ಯಾಬ್ಸ್ ಮತ್ತು ಹೆಟೆರೊ ಹೆಲ್ತ್ ಕೇರ್ ಕಂಪನಿಗೆ ಕಳಪೆ ಔಷಧಗಳಿಗಾಗಿ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತವು ಆರು ನೋಟಿಸ್‌ಗಳನ್ನು ನೀಡಿತು. ಅವುಗಳಲ್ಲಿ ಕನಿಷ್ಠ ಮೂರು COVID-19 ಚಿಕಿತ್ಸೆಗಾಗಿ ವ್ಯಾಪಕವಾಗಿ ಬಳಸಲಾಗುವ ಆಂಟಿವೈರಲ್ ಔಷಧವಾದ ರೆಮ್‌ಡೆಸಿವಿರ್‌ಗೆ ಸಂಬಂಧಿಸಿದೆ. ಆದಾಗ್ಯೂ ತೆಲಂಗಾಣ ನಿಯಂತ್ರಕ ಹೆಟೆರೊ ವಿರುದ್ಧ ಕ್ರಮಕೈಗೊಳ್ಳಲಿಲ್ಲ!

ಮಹಾರಾಷ್ಟ್ರ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ನಡೆಸಿದ ಪ್ರಯೋಗಾಲಯ ಪರೀಕ್ಷೆಯಲ್ಲಿ ರೆಮೆಡಿಸಿವಿರ್ ಮಾದರಿಯಲ್ಲಿ ಸ್ಪಷ್ಟ ದ್ರವದ ಬದಲಿಗೆ ಹಳದಿ ಬಣ್ಣದ ದ್ರವ ಕಂಡುಬಂದಿದೆ. ಜುಲೈ 2021 ರಲ್ಲಿ ಹೆಟೆರೊಗೆ ಈ ಕುರಿತು ಸೂಚನೆಯನ್ನು ನೀಡಲಾಯಿತು. ಎರಡನೇ ಮಾದರಿಯು ಅಗತ್ಯಕ್ಕಿಂತ ಕಡಿಮೆ ಪ್ರಮಾಣದ ಔಷಧವನ್ನು ಹೊಂದಿತ್ತು ಮತ್ತು ಅದೇ ವರ್ಷ ಅಕ್ಟೋಬರ್ನಲ್ಲಿ ಸೂಚನೆಯನ್ನು ನೀಡಲಾಯಿತು. ರಿಮೆಡೆಸಿವಿರ್ನ ಮೂರನೇ ಮಾದರಿಯು “ಪ್ರಮಾಣಿತ ಗುಣಮಟ್ಟದಲ್ಲಿಲ್ಲ” ಎಂದು ಕಂಡುಬಂದಿದೆ, ಡಿಸೆಂಬರ್ 2021 ರಲ್ಲಿ ಸೂಚನೆಯನ್ನು ನೀಡಲಾಯಿತು.

ಇಂತಹ ಉಲ್ಲಂಘನೆಯು ಕಂಪನಿಯ ಉತ್ಪಾದನಾ ಪರವಾನಗಿಯನ್ನು ಅಮಾನತುಗೊಳಿಸುವುದಕ್ಕೆ ಕಾರಣವಾಗಬಹುದು ಎಂದು ಮಹಾರಾಷ್ಟ್ರದ ಔಷಧಗಳ ಮಾಜಿ ಜಂಟಿ ಆಯುಕ್ತ ಓಂಪ್ರಕಾಶ್ ಸಾಧ್ವನಿ ಹೇಳಿದ್ದಾರೆ.

2021 ರಲ್ಲಿ ಹೆಟೆರೊದ ಇತರ ಎರಡು ಉತ್ಪನ್ನಗಳು ಸಹ ಗುಣಮಟ್ಟವಲ್ಲ ಎಂದು ಕಂಡುಬಂದಿವೆ: ಆಂಟಿಫಂಗಲ್ ಔಷಧ, ಇಟ್ಬೋರ್ ಕ್ಯಾಪ್ಸುಲ್ ಮತ್ತು ಮೊನೊಸೆಫ್, ಬ್ಯಾಕ್ಟೀರಿಯಾದ ಸೋಂಕಿಗೆ ಬಳಸಲಾಗುತ್ತದೆ.

ಆದರೆ ತೆಲಂಗಾಣ ನಿಯಂತ್ರಕ ಹೆಟೆರೊ ವಿರುದ್ಧ ಕ್ರಮಕೈಗೊಳ್ಳಲಿಲ್ಲ. ಮಹಾರಾಷ್ಟ್ರದಿಂದ ಕಳಪೆ ಗುಣಮಟ್ಟದ ಔಷಧಗಳ ಬ್ಯಾಚ್ ಅನ್ನು ಕಂಪನಿಯು ಹಿಂಪಡೆದಿದೆ.

ಕೊಡು ಕೊಳ್ಳುವ ವ್ಯವಹಾರ ;

“ನಾವು ಸಾಮಾನ್ಯವಾಗಿ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಔಷಧ ನಿಯಂತ್ರಕರಿಂದ ಸಡಿಲವಾದ ವಿಧಾನವನ್ನು ನೋಡುತ್ತೇವೆ. ರಾಜ್ಯ ಮಟ್ಟದಲ್ಲಿ ನಿಯಂತ್ರಕ ಪ್ರಕರಣಗಳಲ್ಲಿ ಕೆಲವು ರಾಜಿ ಮಾಡಿಕೊಳ್ಳಲು ಫಾರ್ಮಾ ಕಂಪನಿಗಳು ರಾಜಕೀಯ ಪಕ್ಷಗಳಿಗೆ ಹಣಕಾಸು ಒದಗಿಸಿದರೆ ಅದು ಆಶ್ಚರ್ಯವೇನಿಲ್ಲ” ಎಂದು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಎಥಿಕ್ಸ್ ನ ಸಂಪಾದಕ ಅಮರ್ ಜೆಸಾನಿ ಹೇಳುತ್ತಾರೆ.

ಔಷಧಿ ಉತ್ಪಾದಕ ಸಂಸ್ಥೆಗಳು ರಾಜಕೀಯ ಪಕ್ಷಗಳಲ್ಲಿ ನೂರಾರು ಕೋಟಿ ಹೂಡಿಕೆ ಮಾಡಿದ್ದಾರೆಅವರು ಪ್ರಜಾಪ್ರಭುತ್ವಚುನಾವಣೆ ಅಥವಾ ದಾನದ ಮೇಲಿನ ಪ್ರೀತಿಗಾಗಿ ಇದನ್ನು ಮಾಡಿದ್ದಾರೆಂದು ಯಾರೂ ನಂಬುವುದಿಲ್ಲ” ಎಂದು ಆಲ್ ಇಂಡಿಯಾ ಡ್ರಗ್ ಆಕ್ಷನ್ ನೆಟ್ವರ್ಕ್ನ ಭಾಗವಾಗಿರುವ ಕಾರ್ಯಕರ್ತ ಎಸ್ ಶ್ರೀನಿವಾಸನ್ ಹೇಳುತ್ತಾರೆಇದರರ್ಥರಾಜಕೀಯ ಪಕ್ಷಗಳು ಮತ್ತು ಕಂಪನಿಗಳ ನಡುವೆ ಕೊಡು ಕೊಳ್ಳುವ ವ್ಯವಹಾರ ಇದೆ.

ಇದನ್ನು ನೋಡಿ : ಚುನಾವಣಾ ಬಾಂಡ್‌ ಹಗರಣ| ಹೆದರಸಿ, ಬೆದರಿಸಿ ಹಣ ಪಡೆದ ಬಿಜೆಪಿJanashakthi Media

Donate Janashakthi Media

Leave a Reply

Your email address will not be published. Required fields are marked *